More

    ಚರಂಡಿ, ರಾಜಕಾಲುವೆ ಸ್ವಚ್ಛತೆ

    ರೋಣ: ಮುಂಗಾರು ಮಳೆ ಆರಂಭವಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರೋಣ ಪುರಸಭೆಯಿಂದ ಪಟ್ಟಣದ ಎಲ್ಲ ಚರಂಡಿ, ರಾಜಕಾಲುವೆಗಳ ಸ್ವಚ್ಛತಾ ಕಾರ್ಯ ನಡೆದಿದೆ. 8 ವರ್ಷಗಳಿಂದ ಸ್ವಚ್ಛತೆ ಕಾಣದ ಪಟ್ಟಣದ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲು ರೋಣ ಪುರಸಭೆಯಿಂದ ಈ ಹಿಂದೆ 44 ಲಕ್ಷ ರೂಪಾಯಿಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಕಳುಹಿಸಲಾಗಿತ್ತು. ಅದಕ್ಕೆ ಅವರು ಅನುಮತಿ ನೀಡಿರಲಿಲ್ಲ. ಹೀಗಾಗಿ, ಪ್ರತಿ ಮಳೆಗಾಲದಲ್ಲಿ ಹೂಳು ತುಂಬಿದ ರಾಜಕಾಲುವೆ ನೀರು ಸುತ್ತಮುತ್ತಲಿನ ಮನೆಗಳಿಗೆ ನುಗ್ಗಿ ಆವಾಂತರ ಸೃಷ್ಟಿಯಾಗುತ್ತಿತ್ತು. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್ ಆಡಳಿತ ಮಂಡಳಿಯೊಂದಿಗೆ ರ್ಚಚಿಸಿ ಗದಗ ನಗರಸಭೆ, ನರೇಗಲ್, ಗಜೇಂದ್ರಗಡ ಪಪಂನ ಜೆಸಿಬಿ, ಹಿಟಾಚಿಗಳ ಮೂಲಕ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಪಟ್ಟಣದ ವಿವಿಧ ಬಡಾವಣೆ ಮೂರು ಕಿಮೀ ವ್ಯಾಪ್ತಿಯಲ್ಲಿನ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.

    ರೋಣ ವಾರ್ಡ್ ನಂ. 1ರ ಹೊರಪೇಟಿ ಓಣಿಯಲ್ಲಿನ ರಾಜಕಾಲುವೆಯನ್ನು 8 ವರ್ಷಗಳಿಂದ ಸ್ವಚ್ಛಗೊಳಿಸದ ಕಾರಣ ಅದರಲ್ಲಿ ಹೂಳು ತುಂಬಿ ಪ್ರತಿ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗಿ ನೂರಾರು ಕುಟುಂಬಗಳು ಅಹೋರಾತ್ರಿ ಜಾಗರಣೆ ಮಾಡುವ ಪರಿಸ್ಥಿತಿಯಿತ್ತು. ಈ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರಿಗೂ ಮನವಿ ಮಾಡಿ ಸಾಕಾಗಿ ರಾಜಿನಾಮೆ ನೀಡಲು ಸಿದ್ಧನಾಗಿದ್ದೆ. ಆದರೆ, ಪುರಸಭೆ ಮುಖ್ಯಾಧಿಕಾರಿ ಭರವಸೆ ನೀಡಿದಂತೆ ರಾಜಕಾಲುವೆ ಸ್ವಚ್ಛಗೊಳಿಸುತ್ತಿದ್ದಾರೆ.

    | ಮಲ್ಲಯ್ಯ ಮಹಾಪುರುಷಮಠ, ರೋಣ ಪುರಸಭೆ ಸದಸ್ಯ

    ರಾಜಕಾಲುವೆಗಳನ್ನು ಸ್ವಚ್ಛಗೊಳಿಸದ ಕಾರಣ ಹೂಳು ತುಂಬಿ ಪಾಚಿ ಬೆಳೆದಿತ್ತು. ಈ ಹಿಂದೆ ಸ್ವಚ್ಛಗೊಳಿಸಲು ಪುರಸಭೆಯಿಂದ 44 ಲಕ್ಷ ರೂಪಾಯಿಯ ಕ್ರಿಯಾಯೋಜನೆ ಕಳಿಸಿದ್ದರು. ಅದನ್ನು ಜಿಲ್ಲಾಧಿಕಾರಿ ಒಪ್ಪಿರಲಿಲ್ಲ. ಮಳೆಗಾಲ ಶುರುವಾದರೆ ರಾಜಕಾಲುವೆಗಳ ಮೂಲಕ ಮನೆಗಳಿಗೆ ನೀರು ನುಗ್ಗಿ ದೊಡ್ಡ ಆವಾಂತರವೇ ಸೃಷ್ಟಿಯಾಗುತ್ತಿತ್ತು. ಇದನ್ನು ತಪ್ಪಿಸಲು ಗದಗ ನಗರಸಭೆ, ನರೇಗಲ್, ಗಜೇಂದ್ರಗಡ ಪಪಂನ ಜೆಸಿಬಿ, ಹಿಟಾಚಿಗಳನ್ನು ತರಿಸಿ ಎಲ್ಲ ರಾಜಕಾಲುವೆ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ.

    | ನೂರುಲ್ಲಾಖಾನ್, ರೋಣ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts