More

    ಡಿಎಸ್​ಪಿ ದೇವಿಂದರ್​ ಸಿಂಗ್​ ಅಮಾನತು; ಮೂವರು ಉಗ್ರರಿಗೆ ಮನೆಯಲ್ಲೇ ಆಶ್ರಯ ಕೊಟ್ಟಿದ್ದರಂತೆ ಪೊಲೀಸ್​ ಅಧಿಕಾರಿ..!

    ಶ್ರೀನಗರ: ಜಮ್ಮು-ಕಾಶ್ಮೀರದ ಹಿರಿಯ ಪೊಲೀಸ್​ ಅಧಿಕಾರಿ, ಶ್ರೀನಗರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಡಿಎಸ್​ಪಿ ದೇವಿಂದರ್​ ಸಿಂಗ್​ ಅವರನ್ನು ಇಂದು ಅಮಾನತು ಮಾಡಲಾಗಿದೆ.

    ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರೊಂದಿಗೆ ಒಂದೇ ವಾಹನದಲ್ಲಿ ದೆಹಲಿಗೆ ತೆರಳುತ್ತಿದ್ದ ದೇವಿಂದರ್​ ಸಿಂಗ್​ ಅವರನ್ನು ಶನಿವಾರ ಶೋಪಿಯಾನದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.

    ಸತತ ಎರಡು ದಿನಗಳ ವಿಚಾರಣೆ ನಡೆಸಿದ್ದು ಇನ್ನೂ ಕೂಡ ಪೊಲೀಸರ ತಂಡ ಮತ್ತು ಗುಪ್ತಚರ ದಳದ ಅಧಿಕಾರಿಗಳು ವಿಚಾರಣೆ ನಡೆಸುತ್ತಲೇ ಇದ್ದಾರೆ. ದೇವಿಂದರ್ ಸಿಂಗ್​ ಅವರು ಬರೀ ಉಗ್ರರ ಜತೆ ಪ್ರಯಾಣ ಮಾಡಿದ್ದಷ್ಟೇ ಅಲ್ಲ, ಬಾದಾಮಿ ಬಾಗ್​ ಕಂಟೋನ್ಮೆಂಟ್​ನಲ್ಲಿರುವ ಆರ್ಮಿ XV ಕಾರ್ಪ್ಸ್​ ಮುಖ್ಯಕಚೇರಿಯ ಬಳಿ ಇರುವ ತಮ್ಮ ನಿವಾಸದಲ್ಲಿ ಮೂವರು ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ದೇವಿಂದರ್​ ಸಿಂಗ್​ ಅವರು ಕಳೆದ ನಾಲ್ಕುತಿಂಗಳ ಹಿಂದಷ್ಟೇ ರಾಷ್ಟ್ರಪತಿ ಪದಕದಿಂದ ಪುರಸ್ಕೃತರಾಗಿದ್ದಾರೆ. ಹಲವು ಉಗ್ರ ವಿರೋಧಿ ಕಾರ್ಯಾಚರಣೆಯಲ್ಲೂ ಸಕ್ರಿಯರಾಗಿ ಪಾಲ್ಗೊಂಡವರು.

    ಹೀಗೆ ಉಗ್ರರಿಗೆ ಆಶ್ರಯ ಕೊಟ್ಟು, ಅವರೊಂದಿಗೆ ಪ್ರಯಾಣಿಸುವ ಕಾರಣ ಏನಿತ್ತು ಗೊತ್ತಿಲ್ಲ. ಇಬ್ಬರು ಉಗ್ರರೊಂದಿಗೆ ಇದ್ದ ಪೊಲೀಸ್​ ಅಧಿಕಾರಿಯನ್ನೂ ಉಗ್ರ ಎಂದೇ ಪರಿಗಣಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts