More

    ಅಹಂ ಎಂಬುದು ವಿನಾಶದ ಹಾದಿ

    ಚಿತ್ರದುರ್ಗ: ದರ್ಪ, ದಬ್ಬಾಳಿಕೆ, ಅಹಂ ಗುಣಗಳಿಂದಾಗಿ ಅನೇಕರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ. ಆದ್ದರಿಂದ ಕೈಗೊಳ್ಳುವ ಕಾರ್ಯದಲ್ಲಿ ಸಫಲರಾಗಲು ದೈವ ಬಲದ ಅಗತ್ಯವಿದ್ದು, ಸಜ್ಜನರಾಗಿ ಬದುಕಬೇಕು ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಸಲಹೆ ನೀಡಿದರು.

    ನವರಾತ್ರಿ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಕಬೀರಾನಂದಾಶ್ರಮದ ಭಗವತಿ ಭಗಳಾಂಬಿಕಾ ದೇವಿ ದೇಗುಲದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತ ಮಾತನಾಡಿದ ಅವರು, ಧ್ಯಾನ ಮತ್ತು ಪ್ರಾರ್ಥನೆ ಶಕ್ತಿಯ ಸಂಕೇತವಾಗಿದ್ದು, ಶುದ್ಧ ಮನಸ್ಸಿನಿಂದ ಕೈಗೊಂಡರೆ ಒಳ್ಳೆಯದಾಗಲಿದೆ ಎಂದರು.

    ಭಗವತಿ ದೇವಿ ಪಾರಾಯಣದಿಂದ ಪುಣ್ಯ ಪ್ರಾಪ್ತಿಯಾಗಲಿದೆ. ಮಾತೆ ಸನ್ನಿಧಿಯಲ್ಲಿ ನ್ಯಾಯವೂ ದೊರೆಯಲಿದೆ. ಶ್ರದ್ಧಾಭಕ್ತಿಯ ಪೂಜೆಗೆ ಫಲ ಸಿಗುವುದರಲ್ಲಿ ಯಾರೂ ಸಂಶಯ ಪಡುವ ಅಗತ್ಯವಿಲ್ಲ. ಮಕ್ಕಳು ಚಿಕ್ಕವರಿದ್ದಾಗಲೇ ದೇವರು, ಗುರು-ಹಿರಿಯರ ಕುರಿತು ಪೋಷಕರು ಪೂಜ್ಯ ಭಾವನೆ ಬೆಳೆಸಬೇಕು. ಸಂಸ್ಕೃತಿ ಜತೆಗೆ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.

    ಕೃಷ್ಣಾನಂದ ಶ್ರೀ ಮಾತನಾಡಿ, ಜಗನ್ಮಾತೆ ಪೂಜೆಗೆ ಆಢಂಬರದ ಅಗತ್ಯವಿಲ್ಲ. ನಿರ್ಮಲವಾದ ಭಕ್ತಿಯೊಂದಿದ್ದರೆ ಸಾಕು. ಭಕ್ತರ ಇಷ್ಟಾರ್ಥ ಈಡೇರಿಸುವ ದೇವಿಯ ಸ್ಮರಣೆ ನಿತ್ಯವೂ ಕೈಗೊಳ್ಳಬೇಕು. ಲಲಿತಾ ಸಹಸ್ರನಾಮ ಪಠಣದಿಂದ ಇಡೀ ದೇಹವೇ ಪರಿಶುದ್ಧವಾಗಲಿದೆ ಎಂದರು.

    ಈರಣ್ಣ ಮಲ್ಲಾಪುರ ಗೊಲ್ಲರಹಟ್ಟಿ, ಹುರಳಿ ಬಸವರಾಜು, ಆಯಿತೋಳ್ ವಿರುಪಾಕ್ಷಪ್ಪ, ಯಶವಂತ ಕುಮಾರ್, ಯುಗಧರ್ಮ ರಾಮಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts