More

    ಸೆನ್ಸೆಕ್ಸ್ ವಹಿವಾಟು 400ಕ್ಕೂ ಹೆಚ್ಚು ಅಂಶ ಏರಿಕೆಯೊಂದಿಗೆ ಶುರು; ಮತ್ತೆ 12,100 ಅಂಶಕ್ಕೇರಿದ ನಿಫ್ಟಿ

    ಮುಂಬೈ: ಕೊರೊನಾ ವೈರಸ್ ಆತಂಕದಿಂದ ಕಳೆದ ಎರಡು ಮೂರು ದಿನಗಳಿಂದ ಕುಸಿತ ಕಂಡಿದ್ದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ 400ಕ್ಕೂ ಹೆಚ್ಚು ಅಂಶ ಏರಿಕೆಯನ್ನು ಮಂಗಳವಾರದ ವಹಿವಾಟಿನ ಆರಂಭದಲ್ಲಿ ದಾಖಲಿಸಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಮತ್ತೆ 12,100 ಅಂಶಕ್ಕೇರಿ ವಹಿವಾಟು ಮುಂದುವರಿಸಿದೆ.

    ಮಂಗಳವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್ 405.61 ಅಂಶ ಏರಿಕೆ ದಾಖಲಿಸಿ 41,385.23ರಲ್ಲೂ, ನಿಫ್ಟಿ 66.85 ಅಂಶ ಏರಿಕೆ ದಾಖಲಿಸಿ 12,031.50 ಯಲ್ಲೂ ದಿನದ ವಹಿವಾಟು ಮುಂದುವರಿಸಿವೆ. ಇದೇ ವೇಳೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 184.58 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 735.79 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

    ಸೆನ್ಸೆಕ್ಸ್​ ಪಟ್ಟಿಯಲ್ಲಿ ಟಾಟಾ ಸ್ಟೀಲ್​, ಏಕ್ಸಿಸ್ ಬ್ಯಾಂಕ್, ಅಲ್ಟ್ರಾ ಟೆಕ್​ ಸಿಮೆಂಟ್, ಎಸ್​ಬಿಐ, ಇಂಡಸ್​ಇಂಡ್​ ಬ್ಯಾಂಕ್​, ಐಟಿಸಿ, ಐಸಿಐಸಿಐ ಬ್ಯಾಂಕು ಷೇರುಗಳು ಲಾಭ ದಾಖಲಿಸಿಕೊಂಡು ಮುನ್ನುಗ್ಗಿವೆ. ಇದೇ ವೇಳೆ ಟಿಸಿಎಸ್ ಷೇರು ನಷ್ಟ ಅನುಭವಿಸಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts