More

    ಹೆಜಮಾಡಿ ಒಳರಸ್ತೆಗೂ ಟೋಲ್, ಸರ್ವೀಸ್ ಬಸ್‌ಗಳ ಪ್ರತಿಭಟನೆ

    ಪಡುಬಿದ್ರಿ: ಹೆಜಮಾಡಿ ಒಳ ರಸ್ತೆಗಳಲ್ಲಿ ಸಂಚರಿಸುವ ಖಾಸಗಿ ಸರ್ವೀಸ್ ಬಸ್‌ಗಳಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಕ್ರಮ ಖಂಡಿಸಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿ ಗುರುವಾರ ಪ್ರತಿಭಟನೆ ನಡೆಸಿದ ಪರಿಣಾಮ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.

    ಫೆ.15ರಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ ಎಲ್ಲ ವಾಹನಗಳಿಗೆ ವಿನಾಯಿತಿ ರದ್ದುಗೊಳಿಸಿದ ಪರಿಣಾಮ ಹೆಜಮಾಡಿ ಹಳೇ ಎಂಬಿಸಿ ರಸ್ತೆಯಲ್ಲಿ ಸಂಚರಿಸುವ ಸರ್ವೀಸ್ ಬಸ್‌ಗಳಿಂದಲೂ ನವಯುಗ ಟೋಲ್ ಕಂಪನಿ ಗುರುವಾರ ಟೋಲ್ ಸಂಗ್ರಹ ಆರಂಭಿಸಿತು. ಇದನ್ನು ವಿರೋಧಿಸಿದ ಕೆಲ ಖಾಸಗಿ ಸರ್ವೀಸ್ ಬಸ್ ಮಾಲೀಕರು ಟೋಲ್ ನೀಡದೆ ಬಸ್‌ಗಳನ್ನು ಹಳೇ ಎಂಬಿಸಿ ರಸ್ತೆ ಟೋಲ್ ಕೇಂದ್ರ ಆಸುಪಾಸಿನಲ್ಲೇ ಪ್ರಯಾಣಿಕರನ್ನು ಇಳಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ ಹಿಂದಿನಿಂದ ಬಂದ ಹಲವಾರು ಬಸ್‌ಗಳನ್ನು ತಡೆದು ಪ್ರಯಾಣಿಕರನ್ನು ಇಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅತಂತ್ರರಾದರು.

    ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್‌ಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಈ ಮಧ್ಯೆ ಬಸ್ ಮಾಲೀಕರು ಜಿಲ್ಲಾಧಿಕಾರಿ ಹಾಗೂ ಸಂಸದರಿಗೆ ಮನವಿ ಸಲ್ಲಿಸಲು ತೆರಳಿದ್ದರು. ಬಸ್‌ನವರ ಈ ವರ್ತನೆಯನ್ನು ಕೆಲ ಪ್ರಯಾಣಿಕರು ಖಂಡಿಸಿದರು. ಪ್ರತಿಭಟನೆ ನೆಪದಲ್ಲಿ ಮುನ್ಸೂಚನೆ ನೀಡದೆ ಬಸ್ ನಿಲುಗಡೆ ಮಾಡಿರುವುದರ ವಿರುದ್ಧ ಸಾರಿಗೆ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಹೆಜಮಾಡಿ ಒಳ ರಸ್ತೆಯಲ್ಲಿ ಸುಮಾರು 60 ಸರ್ವೀಸ್ ಬಸ್‌ಗಳು ಸಂಚರಿಸುತ್ತಿವೆ. ಮುಖ್ಯ ಟೋಲ್‌ನಲ್ಲಿ ಸುಂಕ ವಂಚಿಸಿ ಹಳೇ ಎಂಬಿಸಿ ರಸ್ತೆಯಲ್ಲಿ ನೂರಾರು ವಾಹನಗಳು ತೆರಳುತ್ತಿದ್ದುದರಿಂದ ಆ ರಸ್ತೆಗೂ ಟೋಲ್‌ಗೇಟ್ ನಿರ್ಮಿಸಲಾಗಿತ್ತು. ಎಲ್ಲ ವಾಹನಗಳು ಈ ರಸ್ತೆಯಲ್ಲಿ ಟೋಲ್ ಪಾವತಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts