More

    ಸೆನ್ಸೆಕ್ಸ್ 153 ಅಂಶ ಕುಸಿತ, ನಿಫ್ಟಿ 12,100ಕ್ಕಿಂತ ಕೆಳಕ್ಕೆ

    ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಗುರುವಾರದ ವಹಿವಾಟಿನಲ್ಲಿ 150ಕ್ಕೂ ಹೆಚ್ಚು ಅಂಶ, ನಿಫ್ಟಿ 40ಕ್ಕೂ ಹೆಚ್ಚು ಅಂಶ ಕುಸಿತದೊಂದಿಗೆ ದಿನದ ವಹಿವಾಟು ಮುಗಿಸಿವೆ. ರಿಲಯನ್ಸ್​ ಇಂಡಸ್ಟ್ರೀಸ್, ಟಿಸಿಎಸ್​, ಎಚ್​ಡಿಎಫ್​ಸಿ ಬ್ಯಾಂಕ್​, ಎಚ್​ಯುಎಲ್​ ಷೇರುಗಳ ಬೆಲೆಯಲ್ಲಿ ಹೆಚ್ಚಿನ ಕುಸಿತ ಕಂಡ ಕಾರಣ ಹೆಚ್ಚು ನಷ್ಟವಾಗಿದೆ.

    ಮೂವತ್ತು ಷೇರುಗಳ ಸೆನ್ಸೆಕ್ಸ್​ ದಿನದ ವಹಿವಾಟಿನ ಅಂತ್ಯಕ್ಕೆ 152.88 ಅಂಶ (0.37%) ಕುಸಿತ ಕಂಡು 41,170.12ರಲ್ಲೂ, ನಿಫ್ಟಿ 45.05 ಅಂಶ (0.37%) ಕುಸಿತ ಕಂಡು 12,080.85 ರಲ್ಲಿ ದಿನದ ವಹಿವಾಟು ಮುಗಿಸಿವೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಏಷ್ಯನ್ ಪೇಂಟ್ಸ್, ಎಚ್​ಯುಎಲ್​, ಟಿಸಿಎಸ್​, ಟೆಕ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್​, ಅಲ್ಟ್ರಾ ಟೆಕ್​ ಸಿಮೆಂಟ್​ ಷೇರುಗಳು ಭಾರಿ ನಷ್ಟಕ್ಕೆ ಒಳಗಾಗಿವೆ. ಇನ್ನೊಂದೆಡೆ, ಇಂಡಸ್​ಇಂಡ್ ಬ್ಯಾಂಕ್​, ಟಾಟಾ ಸ್ಟೀಲ್​, ಎಸ್​ಬಿಐ, ಪವರ್​ಗ್ರಿಡ್​, ಒಎನ್​ಜಿಸಿ ಷೇರುಗಳು ಲಾಭಗಳಿಸಿವೆ.

    ಕೊರೊನಾ ವೈರಸ್ ಆತಂಕ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದ್ದು, ಹೂಡಿಕೆದಾರರನ್ನು ಆತಂಕದಲ್ಲಿ ಕೆಡವಿದೆ. 2,100ಕ್ಕೂ ಹೆಚ್ಚು ಜನ ಇದರಿಂದಾಗಿ ಮೃತಪಟ್ಟಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ. ಇದು ಪೇಟೆಯ ಮೇಲೂ ಆಂತಕದ ಕರಿಛಾಯೆ ಆವರಿಸುವಂತೆ ಮಾಡಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts