More

    ಕಸ ವಿಲೇವಾರಿಗೆ ಮುಂದಾದ ಮುಂಡರಗಿ ಪುರಸಭೆ

    ಮುಂಡರಗಿ: ಪಟ್ಟಣದ ಹೆದ್ದಾರಿ ಬದಿಯಲ್ಲಿ ಅಲ್ಲಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಪುರಸಭೆ ಅಧಿಕಾರಿಗಳು ಗುರುವಾರ ಜೆಸಿಬಿ ಯಂತ್ರದ ಮೂಲಕ ಸಂಗ್ರಹಿಸಿ ಟ್ರಾಕ್ಟರ್‌ನಲ್ಲಿ ವಿಲೇವಾರಿ ಮಾಡಿದರು.
    ಎಸ್.ಎಸ್. ಪಾಟೀಲ ನಗರ, ಬಿಇಒ ಕಚೇರಿ ಹಿಂಭಾಗ, ತೋಟಗಾರಿಕೆ ಇಲಾಖೆ ಮುಂಭಾಗದಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಜೆಸಿಬಿಯಿಂದ ಟ್ರಾೃಕ್ಟರ್‌ಗೆ ತುಂಬಿ ವಿಲೇವಾರಿ ಮಾಡಲಾಯಿತು.
    ಪುರಸಭೆ ವ್ಯಾಪ್ತಿಯ ಹಲವು ಭಾಗದಲ್ಲಿ ತ್ಯಾಜ್ಯ ಸಂಗ್ರಹ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ‘ಕೋಟಿ ರೂ. ಖರ್ಚಾದರೂ ತಪ್ಪದ ಕಿರಿಕಿರಿ’ ಶೀರ್ಷಿಕೆಯಡಿ ಮೇ 24ರಂದು ‘ವಿಜಯವಾಣಿ’ ವಿಸ್ತ್ರತ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿರುವ ಪುರಸಭೆ ಸಿಬ್ಬಂದಿ ಹೆದ್ದಾರಿ ಬದಿ ಹಾಗೂ ಅನೇಕ ಕಡೆ ಸಂಗ್ರಹವಾಗಿದ್ದ ಕಸವನ್ನು ತೆರವು ಮಾಡಿದರು.
    ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಎಂ.ಎಸ್. ಮ್ಯಾಗೇರಿ, ಪಟ್ಟಣದಲ್ಲಿನ ಕಸವನ್ನು ವಿಲೇವಾರಿ ಮಾಡಿಸಲಾಗುತ್ತಿದೆ. ಮನೆ- ಮನೆಯಿಂದ ಕಸ ಸಂಗ್ರಹಿಸುವುದಕ್ಕೆ ಪುರಸಭೆಯ ವಾಹನ ಬರುತ್ತದೆ. ಸಾರ್ವಜನಿಕರು ಅದಕ್ಕೆ ಕಸ ಹಾಕಬೇಕು. ಎಲ್ಲೆಂದರಲ್ಲಿ ಕಸ ಹಾಕುವುದರಿಂದ ತೊಂದರೆಯಾಗುತ್ತದೆ. ಪುರಸಭೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
    ಶಾಸಕ ಸೂಚನೆ: ‘ವಿಜಯವಾಣಿ’ಯ ವರದಿ ಗಮನಿಸಿದ ಶಾಸಕ ಡಾ. ಚಂದ್ರು ಲಮಾಣಿ ಪುರಸಭೆ ಮುಖ್ಯಾಧಿಕಾರಿಗೆ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts