More

    ಕರೊನಾ ವಿರುದ್ಧ ನಮ್ಮೇಲ್ಲರ ಹೋರಾಟ

    ಶಹಾಪುರ: ಕರೊನಾ ವೈರಸ್ ವಿರುದ್ಧದ ಹೋರಾಟ ನಮ್ಮೆಲ್ಲರ ಕರ್ತವ್ಯವಾಗಿದ್ದು, ಪ್ರತಿಯೊಬ್ಬರು ಲಾಕ್ಡೌನ್ ಮತ್ತು ಪರಸ್ಪರ ಅಂತರದ ಲಕ್ಷ್ಮಣ ರೇಖೆ ಮೀರದೆ, ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಪ್ರಸ್ತುತ ಅಗತ್ಯವಾಗಿದೆ ಎಂದು ಆರ್ಎಸ್ಎಸ್ ಪ್ರಮುಖ ಸುಧೀರ ಚಿಂಚೋಳಿ ತಿಳಿಸಿದರು.

    ನಗರದ ಟಿಎಪಿಸಿಎಮ್ಎಸ್ ಆವರಣದಲ್ಲಿ ಕಾಮರ್ಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಮಾತನಾಡಿದ ಅವರು, ಸೇವಾಭಾಗದ ಪ್ರಕಲ್ಪವಾದ ಸೇವಾಭಾರತಿ ಟ್ರಸ್ಟ್ನಿಂದ ಗ್ರಾಮೀಣ ಮತ್ತು ನಗರ ಸೇರಿದಂತೆ ಅವಶ್ಯಕತೆ ಇರುವವರಿಗೆ ಮಾಸ್ಕ್ಗಳು ಮತ್ತು ಸ್ಯಾನಿಟೈಸರ್ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳ ವ್ಯವಸ್ಥೆ ಕಲ್ಪಿಸಿದೆ. ಅವುಗಳ ಸದುಪಯೋಗ ಸಾರ್ಥಕವಾಗಿ ಆಗಬೇಕಿದೆ ಎಂದರು.

    ಈಗಾಗಲೇ ಕ್ವಾರಂಟೈನ್ನಲ್ಲಿರುವವರಿಗೆ ಪ್ರತಿಯೊಂದನ್ನು ತಲುಪಿಸುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಬಡಾವಣೆಗಳಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಮುರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ನಲ್ಲಿರುವವರಿಗೆ ಮಾಸ್ಕ್ ವಿತರಿಸುವ ಮೂಲಕ ತಹಸೀಲ್ದಾರ್ ಜಗನ್ನಾಥರೆಡ್ಡಿ ಚಾಲನೆ ನೀಡಿದರು. ಸಂಘದ ಕಾರ್ಯವಾಹ ಬಸವರಾಜ ರೋಜಾ, ಸಂಗಮೇಶ ಜೋಗೂರ, ಸಿದ್ದಲಿಂಗಣ್ಣ ಶಿರವಾಳ, ಗೌರೀಶ, ಅರವಿಂದ ಉಪ್ಪಿನ, ಸಂಗಮೇಶ ಮುತ್ತಿನ, ಮಹಾಂತೇಶ, ಶ್ರೀನಿವಾಸ, ಕೊನೇರಾಚಾರ್ಯ ಸಗರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts