More

    ಹೊಸ ಎತ್ತರಕ್ಕೆ ಸೆನ್ಸೆಕ್ಸ್; 12,700 ದಾಟಿದ ನಿಫ್ಟಿ

    ಮುಂಬೈ: ಸತತ ಎಂಟನೇ ದಿನದ ವಹಿವಾಟಿನಲ್ಲೂ ಷೇರುಪೇಟೆ ಏರಿಕೆ ದಾಖಲಿಸಿದ್ದು, ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ದಿನದ ವಹಿವಾಟಿನ ಕೊನೆಗೆ 316.02 ಅಂಶ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 118.05 ಅಂಶ ಏರಿಕೆ ದಾಖಲಿಸಿವೆ.

    ಸೆನ್ಸೆಕ್ಸ್ ದಿನದ ವಹಿವಾಟಿ ವೇಳೆ ಸಾರ್ವಕಾಲಿಕ ಗರಿಷ್ಠ ಮಟ್ಟ 43,708.47 ಅಂಶ ತಲುಪಿ ದಿನದ ಅಂತ್ಯಕ್ಕೆ 43,593.67 ಅಂಶದಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿ ಇಂಟ್ರಾ ಡೇ ವಹಿವಾಟಿನಲ್ಲಿ 12,769.75 ಅಂಶ ತಲುಪಿ, ದಿನದ ಅಂತ್ಯಕ್ಕೆ 12,749.15 ಅಂಶದಲ್ಲಿ ವಹಿವಾಟು ಕೊನೆಗೊಳಿಸಿದೆ.

    ಸೆನ್ಸೆಕ್ಸ್ ಪಟ್ಟಿಯಲ್ಲಿ ಟಾಟಾ ಸ್ಟೀಲ್​ ಷೇರು ಶೇಕಡ 8 ಲಾಭಾಂಶ ಗಳಿಸಿ ಟಾಪ್ ಗೇನರ್​ ಆಗಿತ್ತು. ಉಳಿದಂತೆ, ಏಕ್ಸಿಸ್​ ಬ್ಯಾಂಕ್​, ಬಜಾಜ್​ ಫಿನ್​ಸರ್ವ್​, ಐಟಿಸಿ, ಇನ್​ಫೋಸಿಸ್​, ಸನ್ ಫಾರ್ಮಾ, ಕೊಟಾಕ್ ಬ್ಯಾಂಕ್​, ಒಎನ್​ಜಿಸಿ, ಅಲ್ಟ್ರಾಟೆಕ್​ ಸಿಮೆಂಟ್ ಷೇರುಗಳು ಲಾಭಾಂಶಗಳಿಸಿವೆ. ಇನ್ನೊಂದೆಡೆ ಇಂಡಸ್​ಇಂಡ್ ಬ್ಯಾಂಕ್​, ರಿಲಯನ್ಸ್ ಇಂಡಸ್ಟ್ರೀಸ್​, ಟೈಟಾನ್​, ಏಷ್ಯನ್ ಪೇಂಟ್ಸ್, ಎಚ್​ಡಿಎಫ್​ಸಿ ಬ್ಯಾಂಕ್​ ಷೇರುಗಳು ನಷ್ಟ ಅನುಭವಿಸಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts