More

    ದೇವರ ಸೇವೆ ಜತಗೆ ದೇಶ ಸೇವೆ ಮಾಡಿ

    ಎನ್.ಆರ್.ಪುರ: ಸಹ ಭೋಜನದ ಮೂಲಕ ಎಲ್ಲ ಸಮುದಾಯವನ್ನು ಒಗ್ಗೂಡಿಸಲು ಬ್ರಹ್ಮ ಶ್ರೀ ನಾರಾಯಣ ಗುರುಗಳು ಶ್ರಮಿಸಿದ್ದರು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
    ಶನಿವಾರ ಬಿ.ಎಚ್.ಕೈ ಮರದ ನಾರಾಯಣಗುರು ಸಮುದಾಯ ಭವನದಲ್ಲಿ ತಾಲೂಕು ನಾರಾಯಣ ಗುರು ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ ಬ್ರಹ್ಮ ಶ್ರೀನಾರಾಯಣ ಗುರು ವಿಚಾರಗೋಷ್ಠಿ, ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದುಳಿದವರು ಸಂಘಟಿತರಾಗಿ, ಶಿಕ್ಷಣ ಪಡೆಯರಿ, ಉದ್ಯಮ ಪ್ರಾರಂಭಿಸಿ ಎಂದು ಕರೆ ನೀಡಿದ್ದರು ಎಂದು ತಿಳಿಸಿದರು.
    ದೇವರ ಸೇವೆ ಮಾಡಿದರೆ ಕೇವಲ ಒಬ್ಬರಿಗೆ ಮಾತ್ರ ಲ ಸಿಗಲಿದೆ. ಆದರೆ, ದೇಶ ಸೇವೆ ಮಾಡಿದರೆ ಸಾವಿರಾರು ಜನರಿಗೆ ಉಪಯೋಗವಾಗಲಿದೆ ಎಂದಿದ್ದರು. ಮದ್ಯಪಾನ ನಿಷೇಧಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಇಲ್ಲಿನ ನಾರಾಯಣಗುರು ಸಮುದಾಯ ಭವನಕ್ಕೆ ಅನುದಾನ ನೀಡಿದ್ದು, ಮುಂದೆ ಶೃಂಗೇರಿ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ಎಲ್ಲ ಸಮುದಾಯ ಭವನಕ್ಕೆ ಅನುದಾನ ನೀಡಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಮಾತನಾಡಿ, ನಾರಾಯಣಗುರುಗಳು ಕೇರಳದಲ್ಲಿ ಜನಿಸಿದರು. ಇಂದು ಕೇರಳ ರಾಜ್ಯವು ಸಾಕ್ಷರತೆಯಲ್ಲಿ ಶೇ. 98 ರಷ್ಟು ಸಾಧನೆ ಮಾಡಿದ್ದರೆ ಅದಕ್ಕೆ ನಾರಾಯಣ ಗುರುಗಳ ಪ್ರಯತ್ನ ಕಾರಣ. ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂಬುವುದು ನಾರಾಯಣ ಗುರುಗಳ ಆಶಯವಾಗಿತ್ತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts