More

    ಜಾತ್ಯತೀತವಾಗಿ ಗ್ರಾಮಕ್ಕೆ ಸೌಲಭ್ಯ ಒದಗಿಸಿ

    ರಾಮದುರ್ಗ: ಗ್ರಾಪಂ ಸದಸ್ಯರಿಗೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಹಕ್ಕುಗಳಿದ್ದು, ಅವುಗಳ ಸದ್ಭಳಕೆ ಮಾಡಿಕೊಂಡು ಗ್ರಾಪಂ ಸದಸ್ಯರು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕುರುಬರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ವಿಠ್ಠಲ ಜಟಗಣ್ಣವರ ಹೇಳಿದರು.

    ಸಮೀಪ ತುರನೂರ ಗ್ರಾಮದ ಸಿದ್ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಾಲುಮತ ಸಮುದಾಯದ ನೂತನ ಗ್ರಾಪಂ ಸದಸ್ಯರಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸರ್ಕಾರದ ಎಲ್ಲ ಇಲಾಖೆಗಳು ಗ್ರಾಪಂನ ಕಾರ್ಯವ್ಯಾಪ್ತಿಯಲ್ಲಿ ಬರುವುದರಿಂದ ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಜನರ ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ನುಡಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ, ಸಾರ್ವಜನಿಕ ಕಾರ್ಯಗಳನ್ನು ಮಾಡಲು ತಮಗೆ ಒದಗಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಪುರಸಭೆ ಸದಸ್ಯೆ ರಾಜೇಶ್ವರಿ ಮೆಟಗುಡ್ಡ ಹಾಗೂ ನಿವೃತ್ತ ಶಿಕ್ಷಕ ಎಚ್.ಎನ್.ನರಗುಂದ, ನಾಗಪ್ಪ ಇಂಗಳಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕಿನ 33 ಗ್ರಾಪಂ ನಿಂದ ಆಯ್ಕೆಯಾದ 103 ಸದಸ್ಯರನ್ನು ಸನ್ಮಾನಿಸಲಾಯಿತು. ಮುಗಳಖೋಡದ ಕನಕಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

    ತುರನೂರ ಗ್ರಾಪಂ ಅಧ್ಯಕ್ಷ ಲಕ್ಕಪ್ಪ ಕ್ವಾರಿ, ಜಿಪಂ ಮಾಜಿ ಅಧ್ಯಕ್ಷೆ ಮಹಾದೇವಿ ರೊಟ್ಟಿ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ನಿರ್ದೇಶಕ ನೀಲಪ್ಪ ಚಾಕಲಬ್ಬಿ, ಶಶಿಕಲಾ ಸೋಮಗೊಂಡ, ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷ ಮಾದೇವಪ್ಪ ಶರಮಗೊಂಡ, ಈರಪ್ಪ ಕೊಳಚಿ, ಶಿವಪ್ಪ ಹಕ್ಕೆಪ್ಪನವರ, ರವಿ ಮೊರಬದ, ಪುರಸಭೆ ಸದಸ್ಯೆ ಪಿ.ಎಸ್.ಸಿದ್ಲಿಂಗಪ್ಪನವರ, ತಾಪಂ ಸದಸ್ಯೆ ಸುರೇಖಾ ಸೋಮಗೊಂಡ, ಬಸವರಾಜ ಕರಿಗಾರ, ಎಚ್.ಕೆ.ಸಾಗನೂರ, ಕುರುಬ ಸಂಘದ ಸಹಕಾರ್ಯದರ್ಶೀ ಅಶೋಕ ಮೆಟಗುಡ್ಡ, ಶಿಕ್ಷಕ ಮಾರುತಿ ಅದ್ದೂರಿ, ಸಿದ್ದಪ್ಪ ಮಕ್ಕಣ್ಣವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts