More

    ಬಾಕಿಯಿದೆ ಶತಮಾನಗಳ ಭೀಕರ ಭೂಕಂಪ; ಎಲ್ಲೆಲ್ಲಿ ಸಂಭವಿಸುತ್ತೆ ಗೊತ್ತಾ?

    ನವದೆಹಲಿ: ಭೂಕಂಪಶಾಸ್ತ್ರಜ್ಞರು ಭಾರಿ ಆತಂಕಕ್ಕೆ ಒಳಗಾಗಿದ್ದಾರೆ. ಏಕೆಂದರೆ ಶತಮಾನಗಳಿಂದ ಉಸಿರುಗಟ್ಟಿಕೊಂಡಿರುವ ಭೀಕರ ಭೂಕಂಪನವೊಂದು ಇನ್ನೂ ಬಾಕಿಯಿದೆ…! ಜತೆಗೆ, ಇದರಿಂದಾಗುವ ವಿಪತ್ತನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಈ ನಗರಗಳು ಸಿದ್ಧವಾಗಿವೆಯೇ ಎಂಬ ಕಳವಳವೂ ಇಲ್ಲದಿಲ್ಲ.

    ಕಾಠ್ಮಂಡುವನ್ನೂ ಕದಲಿಸುವ, ಶಿಮ್ಲಾವನ್ನು ನಡುಗಿಸುವ, ದೆಹಲಿಯನ್ನು ದಂಗೆಡಿಸಬಲ್ಲ ಭಿಕರ ವಿದ್ಯಮಾನವೊಂದು ಬೇಕಾದರೂ ಸಂಭವಿಸಬಹುದು. ಹಿಮಾಲಯ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಲಿದೆ. ಅದು ಯಾವುದೇ ಕ್ಷಣವಾದರೂ ಸಂಭವಿಸಬಹುದು ಅಥವಾ ಶತಮಾನದ ಬಳಿಕವೂ ಉಂಟಾಗಬಹುದು. ಒಟ್ಟಿನಲ್ಲಿ ಅಂಥದ್ದೊಂದು ಭಾರಿ ನಡುಕಕ್ಕೆ ಈ ಪ್ರದೇಶ ಸಾಕ್ಷಿಯಾಗಲಿದೆ.

    ಇದನ್ನೂ ಓದಿ; ಮಸೀದಿಯಾಗಿ ಮಾರ್ಪಡುತ್ತಿದೆ 6ನೇ ಶತಮಾನದ ವಿಶ್ವ ಪ್ರಸಿದ್ಧ ವಸ್ತು ಸಂಗ್ರಹಾಲಯ…!

    2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ರಿಕ್ಟರ್​ ಮಾಪಕದಲ್ಲಿ 7.8 ತೀವ್ರತೆ ಹೊಂದಿದ್ದ ಭೂಕಂಪಕ್ಕೆ 9,000 ಜನರು ಸತ್ತು, 22 ಸಾವಿರ ಜನರು ಗಾಯಗೊಂಡಿದ್ದರು. ರಾಜಧಾನಿಯ ಬಹುತೇಕ ಪ್ರದೇಶ ನಾಶವಾಗಿತ್ತು. ಇಷ್ಟೇ ತೀವ್ರತೆಯ ಭೂಕಂಪನ ಮತ್ತೊಮ್ಮೆ ಉಂಟಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದೆಷ್ಟು ತೀವ್ರವಾಗಿರಲಿದೆ ಎಂದರೆ, ಕಾಠ್ಮಂಡುವನ್ನು ದಕ್ಷಿಣಕ್ಕೆ 1.5 ಮೀಟರ್​ ಜರುಗಿಸಬಲ್ಲುದು.

    ಭೂಮಿಯ ಅಂತರಾಳದಲ್ಲಿ ಹುದುಗಿರುವ ಭಾರಿ ಒತ್ತಡವನ್ನು ಹೊರ ಹಾಕಲು 8 ತೀವ್ರತೆಯ ಭೂಕಂಪನ ಉಂಟಾಗಬೇಕಿದೆ ಎಂದು ಕೊಲರಾಡೋ ಬೋಲ್ಡರ್​ ವಿವಿಯ ತಜ್ಞ ರೋಗರ್​ ಬಿಲ್ಹಾಮ್​ ಹೇಳಿದ್ದಾರೆ. 100 ವರ್ಷಗಳಲ್ಲಿ ಉಂಟಾಗುವ ಒತ್ತಡ ಹೊರಹಾಕಲು 8.6 ತೀವ್ರತೆಯ ಭೂಕಂಪ ಉಂಟಾಗಬೇಕಿದ್ದರೆ, 350 ವರ್ಷಗಳಲ್ಲಿ ಇದರ ತೀವ್ರತೆ 9ಕ್ಕೆ ಏರಲಿದೆ.

    ಇದನ್ನೂ ಓದಿ; ಕರೊನಾ ಸಂಕಷ್ಟದಿಂದ ಕೆಲಸ ಕಳೆದುಕೊಂಡಿದ್ದವನಿಗೆ ಖುಲಾಯಿಸಿದ ಅದೃಷ್ಟ…! 

    ಭಾರತದಲ್ಲಿ ಈವರೆಗೆ ಅತಿ ತೀವ್ರತೆಯ ಭೂಕಂಪವೆಂದರೆ 2005ರಲ್ಲಿ ಜಮ್ಮು ಕಾಶ್ಮೀರದಲ್ಲಿ ಉಂಟಾಗಿದ್ದ 7.6 ತೀವ್ರತೆಯದ್ದು. ಇದರಿಂದ ಗಡಿಯ ಎರಡೂ ಕಡೆಗಳಲ್ಲಿ ಒಟ್ಟಾರೆ 86,000 ಜನರು ಮೃತಪಟ್ಟಿದ್ದರು. ವಿಪತ್ತು ನಿರ್ವಹಣಾ ಯೋಜನೆಗಳಲ್ಲಿ ಭೂಕಂಪದ ವಿಚಾರದ ಪ್ರಸ್ತಾಪವೇ ಇಲ್ಲ ಎನ್ನುವುದು ತಜ್ಞರ ಅಭಿಮತ. ಹಿಮಾಲಯನ್​ ಪ್ರದೇಶಕ್ಕೆ ಒಳಪಡುವ ಶಿಮ್ಲಾ ಹಾಗೂ ದೆಹಲಿ ಭೂಕಂಪದ ಸಂಭಾವ್ಯತೆ ಹೆಚ್ಚಿದೆ.

    ಸೋಮವಾರದಿಂದ ದೇಶದ 12 ಕಡೆಗಳಲ್ಲಿ ಕೋವಿಡ್​ ರೋಗಿಗಳಿಗೆ ದೇಶೀಯ ಕರೊನಾ ಲಸಿಕೆ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts