More

    ತೆಂಗು ಉತ್ಪನ್ನಗಳ ಮಾರಾಟ ಲಾಭದಾಯಕ

    ಅರಸೀಕೆರೆ: ತೆಂಗು ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಲಾಭದಾಯಕ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ನಾರಾಯಣ್ ಹೇಳಿದರು.

    ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆರ್ಥಿಕ ಅಭಿವೃದ್ಧಿಯಲ್ಲಿ ತೆಂಗು ನಾರು ತಯಾರಿಕೆ ಮತ್ತು ಖಾದ್ಯತೈಲ ಉದ್ಯಮದ ಪಾತ್ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಡಿದರು.

    ತೆಂಗಿನ ಕಾಯಿ ಹಾಗೂ ಕೊಬ್ಬರಿ ತೊಗಟೆ(ಸಿಪ್ಪೆ)ಯಿಂದ ತಯಾರಾಗುವ ನಾರನ್ನು ನೆಲಹಾಸು, ಹಾಸಿಗೆ, ಬಾಗಿಲ ಕಾಲೊರೆಸು, ಹುರಿ, ಹಗ್ಗ ತಯಾರಿಕೆಗೆ ಬಳಸಲಾಗುತ್ತಿದ್ದು, ಬಹಳ ಬೇಡಿಕೆಯಿದೆ. ನಂತದ ಬರುವ ಸಣ್ಣ ಧೂಳನ್ನು ಪೂರಕ ಗೊಬ್ಬರವಾಗಿ ಟೀ, ಕಾಫಿ, ರಬ್ಬರ್ ತೋಟಗಳಲ್ಲಿ ಬಳಸಲಾಗುತ್ತಿದೆ ಎಂದು ತಿಳಿಸಿದರು.

    ರಾಜ್ಯ ತೆಂಗು ನಾರು ಸಹಕಾರ ಮಹಾಮಂಡಳದ ವ್ಯವಸ್ಥಾಪಕ ಬಸವರಾಜು ತೆಂಗು ಉತ್ಪನ್ನಗಳ ತಯಾರಿಕೆ ಮತ್ತು ಬಳಕೆ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಉದ್ಯಮಿ ಶ್ರೀನಿವಾಸ್, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಭಾಸ್ಕರ್ ಮಾತನಾಡಿದರು. ಪ್ರಾಧ್ಯಾಪಕರಾದ ಡಾ.ಹರೀಶ್ ಕುಮಾರ್, ಚಿತ್ರಕಲಾ, ಮೋಹನ್‌ರಾಜ್, ಗಂಗಾ,ಪ್ರತಿಭಾ, ರಾಘವೇಂದ್ರ ಹಲವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts