More

    ದ್ವಿತೀಯ ಪಿಯು ಪರೀಕ್ಷೆ: 1,097 ವಿದ್ಯಾರ್ಥಿಗಳು ಗೈರು

    ರಾಯಚೂರು: ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಜರುಗಿದ ದ್ವಿತೀಯ ಪಿಯು ಕನ್ನಡ ಪರೀಕ್ಷೆಗೆ 1,097 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದ 19,060 ವಿದ್ಯಾರ್ಥಿಗಳಲ್ಲಿ 17,963 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
    ರಾಯಚೂರು ತಾಲೂಕಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 5,428 ವಿದ್ಯಾರ್ಥಿಗಳಲ್ಲಿ 328 ವಿದ್ಯಾರ್ಥಿಗಳು ಗೈರಾಗಿದ್ದು, ಸಿಂಧನೂರು ತಾಲೂಕಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 3,842 ವಿದ್ಯಾರ್ಥಿಗಳಲ್ಲಿ 202 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
    ಮಾನ್ವಿ ತಾಲೂಕಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 2,064 ವಿದ್ಯಾರ್ಥಿಗಳಲ್ಲಿ 156 ವಿದ್ಯಾರ್ಥಿಗಳು, ಲಿಂಗಸುಗೂರು ತಾಲೂಕಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 4,035 ವಿದ್ಯಾರ್ತಿಗಳಲ್ಲಿ 124 ವಿದ್ಯಾರ್ಥಿಗಳು, ದೇವದುರ್ಗ ತಾಲೂಕಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 2,067 ವಿದ್ಯಾರ್ಥಿಗಳಲ್ಲಿ 194 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
    ಮಸ್ಕಿ ತಾಲೂಕಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 941 ವಿದ್ಯಾರ್ಥಿಗಳಲ್ಲಿ 887 ವಿದ್ಯಾರ್ಥಿಗಳು ಹಾಗೂ ಸಿರವಾರ ತಾಲೂಕಿನಲ್ಲಿ 693 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ ಎಂದು ಪಿಯು ಡಿಡಿಪಿಐ ಸೋಮಶೇಖರಪ್ಪ ಹೊಕ್ರಾಣಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts