More

    ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

    ಬೆಂಗಳೂರು: ಜನರೇ, ನಿಮ್ಮ ಪ್ರಾಣ ನಿಮ್ಮ ಕೈಯಲ್ಲೇ ಇದೆ. ಕರೊನಾ ದೃಢಪಟ್ಟರೂ ಆಸ್ಪತ್ರೆಯಲ್ಲಿ ನಿಮ್ಮನ್ನು ಸೇರಿಸಿಕೊಳ್ಳೋದು ಅನುಮಾನ! ಅಷ್ಟೇ ಅಲ್ಲ, ಕರೊನಾ ಟೆಸ್ಟ್​ ಮಾಡದಂತೆ ವೈದ್ಯರಿಗೆ ಜಿಲ್ಲಾಧಿಕಾರಿ ಮೂಲಕ ಮೇಲಿಂದ ಸೂಚನೆ ಬಂದಿದೆ.

    ಸೋಂಕು ದೃಢಪಟ್ಟ ಪೇದೆಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಿಬ್ಬಂದಿಗೆ ಕರೊನಾ ಟೆಸ್ಟ್ ಮಾಡಿಸಲೆಂದು ಒಂದು ಇಡೀ ದಿನ ಪ್ರಯತ್ನಿಸಿ ಸೋತ ಪೊಲೀಸ್​ ಹಿರಿಯ ಅಧಿಕಾರಿಗೆ ಸ್ವತಃ ವೈದ್ಯರೇ ಈ ಬಗ್ಗೆ ಹೇಳಿದ್ದಾರೆ. ರಾಜ್ಯದ ಜನತೆಯೇ ಬೆಚ್ಚಿಬೀಳೋ ಕರಾಳ ಸತ್ಯವನ್ನು ಪೊಲೀಸ್​ ಅಧಿಕಾರಿಯೇ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ.

    ಇದನ್ನೂ ಓದಿರಿ video/ ಕರೊನಾ ವಾರ್ಡಿನಲ್ಲಿ ‘ನರಕ’ ದರ್ಶನ, ಶೌಚಗೃಹದ ನೀರನ್ನೇ ಕುಡಿದ ಸೋಂಕಿತರು!

    ”ನಿನ್ನೆ(ಶುಕ್ರವಾರ) ನನ್ನ ಅಧೀನದಲ್ಲಿರುವ ಕಂಪ್ಲಿ ಪೊಲೀಸ್ ಠಾಣೆಯ ಪೇದೆಗೆ ಕೋವಿಡ್​ ಪಾಸಿಟಿವ್​ ಬಂದಿದೆ. ಸಂಜೆ 5 ಗಂಟೆಗೆ ವಿಷಯ ಗೊತ್ತಾದರೂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಇಂದು(ಶನಿವಾರ) ಬೆಳಗ್ಗೆ 10 ಗಂಟೆಯಾದರೂ ಜಿಲ್ಲಾಡಳಿತ ಆಂಬುಲೆನ್ಸ್​ ಕಳುಹಿಸಲಿಲ್ಲ. ಆ ಸಮಯದಲ್ಲಿ ಮಾನಸಿಕವಾಗಿ ನೊಂದ ಸೋಂಕಿತ ಪೇದೆ, ‘ಸಾರ್ ನನಗೆ ಮನೇಲಿ ಇರಲು ಸಾಧ್ಯವಿಲ್ಲ. ನಮ್ಮವರು ಮತ್ತು ಅಕ್ಕಪಕ್ಕದವರು ನನ್ನನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇಲ್ಲಿಂದ ಬೇಗ ಆಸ್ಪತ್ರೆಗೆ ಶಿಫ್ಟ್ ಮಾಡಿಸಿ’ ಎಂದು ಅಂಗಲಾಚುತ್ತಿದ್ದ. ನನ್ನ ಸಿಬ್ಬಂದಿ ಹೇಳಿದ ಮಾತು ನನಗೆ ಮನಕಲುಕುತ್ತಿದೆ”.

    ”ನಾನು ರಾತ್ರಿಯಿಂದ ಬೆಳಗ್ಗೆವರೆಗೂ ಸಾಧ್ಯವಾದ ಎಲ್ಲ ವೈದ್ಯರನ್ನು ಸಂಪರ್ಕಿಸಿದರೂ ಪ್ರಯತ್ನಗಳು ವಿಫಲವಾಗುತ್ತಿತ್ತು. ಒಬ್ಬ ಪೊಲೀಸ್​ಗೆ ಸಮಯಕ್ಕೆ ಸರಿಯಾಗಿ ಕೋವಿಡ್​ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗದ ಅಸಹಾಯಕತೆ ನಮ್ಮದು. ಹೇಗೋ ಆಂಬುಲೆನ್ಸ್ ವ್ಯವಸ್ಥೆ ಆಯ್ತು. ಅದೂ ಸುಮಾರು 16 ಗಂಟೆಗಳ ನಂತರ”.

    ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ”ಇಂದು ನಮ್ಮ ಕಂಪ್ಲಿ ಪೊಲೀಸ್ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ. ಸೋಂಕಿತ ಪೇದೆ ಜತೆಗೆ ಕೆಲಸ ಮಾಡಿದ ಇತರ ಸಿಬ್ಬಂದಿ, ಪಿಎಸ್​ಐ, ಸಿಪಿಐಗಳು ಆತಂಕಕ್ಕೆ ಒಳಗಾಗಿದ್ದಾರೆ. ಕೋವಿಡ್​ ಟೆಸ್ಟ್​ ಮಾಡಿಸಿಕೊಳ್ಳಲು ಹೋದ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ನಿರಾಕರಿಸಿದ್ದಾರೆ. ಪಿಎಸ್ಐ ಮತ್ತು ಸಿಪಿಐಗಳು ಮನವಿ ಮಾಡಿದರೂ ಪರೀಕ್ಷೆ ಮಾಡಲಿಲ್ಲ. ‘ನಿಮಗೆಲ್ಲ ರೋಗದ ಲಕ್ಷಣಗಳು ಇಲ್ಲ’ ಎಂಬುದು ಡಾಕ್ಟರ್ ವಾದ. ಆದ್ರೆ, ಕರೊನಾ ಪಾಸಿಟಿವ್​ ಬಂದ ನಮ್ಮ ಸಿಬ್ಬಂದಿಗೂ ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ!’

    ”ಅನಿವಾರ್ಯವಾಗಿ ನಾನೇ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದರೂ ನಮ್ಮ ಸಿಬ್ಬಂದಿಗೆ ಟೆಸ್ಟ್ ಮಾಡಲು ಆಸ್ಪತ್ರೆಯವರು ಒಪ್ಪಲಿಲ್ಲ. ಕೊನೆಗೆ ಒಬ್ಬ ಡಾಕ್ಟರ್​ ಮೂಲಕ ಅಲ್ಲಿನ ಕರಾಳ ಸತ್ಯ ಹೊರಬಂತು. ಅದೇನು ಗೊತ್ತಾ? ‘ಈಗ ನಮ್ಮ ಜಿಲ್ಲೆಯ ಯಾವುದೇ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್​ಗಳು ಖಾಲಿ ಇಲ್ಲ. ಆದ್ದರಿಂದ ಟೆಸ್ಟ್ ಮಾಡ ಬೇಡಿ ಎಂದು ಮೇಲಿನಿಂದಲೇ ಆದೇಶ ಬಂದಿದೆ. ಜಿಲ್ಲಾಧಿಕಾರಿ ಅವರೇ ಹೇಳಿದ್ದಾರೆ’ ಎಂದು ಆ ಡಾಕ್ಟರ್​ ತಿಳಿಸಿದರು. ಇದು ಎಲ್ಲ ಜಿಲ್ಲೆ ಹಾಗೂ ಬೆಂಗಳೂರು ಪರಿಸ್ಥಿತಿ ಕೂಡ. ಕೊನೆಗೆ ವಾದ-ವಿವಾದದ ನಂತರ ನನ್ನೊಬ್ಬನಿಗೆ ಕರೊನಾ ಟೆಸ್ಟ್ ಮಾಡಿದರು. ಉಳಿದವರನ್ನು ಹಾಗೆ ಕಳಿಸಿದರು”.

    ಇದನ್ನೂ ಓದಿರಿ ಕರೊನಾಗೆ ಹೆದರಿ ಬಸ್​ನಲ್ಲೇ ನೇಣುಬಿಗಿದುಕೊಂಡು ಪೊಲೀಸ್ ಕಾನ್ಸ್​ಟೇಬಲ್​ ಆತ್ಮಹತ್ಯೆ

    ”ಮಿತ್ರರೇ, ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ. ಯಾವುದಕ್ಕೂ ನಿಮ್ಮ ಜಾಗ್ರತೆಯಲ್ಲಿ ನೀವು ಇರೋದು ಒಳ್ಳೆಯದು. ಮೊನ್ನೆ ಒಬ್ಬ ಪೊಲೀಸ್ ಅಧಿಕಾರಿಯೊಬ್ಬರು ಕೋವಿಡ್​ ಆಸ್ಪತ್ರೆ ಒಳಗಿರುವ ತೊಂದರೆ ಬಗ್ಗೆ ಹೇಳಿಕೊಂಡಿದ್ದರು. ಇಂದು ನನ್ನ ಅನುಭವ ಹಂಚಿಕೊಂಡಿದ್ದೇನೆ”.

    ”ಸರ್ಕಾರದ ಕೆಲ ಅಂಗಸಂಸ್ಥೆಗಳೇ ಟೆಸ್ಟ್ ಮಾಡಲು ಹಿಂದೇಟು ಹಾಕಲು ಕಾರಣ ಏನು? ಎಂದು ಕೇಳಿದರೆ ಎಲ್ಲ ಅಯೋಮಯ. ಈಗಿನ ವ್ಯವಸ್ಥೆಯಂತೆ ಮುಂದುವರಿದರೆ ಆಗಸ್ಟ್ ಕೊನೇ ವಾರದಲ್ಲಿ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಸರಿಯಾಗಿ ಟೆಸ್ಟ್ ಮಾಡದೆ ಮುಚ್ಚಿ ಹಾಕುವ ಪ್ರಯತ್ನ ನಡೆದರೆ ಮುಂದೆ ದೇವರೇ ಗತಿ. ಮೋದಿ ಕಂಪ್ಯೂಟರ್, ಯಡಿಯೂರಪ್ಪ ಮೀಟಿಂಗ್, ಅಶೋಕ್ ಹೇಳಿಕೆ ಕೇಳಿಕೊಂಡು ನೀವು ಧೈರ್ಯವಾಗಿದ್ದರೆ ಪರಿಸ್ಥಿತಿ ನೆಟ್ಟಗಾಗುವುದಿಲ್ಲ. ಆದ್ದರಿಂದ ಜಾಗ್ರತೆ ವಹಿಸಿ ನಿಮ್ಮ ಹಾಗೂ ನಿಮ್ಮ ಕುಟುಂಬದ ರಕ್ಷಣೆ ಮಾಡಿಕೊಳ್ಳಿ”.

    ”ನನಗೆ ಒಂದು ನಂಬಿಕೆ ಇತ್ತು. ಕನಿಷ್ಠ ಪೊಲೀಸರಿಗಾದರೂ ಉತ್ತಮ ಚಿಕಿತ್ಸೆ ಸಿಗುತ್ತೆ ಎಂದು. ಅದು ಕೂಡ ಈಗ ಸುಳ್ಳಾಗಿದೆ. ನಮ್ಮ ಅಧಿಕಾರ, ಹುದ್ದೆ, ಸ್ಥಾನಮಾನ ಯಾವುದೂ ಸಹಾಯಕ್ಕೆ ಬರುವುದಿಲ್ಲ. ಕೇವಲ ಚಪ್ಪಾಳೆ ಗಿಟ್ಟಿಸಿದರೆ ಸಾಲದು. ಬದುಕಬೇಕು. ಆದ್ದರಿಂದ ನಿಮ್ಮ ರಕ್ಷಣೆಯನ್ನು ನೀವೇ ಮಾಡಿಕೊಳ್ಳಬೇಕು”. ಇದು ಕಂಪ್ಲಿಯ ಪೊಲೀಸ್​ ಹಿರಿಯ ಅಧಿಕಾರಿಯೊಬ್ಬರ ನೋವಿನ ನುಡಿ. ಜಾಲತಾಣದಲ್ಲಿ ಅವರ ಕಹಿ ಅನುಭವದ ಕಥೆ ಹರಿದಾಡುತ್ತಿದೆ. ವಾಸ್ತವ ಅರ್ಥ ಮಾಡಿಕೊಂಡು ಜನತೆ ಕೋವಿಡ್​ ಬಗ್ಗೆ ಸ್ವಯಂ ಜಾಗ್ರತೆ ವಹಿಸಬೇಕಿದೆ.

    ಇದನ್ನೂ ಓದಿರಿ ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

    ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts