More

    ಕಾರ್ಯದರ್ಶಿ ವಿರುದ್ಧ ಕ್ರಮಕೈಗೊಳ್ಳಿ

    ದೇವದುರ್ಗ: ಜಾಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕಗೆ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು ಬುಧವಾರ ದೂರು ನೀಡಿದ್ದಾರೆ.

    ಸಂಘದ ಕಾರ್ಯದರ್ಶಿಯಾಗಿದ್ದ ವೀರಭದ್ರಪ್ಪ ಚಿಂಚರಕಿ 2022ರ ಮೇ 31ರಂದು ನಿವೃತ್ತಿಯಾಗಿದ್ದರೂ, 2023ರ ಮೇ 31ರವರೆಗೆ ಸಂಘಕ್ಕೆ ಮಾಹಿತಿ ನೀಡದೆ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಜೂ.2ರಂದು ಸಂಘದ 003300471000139 ಹಾಗೂ 003300 47100152 ಖಾತೆಯಿಂದ ಆಡಳಿತ ಮಂಡಳಿ ಗಮನಕ್ಕಿಲ್ಲದೆ 13.74 ಲಕ್ಷ ರೂಪಾಯಿಯನ್ನು ಆಡಳಿತ ಮಂಡಳಿ ಗಮನಕ್ಕೆ ತಾರದೆ, ಮಗನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

    ಮುದ್ದುರಂಗಪ್ಪ ಮುದ್ದಯ್ಯ ಎಂಬುವವರು 2014-15ನೇ ಸಾಲಿನಲ್ಲಿ ಸಾಲ ಪಡೆದು ಸುಸ್ತಿ ಬಾಕಿದಾರರಾಗಿದ್ದಾರೆ. ಆದರೆ, 2019ರಲ್ಲಿ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸುಸ್ತಿ ಬಾಕಿ ವಿಚಾರ ಮುಚ್ಚಿಟ್ಟು ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿ ಕಾನೂನು ಉಲ್ಲಂಘಿಸಲಾಗಿದೆ. ನಮ್ಮ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದರೂ ಖಾಸಗಿ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ದೂರಿದ್ದಾರೆ.
    ಕೂಡಲೇ ಕಾರ್ಯದರ್ಶಿ ವೀರಭದ್ರಪ್ಪ ಚಿಂಚರಕಿ ಅವಧಿಯಲ್ಲಿ ನಡೆದಿರುವ ವ್ಯವಹಾರದ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಹಣವನ್ನು ಸಂಘಕ್ಕೆ ಜಮಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಧ್ಯಕ್ಷ ಕೆ.ಎಸ್.ನಾಡಗೌಡ, ನಿರ್ದೇಶಕರಾದ ಬಸನಗೌಡ ಸಿದ್ನಕಲ್, ಚನ್ನಮ್ಮ ಶಿವಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts