More

    ವೃದ್ಧ ದಂಪತಿ ನಿಗೂಢ ಹತ್ಯೆ: ಪುತ್ರನ ಮೇಲೇಕೆ ಪೊಲೀಸರ ಕಣ್ಣು?

    ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ಮಂಗಳವಾರ ತಡರಾತ್ರಿ ವಯೋವೃದ್ಧ ದಂಪತಿ ನಿಗೂಢವಾಗಿ ಹತ್ಯೆಯಾಗಿದ್ದು, ಅವರೊಂದಿಗೆ ವಾಸವಿದ್ದ ಪುತ್ರನ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ.

    ರಂಗನಾಥಪುರ ನಿವಾಸಿ ಮೈಸೂರು ಮೂಲದ ನರಸಿಂಹರಾಜು (70) ಮತ್ತು ಪತ್ನಿ ಸರಸ್ವತಿ (65) ಮೃತರು. ಬುಧವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ತಿಳಿಸಿದ್ದಾರೆ.

    ನರಸಿಂಹರಾಜು ಮತ್ತು ಸರಸ್ವತಿ ಮೈಸೂರು ಮೂಲದವರಾಗಿದ್ದು, ಪುತ್ರ ಸಂತೋಷ್ ಜೊತೆ ರಂಗನಾಥಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಸರಸ್ವತಿ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಪುತ್ರ ಸಂತೋಷ್ ಆಡಿಟರ್ ಕೆಲಸ ಮಾಡಿಕೊಂಡಿದ್ದು, ಕಾಮಾಕ್ಷಿಪಾಳ್ಯದಲ್ಲಿ ಕಚೇರಿ ಹೊಂದಿದ್ದಾನೆ. ಪತ್ನಿ ಗರ್ಭಿಣಿಯಾಗಿರುವುದರಿಂದ ಆಕೆಯನ್ನು ತವರು ಮನೆಗೆ ಬಿಟ್ಟು ಬಂದಿದ್ದ.

    ಎಂದಿನಂತೆ ಮನೆಕೆಲಸದಾಕೆ ಬುಧವಾರ ಬೆಳಗ್ಗೆ 8.30ರಲ್ಲಿ ವೃದ್ಧ ದಂಪತಿ ಮನೆಗೆ ಹೋಗಿದ್ದಳು. ಈ ವೇಳೆ ಮನೆಯ ಬಾಗಿಲು ತೆರೆದಿದ್ದರಿಂದ ಒಳಹೋಗಿದ್ದಾರೆ. ದಂಪತಿಯನ್ನು ಮಾತನಾಡಿಸಿದ್ದು, ಯಾರೊಬ್ಬರೂ ಪ್ರತಿಕ್ರಿಯಿಸಿಲ್ಲ. ಇದೇ ವೇಳೆ ಪಡಸಾಲೆಯ ಮೂಲೆಯಲ್ಲಿ ನರಸಿಂಹರಾಜು ಶವ ಕಂಡುಬಂದಿದೆ. ಕೂಡಲೇ, ಸರಸ್ವತಿಗಾಗಿ ಕೂಗಿಕೊಂಡಿದ್ದು ಆಕೆ ಮಾತನಾಡಿಲ್ಲ. ಹೀಗಾಗಿ ನಿದ್ರಾ ಕೊಠಡಿಗೆ ಹೋಗಿ ನೋಡಿದಾಗ ಸರಸ್ವತಿ ಬಾಯಿಗೆ ಬಟ್ಟೆ ತುರುಕಿ ಹತ್ಯೆ ಮಾಡಿದ್ದ ಸ್ಥಿತಿಯಲ್ಲಿ ಮೃತದೇಹ ಕಂಡಿದೆ. ಇದರಿಂದ ಗಾಬರಿಗೊಂಡ ಆಕೆ, ವಿಚಾರವನ್ನು ಸ್ಥಳೀಯ ನಿವಾಸಿಗಳಿಗೆ ತಿಳಿಸಿದ್ದಾಳೆ. ಬಳಿಕ ‘ನಮ್ಮ 100’ಗೆ ಮಾಹಿತಿ ಮುಟ್ಟಿಸಿದ್ದರು.

    ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಬಳಿಕ ಎ್ಎಸ್‌ಎಲ್ ತಜ್ಞರು ಹಾಗೂ ಶ್ವಾನದಳ ಮೂಲದ ತಪಾಸಣೆ ನಡೆಸಲಾಗಿದೆ. ಕೃತ್ಯದ ಬಳಿಕ ಮನೆಯಲ್ಲಿ ದಂಪತಿಯನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಮನೆಯ ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ನೆಲೆಸಿದ್ದ ಮನೆಯ ಸುತ್ತಮುತ್ತಲಿನ ನಿವಾಸಿಗಳಿಂದ ಹೇಳಿಕೆ ಪಡೆಯಲಾಗಿದೆ. ಕಳೆದ 2 ತಿಂಗಳ ಹಿಂದೆ ಮನೆಯಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಪುತ್ರ ಸಂತೋಷ್ ತನ್ನ ತಾಯಿ ಸರಸ್ವತಿ ಮೇಲೆ ಹಲ್ಲೆ ಮಾಡಿದ್ದ. ಈ ವಿಚಾರವನ್ನು ಸರಸ್ವತಿ ಸ್ಥಳೀಯ ಜನರ ಮುಂದೆ ಹೇಳಿ ಕಣ್ಣೀರಿಟ್ಟಿದ್ದಳು ಎಂಬುದು ಗೊತ್ತಾಗಿದೆ.

    ಪಾಲಕರ ಹತ್ಯೆ ಬಳಿಕ ಪುತ್ರ ಸಂತೋಷ್ ೆನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಆತನ ಮೇಲೆ ಶಂಕೆ ವ್ಯಕ್ತವಾಗಿದೆ. ಸಂತೋಷ್ ಪತ್ತೆಯಾದ ಬಳಿಕ ಯಾವ ವಿಚಾರಕ್ಕೆ ಗಲಾಟೆಯಾಗಿತ್ತು ಎಂಬುದು ಗೊತ್ತಾಗಲಿದೆ. ಸಿಸಿ ಕ್ಯಾಮರಾ ಸುಳಿವಿನ ಮೇರೆಗೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕೌಟುಂಬಿಕ ಕಲಹದಿಂದ ದಂಪತಿ ಆತ್ಮಹತ್ಯೆ

    20 ವರ್ಷದ ಪುತ್ರಿಯ ಅಮಾನುಷ ಕೊಲೆ: ಪಾಲಕರಿಂದಲೇ ಮಗಳ ಮರ್ಯಾದಾಗೇಡು ಹತ್ಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts