More

    ಶಕುಂತಲಾದೇವಿಗೆ 40 ವರ್ಷ ನಂತರ ಗಿನ್ನೆಸ್ ಗೌರವ

    ಬೆಂಗಳೂರು: ‘ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾಗಿದ್ದ ಬೆಂಗಳೂರು ಮೂಲದ ಶಕುಂತಲಾದೇವಿ ಅವರ ಸಾಧನೆಯೊಂದಕ್ಕೆ 40 ವರ್ಷಗಳ ನಂತರ ಗಿನ್ನೆಸ್ ದಾಖಲೆ ಪ್ರಮಾಣ ಪತ್ರ ಲಭಿಸಿದೆ. ಯಾದೃಚ್ಛಿಕವಾಗಿ ಆಯ್ಕೆ ಮಾಡಿದ 13ಅಂಕಿಗಳ 2 ಸಂಖ್ಯೆಗಳನ್ನು ಕೇವಲ 28 ಸೆಕೆಂಡ್​ಗಳಲ್ಲಿ ಗುಣಿಸಿದ ದಾಖಲೆ ಮಾಡಿದ್ದರ ಪ್ರಮಾಣ ಪತ್ರವನ್ನು ಲಂಡನ್ನಿನಲ್ಲಿರುವ ಶಕುಂತಲಾದೇವಿ ಪುತ್ರಿ ಅನುಪಮಾ ಬ್ಯಾನರ್ಜಿ ಅವರಿಗೆ ಗಿನ್ನೆಸ್ ಸಂಸ್ಥೆ ಪ್ರಮಾಣ ಪತ್ರ ಹಸ್ತಾಂತರಿಸಿ ಗೌರವಿಸಿದೆ.

    ಸಿನಿಮಾ ವೇಳೆ ವಿಷಯ ಪತ್ತೆ: ಶಕುಂತಲಾ ದೇವಿ 1980ರ ಜೂ.18ರಂದು ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಗಿನ್ನೆಸ್ ದಾಖಲೆ ನಿರ್ವಿುಸಿದ್ದರು. ಆಗ ಪುತ್ರಿ ಅನುಪಮಾಗೆ ಆಗ 10 ವರ್ಷ. ಶಕುಂತಲಾ ದೇವಿ ದೇಶ-ವಿದೇಶಗಳಲ್ಲಿ ಸಂಚರಿಸುತ್ತಿರುವಾಗೆಲ್ಲ ಈ ಗಿನ್ನೆಸ್ ದಾಖಲೆಯ ಮಾತುಗಳೇ ಚರ್ಚೆಯಾಗುತ್ತಿದ್ದವು. ಬಾಲಿವುಡ್ ನಟಿ ವಿದ್ಯಾ ಬಾಲನ್ ಮುಖ್ಯ ಭೂಮಿಕೆಯಲ್ಲಿರುವ ‘ಶಕುಂತಲಾ ದೇವಿ’ ಚಿತ್ರದ ಶೂಟಿಂಗ್ ವೇಳೆ ಅನುಪಮಾ ಜತೆ ಚಿತ್ರತಂಡ ಸಂವಾದ ನಡೆಸಿತ್ತು. ಆಗ ಗಿನ್ನೆಸ್ ದಾಖಲೆಯ ಪ್ರಮಾಣ ಪತ್ರದ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಇಲ್ಲಿಯವರೆಗೆ ಪ್ರಮಾಣಪತ್ರ ಲಭಿಸಿಲ್ಲ ಎಂದು ಪುತ್ರಿ ತಿಳಿಸಿದರು.

    ಇದನ್ನೂ ಓದಿ: ಬೆಂಗಳೂರು ಮೆಟ್ರೋ: ಭೂಸ್ವಾಧೀನ ಬಹುತೇಕ ಪೂರ್ಣ

    ಈವರೆಗೂ ಮುರಿಯದ ದಾಖಲೆ

    ಶಕುಂತಲಾದೇವಿಯವರ ದಾಖಲೆಯನ್ನು ಮುರಿಯುವುದಿರಲಿ, 40 ವರ್ಷದವರೆಗೂ ಅದನ್ನು ಸರಿಗಟ್ಟಲು ಯಾರಿಂದಲು ಸಾಧ್ಯವಾಗಿಲ್ಲ. ಇದು ಅವರ ಬೌದ್ಧಿಕ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಮಾನವ ಕಂಪ್ಯೂಟರ್​ಗೆ ಸಲ್ಲಬೇಕಿದ್ದ ಗೌರವ ದೀರ್ಘಕಾಲದಿಂದ ಬಾಕಿ ಉಳಿದಿತ್ತು. ಅವರನ್ನು ಗೌರವಿಸಲು ಅತ್ಯಂತ ಸಂತಸವಾಗುತ್ತದೆ ಎಂದು ಗಿನ್ನೆಸ್ ದಾಖಲೆಗಳ ಮುಖ್ಯ ಸಂಪಾದಕ ಕ್ರೇಗ್ ಗ್ಲೆಂಡೇ ಹೇಳಿದ್ದಾರೆ.

    ವಿದ್ಯಾಬಾಲನ್ ಹಾಗೂ ಅಮೆಜಾನ್ ಸಂಸ್ಥೆಯ ಪ್ರತಿನಿಧಿಗಳು ಗಿನ್ನೆಸ್ ಸಂಸ್ಥೆಯನ್ನು ಸಂರ್ಪಸಿದ್ದರು. ದಶಕಗಳ ಹಿಂದೆ ಗಿನ್ನೆಸ್ ದಾಖಲೆಗೆ ಪ್ರಮಾಣಪತ್ರ ನೀಡುವ ಸಂಪ್ರದಾಯ ಇರಲಿಲ್ಲ, ಹಾಗಾಗಿ ನೀಡಿಲ್ಲ ಎಂದು ತಿಳಿಸಿದ್ದರು. ಈಗಿನ ಸಂಪ್ರದಾಯಕ್ಕೆ ತಕ್ಕಂತೆ ಅಮೆಜಾನ್​ನಲ್ಲಿ ಚಿತ್ರ ಬಿಡುಗಡೆ ಯಾಗುವ ಒಂದು ದಿನ ಮೊದಲು ಪ್ರಮಾಣ ಪತ್ರವನ್ನು ನೀಡಿದೆ.

    ಇದನ್ನೂ ಓದಿ: ಸಿವಿಲ್ ಇಂಜಿನಿಯರ್ ನೇಮಕ ಪ್ರಕ್ರಿಯೆ ಗುಮಾನಿ

    ಅಮೋಘ ಪ್ರತಿಭೆ: ಬೆಂಗಳೂರಿನಲ್ಲಿ ಜನಿಸಿದ ಶಕುಂತಲಾ ದೇವಿ ತಂದೆ ಸರ್ಕಸ್​ನಲ್ಲಿ ಕೆಲಸ ಮಾಡುತ್ತಿದ್ದರು. 3 ವರ್ಷದ ಮಗಳ ಪ್ರತಿಭೆಯನ್ನು ಗುರುತಿಸಿದ್ದ ಅವರು, ಶಾಲೆಗೆ ಕಳುಹಿಸುವ ಬದಲು ರಸ್ತೆಗಳು, ಶಾಲೆಗಳು, ಸಭಾಂಗಣಗಳಲ್ಲಿ ಗಣಿತದ ಪ್ರದರ್ಶನ ಆಯೋಜಿಸಲು ಆರಂಭಿಸಿದರು. ನಂತರದಲ್ಲಿ ಲಂಡನ್ನಿಗೆ ತೆರಳಿದ ಶಕುಂತಲಾ, ವಿಶ್ವವಿಖ್ಯಾತ ಗಣಿತ ಸಂಸ್ಥೆಗಳು, ಗಣಿತಜ್ಞರ ಸಮ್ಮುಖದಲ್ಲಿ ಕ್ಲಿಷ್ಟಕರ ಸಮಸ್ಯೆಗಳನ್ನು ಯಾವುದೇ ಯಂತ್ರ, ಕಾಗದ ಇಲ್ಲದೆ ಬಗೆಹರಿಸಿ ಪ್ರಸಿದ್ಧಿ ಪಡೆದರು.

    ಇದನ್ನೂ ಓದಿ: ವಿಶ್ವ ಫ್ರೆಂಡ್​ಷಿಪ್​ ಡೇ: ನಿರ್ಮಾಪಕರೇ ಬೆಸ್ಟ್ ಫ್ರೆಂಡ್

    1977ರಲ್ಲಿ ಬರೆದ ‘ದಿ ವರ್ಲ್ಡ್ ಆಫ್ ಹೋಮೊ ಸೆಕ್ಷುವಲ್ಸ್’ ಪುಸ್ತಕ ಸಾಕಷ್ಟು ಚರ್ಚೆ, ವಿವಾದಕ್ಕೆ ಕಾರಣವಾಯಿತು. ಜ್ಯೋತಿಷಿಯಾಗಿಯೂ ಅನೇಕ ಕೃತಿ ರಚನೆ ಮಾಡಿದ್ದ ಶಕುಂತಲಾ 1980ರಲ್ಲಿ ಮುಂಬೈ ಹಾಗೂ ಆಗಿನ ಆಂಧ್ರ ಪ್ರದೇಶದ ಮೇಡಕ್​ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿದರು. ಮೇಡಕ್​ನಲ್ಲಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಸ್ಪರ್ಧೆ ಮಾಡಿದ್ದರು, ಆದರೆ ಸೋಲುಂಡರು. ನಂತರದಲ್ಲಿ ಬೆಂಗಳೂರಿನಲ್ಲಿ ನೆಲೆಸಿ, 2013ರ ಏ.21ರಂದು 83ನೇ ವಯಸ್ಸಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

    ಪಶುವೈದ್ಯಕೀಯ ಇಲಾಖೆಗೆ ಪ್ರ’ಭಾರ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts