More

    ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡವನಿಗೆ ಹೊಡೆಯಿತು ಲಾಟರಿ, ಸಿಕ್ಕಿತು 31 ಕೋಟಿ ರೂಪಾಯಿ

    ನವದೆಹಲಿ: ಕೋವಿಡ್​-19 ಲಾಕ್​ಡೌನ್​ನಿಂದ ಉದ್ಯೋಗ ಕಳೆದುಕೊಂಡು ಮೂರು ವರ್ಷದ ಪುತ್ರಿಯನ್ನು ಸಲುಹಲು ಕಷ್ಟಪಡುತ್ತಿದ್ದ ಭದ್ರತಾ ಸಿಬ್ಬಂದಿ ರಾತ್ರೋ ರಾತ್ರಿ ಕೋಟ್ಯಾಧೀಶನಾಗಿದ್ದಾನೆ. ಹೌದು. ನೀವು ಅಂದುಕೊಂಡಂತೆ ಆತನಿಗೆ ಲಾಟರಿ ಹೊಡೆದಿದ್ದು, 31 ಕೋಟಿ ರೂಪಾಯಿಗಳ ಬಂಪರ್​ ಬಹುಮಾನ ಬಂದಿದೆ.

    ಆಸ್ಟ್ರೇಲಿಯಾ ಪರ್ತ್​ನಲ್ಲಿ ಈತ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅದೊಂದು ದಿನ ತನ್ನ ಮೂರು ವರ್ಷದ ಪುತ್ರಿಗೆ ಅಗತ್ಯವಸ್ತುಗಳನ್ನು ಖರೀದಿಸಲು ದಿನಸಿ ಅಂಗಡಿಗೆ ಹೋಗಿದ್ದ ಆತನಿಗೆ ಪಕ್ಕದಲ್ಲೇ ಇದ್ದ ಲಾಟರಿವೆಸ್ಟ್​ ಕೌಂಟರ್​ ಕಾಣಿಸಿತ್ತು. ನೇರವಾಗಿ ಅಲ್ಲಿಗೆ ಹೋದವನೇ ಒಂದು ಟಿಕೆಟ್​ ಖರೀದಿಸಿಕೊಂಡು ಮನೆಗೆ ಮರಳಿದ್ದ.

    ಇದನ್ನೂ ಓದಿ: ಸಾಯುವ ಹಿಂದಿನ ರಾತ್ರಿ ತಮ್ಮ ಕಂಪನಿ ಸಿಬ್ಬಂದಿಯೊಂದಿಗೆ ಚರ್ಚಿಸಿದ್ದ ಸುಶಾಂತ್​ ಸಿಂಗ್​ ರಜಪೂತ್​

    ತಾನು ಲಾಟರಿ ಟಿಕೆಟ್​ ಖರೀದಿಸಿದ್ದ ಸಂಗತಿಯನ್ನೇ ಮರೆತು ಹೋಗಿ, ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ. ಕೆಲದಿನಗಳ ಹಿಂದೆ ಆತ ಲಾಟರಿ ಖರೀದಿಸಿದ್ದ ಕೇಂದ್ರದವರು ಯಾರಿಗೋ ಲಾಟರಿ ಹೊಡೆದಿದ್ದು, ಅವರು ಹಣ ಪಡೆದುಕೊಂಡಿಲ್ಲ ಎಂದು ಹೇಳುತ್ತಿದ್ದ ಸಂಗತಿ ಈತನನ್ನು ತಲುಪಿತ್ತು. ತಕ್ಷಣವೇ ಆತ ನಾನು ಖರೀದಿಸಿದ್ದ ಲಾಟರಿಯ ಸಂಖ್ಯೆಯನ್ನು ಬಂಪರ್​ ಬಹುಮಾನ ಬಂದ ಲಾಟರಿ ಸಂಖ್ಯೆಗೆ ಹೋಲಿಸಿದಾಗ ತಾನೇ ಆ ಅದೃಷ್ಟವಂತ ಎಂಬುದು ಗೊತ್ತಾಗಿದೆ.

    ಇದೀಗ ಮನೆಗೆ ಹೋಗಿ ನನ್ನ ಪುತ್ರಿಯನ್ನು ಅಪ್ಪಿಕೊಂಡು, ಮುದ್ದಾಡಿ ಸಂಭ್ರಮಿಸಲು ಬಯಸುತ್ತೇನೆ ಎಂದು ಆತ ಹೇಳಿದ್ದಾಗಿ ಲಾಟರಿವೆಸ್ಟ್​ ಅಧಿಕಾರಿಗಳು ತಿಳಿಸಿದ್ದಾರೆ. ಜೀವನ ಅನ್ನುವುದು ಒಂದು ಕನಸು ಎಂದು ನಾನು ಸದಾ ಹೇಳುತ್ತಿದ್ದೆ. ಇದೀಗ ಈ ಮಾತು ನನ್ನ ಜೀವನದಲ್ಲಿ ವಾಸ್ತವವಾಗಿ ಮಾರ್ಪಟ್ಟಿದೆ. ನಾನು ಲೊಟೋ ವಿಜೇತರ ಬಗ್ಗೆ ಓದುತ್ತಿದ್ದೆ. ಈಗ ನಾನೇ ಅದರ ಭಾಗವಾಗಿದ್ದೇನೆ ಎಂದು ಹೆಮ್ಮೆಪಟ್ಟುಕೊಂಡಿದ್ದಾನೆ.

    ವಿಮಾನಗಳೆರಡು ಮುಖಾಮುಖಿ ಡಿಕ್ಕಿಯಾಗಿ ಶಾಸಕ ಸೇರಿದಂತೆ ಏಳು ಮಂದಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts