More

    ಸೆನ್ಸೆಕ್ಸ್ 320ಕ್ಕೂ ಹೆಚ್ಚು ಅಂಶ, ನಿಫ್ಟಿ ಹೆಚ್ಚು ಕಡಿಮೆ 100 ಅಂಶ ಏರಿಕೆ

    ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ)ಯ ಸೂಚ್ಯಂಕ ಸೆನ್ಸೆಕ್ಸ್​ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50 ಏರಿಕೆ ದಾಖಲಿಸಿದ ಗುರುವಾರದ ವಹಿವಾಟನ್ನು ಕೊನೆಗೊಳಿಸಿದೆ.

    ಸೆನ್ಸೆಕ್ಸ್​ 320.62 ಅಂಶ ಏರಿಕೆ ದಾಖಲಿಸಿ ಶೇಕಡ 0.78 ಏರಿಕೆಯೊಂದಿಗೆ 41,626.64ರಲ್ಲಿ ವಹಿವಾಟು ಮುಗಿಸಿದೆ. ಇದೇ ವೇಳೆ ನಿಫ್ಟಿ 50 99.70 ಅಂಶ ಏರಿಕೆ ಅಥವಾ ಶೇಕಡ 0.82 ಏರಿಕೆಯೊಂದಿಗೆ 12,282.20ರಲ್ಲಿ ದಿನದ ವಹಿವಾಟು ಪೂರ್ಣಗೊಳಿಸಿದೆ.

    ಸೆನ್ಸೆಕ್ಸ್​ ಪಟ್ಟಿಯಲ್ಲಿ ಅಲ್ಟ್ರಾಟೆಕ್​ ಸಿಮೆಂಟ್​ ಷೇರುಗಳು ಟಾಪ್ ಗೇನರ್ ಆಗಿ ಕಾಣಿಸಿದ್ದು, ಶೇಕಡ 4.37 ಏರಿಕೆ ಕಂಡಿದೆ. ಟಾಟಾ ಸ್ಟೀಲ್​, ಇಂಡಸ್​​ಇಂಡ್ ಬ್ಯಾಂಕ್​, ಎಲ್​ಆ್ಯಂಡ್​ಟಿ, ರಿಲಯನ್ಸ್​ ಇಂಡಸ್ಟ್ರೀಸ್​, ಎಸ್​ಬಿಐ, ಎಚ್​ಡಿಎಫ್​ಸಿ, ಎಚ್​ಡಿಎಫ್​ಸಿ ಬ್ಯಾಂಕ್​, ಏಕ್ಸಿಸ್​ ಬ್ಯಾಂಕ್​, ಒಎನ್​ಜಿಸಿ, ಐಟಿಸಿಗಳು ಕೂಡ ಏರಿಕೆ ದಾಖಲಿಸಿವೆ.

    ಇನ್ನೊಂದೆಡೆ, ಬಜಾಜ್ ಆಟೋ, ಟಿಸಿಎಸ್​, ಇನ್​ಫೋಸಿಸ್​, ಎನ್​ಟಿಪಿಸಿ, ನೆಸ್ಲೆ ಇಂಡಿಯಾ, ಕೊಟಾಕ್ ಬ್ಯಾಂಕ್, ಹೀರೋ ಮೋಟೋಕಾರ್ಪ್​ ಷೇರುಗಳು ಗರಿಷ್ಠ ಶೇಕಡ 0.89 ಇಳಿಕೆ ಕಂಡಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts