More

    ನಮ್ಮ ಜಿಲ್ಲೆಯಲ್ಲೂ ಆಕ್ಸಿಜನ್ ಇನ್ನೇನು ಮುಗಿಯುತ್ತಿದೆ, ಇವತ್ತು ರಾತ್ರಿಗೆ ಏನಾಗುತ್ತೋ?!: ಆತಂಕ ವ್ಯಕ್ತಪಡಿಸಿದ ಸಚಿವ..

    ಮಂಡ್ಯ: ಚಾಮರಾಜನಗರದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಒಬ್ಬರ ಹಿಂದೊಬ್ಬರಂತೆ ಒಬ್ಬರು ಪ್ರಾಣ ಬಿಟ್ಟಿರುವ ಬೆನ್ನಿಗೆ ರಾಜ್ಯದ ಮತ್ತೊಂದು ಜಿಲ್ಲೆಯಲ್ಲೂ ಆಮ್ಲಜನಕ ಕೊರತೆ ಉಂಟಾಗಿದ್ದು, ಮುಂದೇನು ಎಂದು ಸಚಿವರೇ ಆತಂಕ ವ್ಯಕ್ತಪಡಿಸಿದ್ದಾರೆ.

    ಹೀಗೆ ಆಮ್ಲಜನಕದ ತೀವ್ರ ಕೊರತೆ ಮಂಡ್ಯ ಜಿಲ್ಲೆಯಲ್ಲಿ ಕಾಣಿಸಿದ್ದು, ‘ಆಕ್ಸಿಜನ್ ಕೊರತೆಯೇ ನಮ್ಮ ಮೇಜರ್ ಪ್ರಾಬ್ಲಂ’ ಎಂದು ಸಚಿವ ಕೆ.ಸಿ. ನಾರಾಯಣ ಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಇಲ್ಲಿ ಎಲ್ಲಿಯೂ ಆಕ್ಸಿಜನ್ ಸಿಗುತ್ತಿಲ್ಲ. ಸದ್ಯ ಇರುವ ಆಕ್ಸಿಜನ್ ಇಂದು ಸಂಜೆಯವರೆಗಷ್ಟೇ ಸಾಕಾಗುವಷ್ಟಿದ್ದು, ಇವತ್ತು ರಾತ್ರಿ ಹಾಗೂ ನಾಳೆಗೆ ಕಷ್ಟ ಎಂಬಂತಿದೆ ಎಂದು ಅವರು ಹೇಳಿದ್ದಾರೆ.

    ನಮ್ಮ ಜಿಲ್ಲೆಯಲ್ಲಿ ಆಕ್ಸಿಜನ್ ಅಭಾವ ಎದುರಾಗಿದ್ದು, ಅದಕ್ಕಾಗಿ ಖುದ್ದು ಆಕ್ಸಿಜನ್ ಫ್ಯಾಕ್ಟರಿಗೆ ಹೋಗುತ್ತಿದ್ದೇನೆ. ಮೈಸೂರಿನಲ್ಲೇ ಉಳಿದುಕೊಂಡು ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡುತ್ತೇನೆ. ಎಷ್ಟು ಸಾಧ್ಯವೋ ಅಷ್ಟು ಆಕ್ಸಿಜನ್ ಮಂಡ್ಯಕ್ಕೆ ಕಳುಹಿಸುತ್ತೇನೆ. ಇಲ್ಲ ಎಂದು ಕೈಕಟ್ಟಿ ಕುಳಿತರೆ ಸಮಸ್ಯೆ ಬಿಗಡಾಯಿಸಲಿದೆ ಎಂದಿರುವ ಅವರು ಚಾಮರಾಜನಗರದ ಸ್ಥಿತಿ ಮಂಡ್ಯಕ್ಕೆ ಬರದಂತೆ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದಾರೆ.

    ಚಾಮರಾಜನಗರದಲ್ಲಿ ಸತ್ತದ್ದು 24 ಅಲ್ಲ, 34 ಮಂದಿ! ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟಿದ್ದಾರೆ…

    ಸ್ಮಶಾನದಲ್ಲೂ ಹೌಸ್​ಫುಲ್ ಬೋರ್ಡ್! ಶವಗಳ ಹೊತ್ತು ಕ್ಯೂ ನಿಂತ ಆಂಬುಲೆನ್ಸ್

    ಕರೊನಾ ಹೊಡೆತಕ್ಕೆ ಒಂದೇ ತಿಂಗಳಲ್ಲಿ ಕೆಲಸ ಕಳೆದುಕೊಂಡವರೆಷ್ಟು ಗೊತ್ತೇ? ನಾಲ್ಕು ತಿಂಗಳಿಂದ ಏರುತ್ತಲೇ ನಿರುದ್ಯೋಗ ಪ್ರಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts