More

    ದುಬೈನಲ್ಲಿ 75 ವರ್ಷ ಮೇಲ್ಪಟ್ಟ ನಾಗರಿಕರ ಕ್ರೀಡಾಕೂಟ; ನೆರವಿನ ನಿರೀಕ್ಷೆಯಲ್ಲಿ ಹಿರಿಯ ಕ್ರಿಡಾಪಟು

    ಧಾರವಾಡ: ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ಶಿವಪ್ಪ ಎಂ. ಸಲಕಿ ಅವರು ಜು. 31ರಿಂದ ಆ. 6ರವರೆಗೆ ದುಬೈನಲ್ಲಿ ನಡೆಯಲಿರುವ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಜನಪ್ರತಿನಿಧಿಗಳು ಮತ್ತು ಕ್ರೀಡಾ ಪ್ರೋತ್ಸಾಹಕರು ಇಂಥ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಕಲ್ಪಿಸಿ ಪ್ರೋತ್ಸಾಹಿಸಬೇಕು ಎಂದು ಕ್ರೀಡಾ ಪ್ರೋತ್ಸಾಹಕ ಈಶ್ವರ ಶಿವಳ್ಳಿ ಹೇಳಿದರು.
    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಮರೇವಾಡ ಗ್ರಾಮದ 77 ವರ್ಷದ ಕ್ರೀಡಾಪಟು ಶಿವಪ್ಪ ಸಲಕಿ ಅವರು, ಮಧ್ಯಪ್ರದೇಶದ ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. 75 ವರ್ಷ ಮೇಲ್ಪಟ್ಟ ನಾಗರಿಕರ ಕ್ರೀಡಾಕೂಟದಲ್ಲಿ 400 ಮೀ., 800 ಮೀ. ಮತ್ತು 1,500 ಮೀ. ಓಟದಲ್ಲಿ ಪಾಲ್ಗೊಳ್ಳುವರು. 16ನೇ ವಯಸ್ಸಿನಲ್ಲೇ ಓಟದ ಗೀಳು ಹಚ್ಚಿಕೊಂಡ ಇವರು, ಈಗಲೂ ಪ್ರತಿದಿನ ಓಟ, ಯೋಗವನ್ನು ಮುಂದುವರಿಸಿದ್ದಾರೆ. ಬೆಳಗ್ಗೆ 4 ಗಂಟೆಗೆ ಎದ್ದು 10 ಕಿ.ಮೀ. ಓಟವನ್ನು ಪೂರ್ಣಗೊಳಿಸುತ್ತಾರೆ ಎಂದರು.
    ರಾಜ್ಯಮಟ್ಟದ 26ಕ್ಕೂ ಅಧಿಕ ರಾಷ್ಟ್ರಮಟ್ಟದ ವಿವಿಧ 20 ಕ್ರೀಟಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಮಲೇಷ್ಯಾ, ನೇಪಾಳದಲ್ಲಿ ಜರುಗಿದ ಹಿರಿಯ ನಾಗರಿಕರ ಅಂತರಾಷ್ಟ್ರಿಯ ಕ್ರೀಡಾಕೂಟಗಳಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದ್ದು ಇವರ ಹಿರಿಮೆ. ಈ ಮೂಲಕ ಧಾರವಾಡ ತಾಲೂಕಿನ ಗೌರವವನ್ನು ಹೆಚ್ಚ್ಚಿಸಿದ್ದಾರೆ ಎಂದರು.
    ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ ನಿವೃತ್ತರಾಗಿದ್ದಾರೆ. ತಮ್ಮ ಅಲ್ಪ ಮೊತ್ತದ ಪಿಂಚಣಿ ಹಣವನ್ನು  ಓಟದ ಹವ್ಯಾಸಕ್ಕಾಗಿ ಉಪಯೋಗಿಸುತ್ತ ಬಂದಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts