More

    ಕಾಡುತ್ತಿರುವ ಚಿಂತೆ ಇದೊಂದೆ: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನವೇ ಸೋಲೊಪ್ಪಿಕೊಂಡ್ರಾ ವಾಕರ್​ ಯೂನಿಸ್​?!

    ನವದೆಹಲಿ: ಇನ್ನು ಕೆಲವೇ ಕ್ಷಣಗಳಲ್ಲಿ ಇಡೀ ಜಗತ್ತು ಎದುರು ನೋಡುತ್ತಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಪಾಕಿಸ್ತಾನ ತಂಡದ ಮಾಜಿ ನಾಯಕ ವಾಕರ್​ ಯೂನಿಸ್, ತಮ್ಮ ತಂಡದ ಸ್ಟಾರ್​ ಬೌಲರ್​ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

    ಸದ್ಯಕ್ಕೆ ಪಾಕ್​ ತಂಡದಲ್ಲಿ ಶಾಹೀನ್​ ಶಾ ಅಫ್ರಿದಿ ಶ್ರೇಷ್ಠ ಬೌಲರ್​ ಎನಿಸಿಕೊಂಡಿದ್ದಾರೆ. ಆದರೆ, ವಿಶ್ವಕಪ್‌ನಲ್ಲಿ ಅವರ ಪ್ರದರ್ಶನ ಉತ್ತಮವಾಗಿಲ್ಲ. 16 ಓವರ್‌ ಎಸೆದಿರುವ ಅಫ್ರಿದಿ, 103 ರನ್‌ ನೀಡಿ ಕೇವಲ ಎರಡು ವಿಕೆಟ್‌ ಮಾತ್ರ ಕಬಳಿಸಿದ್ದಾರೆ. ಹೀಗಾಗಿ ಶಾಹೀನ್​ ಉತ್ತಮವಾಗಿ ಬೌಲಿಂಗ್​ ಮಾಡುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಶಾಹೀನ್​ ಉತ್ತಮ ಲಯದಲ್ಲಿ ಬೌಲಿಂಗ್​ ಮಾಡುತ್ತಿಲ್ಲ. ಅದಕ್ಕೆ ಬೆರಳಿಗೆ ಆಗಿರುವ ಗಾಯದ ಸಮಸ್ಯೆ ಕಾರಣ ಎಂದು ನನಗೆ ಅನಿಸುತ್ತಿಲ್ಲ. ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಪಂದ್ಯದಿಂದ ಬೌಲಿಂಗ್​ನಲ್ಲಿ ಉತ್ತಮ ಲಯ ಕಂಡುಕೊಳ್ಳಲು ಮತ್ತು ತಮ್ಮ ಫಾರ್ಮ್​ಗೆ ಮರಳು ಶಾಹೀನ್​ ಹೋರಾಡುತ್ತಿದ್ದಾರೆ. ಇದೇ ಚಿಂತೆ ನನಗೆ ಕಾಡುತ್ತಿದೆ ಎಂದು ವಾಕರ್​ ಯೂನಿಸ್​ ಹೇಳಿದ್ದಾರೆ.

    ಇದನ್ನೂ ಓದಿ: ‘ಅತ್ಯಂತ ಸ್ಮರಣೀಯ ಕ್ಷಣಗಳು’… ಜಗೇಶ್ವರ ಧಾಮ, ಪಾರ್ವತಿ ಕುಂಡಕ್ಕೆ ಭೇಟಿ ನೀಡಿದ ಅನುಭವ ಹಂಚಿಕೊಂಡ ಪ್ರಧಾನಿ ಮೋದಿ

    ಟೀಮ್​ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನವೇ ವಾಕರ್​ ಯೂನಿಸ್​ ಈ ಮಾತನ್ನು ಹೇಳಿರುವುದನ್ನು ನೋಡಿದರೆ ಪರೋಕ್ಷವಾಗಿ ಸೋಲನ್ನು ಒಪ್ಪಿಕೊಂಡರಾ ಎಂಬ ಚರ್ಚೆಯಾಗುತ್ತಿದೆ. ಏಕೆಂದರೆ, ಪಾಕ್​ ತಂಡದಲ್ಲಿ ಸ್ಟಾರ್​ ಬೌಲರ್​ ಅಂತ ಇರುವುದೇ ಶಾಹೀನ್​. ಏಕೆಂದರೆ, ಅವರ ಈ ಹಿಂದಿ ಪ್ರದರ್ಶನ ಅತ್ಯದ್ಭುತವಾಗಿದೆ.

    ವಿಶ್ವಕಪ್​ಗೂ ಮುನ್ನ ನಡೆದ ಏಷ್ಯಾ ಕಪ್​ನಲ್ಲಿ ಇಂಡೋ-ಪಾಕ್​ ಎರಡು ಬಾರಿ ಮುಖಾಮುಖಿಯಾದವು. ಇದರಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಇನ್ನೊಂದು ಪಂದ್ಯದಲ್ಲಿ ಭಾರತ, ಪಾಕ್​ ವಿರುದ್ಧ ಅಮೋಘ ಜಯ ದಾಖಲಿಸಿತು. ಇನ್ನು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿವೆ ಉಭಯ ತಂಡಗಳಿಗೆ ಇಂದು ನಡೆಯಲಿರುವ ಪಂದ್ಯ ಮೂರನೇ ಪಂದ್ಯವಾಗಿದೆ ಮತ್ತು ಸಾಂಪ್ರದಾಯಿಕ ಎದುರಾಳಿಗಳ ಮೊದಲ ಪಂದ್ಯವಾಗಿದೆ. ಹೀಗಾಗಿ ಹ್ಯಾಟ್ರಿಕ್​ ಗೆಲುವು ಯಾರಿಗೆ ಲಭಿಸಲಿದೆ ಎಂದು ನೋಡಬೇಕಿದೆ.

    ತಂಡಗಳು
    ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್.

    ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಂ. (ಏಜೆನ್ಸೀಸ್​)

    ಇತಿಹಾಸ ಮರುಕಳಿಸಲಿದೆ ಎಂದ ಶೋಯೆಬ್​ ಅಖ್ತರ್​: ಭಾರತೀಯರ ಟ್ರೋಲ್​ಗೆ ಬೆದರಿ ಪೋಸ್ಟ್​ ಡಿಲೀಟ್​

    ಇಂಡೋ-ಪಾಕ್​ ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನ ವಿಶೇಷ ಮನವಿ ಮಾಡಿದ ಸೂರ್ಯಕುಮಾರ್​ ಯಾದವ್​!

    ಇಂದು ಭಾರತ-ಪಾಕ್​ ಕ್ರಿಕೆಟ್​ ಯುದ್ಧ; ಅಜೇಯ ದಾಖಲೆ ಮುಂದುವರಿಸುವ ತವಕದಲ್ಲಿ ರೋಹಿತ್​ ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts