More

    ಹೂಡಿಕೆ ಮಾಡಿ ಮೋಸ ಹೋಗಿದ್ದೀರಾ..? ದೂರು ದಾಖಲಿಸುವುದು ಈಗ ಬಲು ಸುಲಭ ಹೇಗೆ ಇಲ್ಲಿ ನೋಡಿ..

    ಮುಂಬೈ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಕೆಲ ದಿನಗಳ ಹಿಂದಷ್ಟೆ ಹೂಡಿಕೆದಾರರಿಗೆ ಮೊಬೈಲ್ ಆ್ಯಪ್ ಲಾಂಚ್ ಮಾಡಿತ್ತು. ಮ್ಯೂಚುಯಲ್ ಫಂಡ್ಸ್​, ಪಟ್ಟಿ ಮಾಡಿದ ಕಂಪನಿಗಳು, ನೋಂದಾಯಿತ ಮಧ್ಯವರ್ತಿಗಳು ಸೇರಿ ಇನ್ನಿತರ ಕುಂದುಕೊರತೆಗಳ ಬಗ್ಗೆ ‘ಸೆಬಿ ಸ್ಕೋರ್ಸ್’ ಆಪ್​ ಮೂಲಕ ದೂರು ನೀಡಬಹುದು.

    ಹೂಡಿಕೆ ಬಗ್ಗೆ ನಿಮ್ಮ ಸಲಹೆಗಾರರು ಅಥವಾ ನಿಮ್ಮ ಮ್ಯೂಚುಯಲ್ ಫಂಡ್ ಕಂಪನಿ ವಿರುದ್ಧ ಕಂಪ್ಲೇಂಟ್​ ಕೊಡಬಹುದು. ಇದಕ್ಕೆ ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು. ಸೆಬಿ ಆಪ್​ ನಿಮಗೆ ಹೆಲ್ಪ್ ಮಾಡುತ್ತೆ. ಅಂಡ್ರಾಯ್ಡ್​ ಮತ್ತು ಐಒಎಸ್ ಸ್ಮಾರ್ಟ್​ ಪೋನ್​​ ಬಳಸಿ ಸ್ಕೋರ್ಸ್​ ಆಪ್ ಡೌನ್​ ಲೋಡ್​ ಮಾಡಿಕೊಳ್ಳಬಹುದಾಗಿದ್ದು. ಇಂಟರ್​ನೆಟ್​ ಮುಖಾಂತರವೂ ಸ್ಕೋರ್ಸ್​ ಆಪ್​ ಡೌನ್​ ಲೋಡ್​​ಗೆ ಅವಕಾಶವಿದೆ.

    ಆಪ್ ಡೌನ್ ಲೋಡ್​​ ಆದ ಬಳಿಕ ರಿಜಿಸ್ಟರ್ ಮಾಡಲು ಪ್ಯಾನ್​ ಮತ್ತು ಮೊಬೈಲ್ ನಂಬರ್ ಕಡ್ಡಾಯಗೊಳಿಸಲಾಗಿದೆ. ಮ್ಯೂಚುಯಲ್ ಫಂಡ್ಸ್, ಠೇವಣಿ ಭಾಗಿದಾರರು, ನೋಂದಾಯಿತ ಕಂಪನಿ, ಸ್ಟಾಕ್ ಬ್ರೋಕರ್ಸ್ರ್,​ ಹೂಡಿಕೆ ಸಲಹೆಗಾರರ ಬಗ್ಗೆ ವಿವಿಧ ವಿಭಾಗಗಳಲ್ಲಿ ದೂರು ಸಲ್ಲಿಸಬಹುದು. ಜೊತೆಗೆ ಸಾಮೂಹಿಕ ಹೂಡಿಕೆ ಯೋಜನೆಗಳು, ಕಂಪನಿಯ ಪರಿಚಯ ಪತ್ರಗಳು ಇವುಗಳ ಬಗ್ಗೆ ಆಗಿಂದಾಗೇ ಮಾಹಿತಿಗಳನ್ನು ಪರಿಶೀಲಿಸಬಹುದು. ಸ್ಕೋರ್ಸ್​​ ಆಪ್ ಹೂಡಿಕೆದಾರರ ಸ್ನೇಹಿಯಾಗಿದೆ. ಮಾಹಿತಿಗೆ – https://scores.gov.in/scores/Welcome.html (ಏಜೆನ್ಸೀಸ್​)

    ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ಪಟ್ಟ ಕಳೆದುಕೊಂಡಿದ್ದು ಹೇಗೆ? ಜಾಕ್ ಮಾಗೆ ಜಾಕ್​ಪಾಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts