More

    ಅರಳಗುಂಡಗಿಯಲ್ಲಿ ಗ್ರಾಪಂ ಚುನಾವಣೆ ಮೀರಿಸಿದ ಎಸ್‌ಡಿಎಂಸಿ ಆಯ್ಕೆ ಪ್ರಕ್ರಿಯೆ !

    ಅರಳಗುಂಡಗಿ: ಶಾಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ)ಯನ್ನು ಗ್ರಾಮಸ್ಥರ ಸಮ್ಮುಖದಲ್ಲಿ ರಚನೆ ಮಾಡುವುದು ಸಾಮಾನ್ಯ. ಆದರೆ ಅರಳಗುಂಡಗಿಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮೀರಿಸುವಷ್ಟರ ಮಟ್ಟಿಗೆ ನಡೆದಿದೆ.

    ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಹಿಂದೆಯೇ ಎಸ್‌ಡಿಎಂಸಿ ರಚನೆಯಾಗಿದ್ದು, ಸಿದ್ದಲಿಂಗಪ್ಪ ಚೌಕಾನೂರು ಅಧ್ಯಕ್ಷರಾಗಿದ್ದರು. ಸರಿಯಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ, ಸುಮ್ಮನೆ ಕಿರಿಕಿರಿ ಕೊಡುತ್ತಿದ್ದಾರೆ ಎಂದು ಆರೋಪಿಸಿ ಅ.26ರಂದು ಇವರ ವಿರುದ್ಧ ಸದಸ್ಯರು ಅವಿಶ್ವಾಸ ಮಂಡಿಸಿದ್ದು, ಒಟ್ಟು ಒಂಬತ್ತರಲ್ಲಿ 8 ಜನರು ಅವಿಶ್ವಾಸ ಪರ ಕೈ ಎತ್ತುವ ಮೂಲಕ ಚೌಕಾನೂರು ಅವರನ್ನು ಹುದ್ದೆಯಿಂದ ಕೆಳಗಿಳಿಸಿದರು.

    ಬಳಿಕ ಅಧ್ಯಕ್ಷ ಹುದ್ದೆಗಾಗಿ ಗ್ರಾಮಸ್ಥರದ್ದು ಹಾಗೂ ಶಾಲೆಯ ಕೆಲ ಶಿಕ್ಷಕರ ಬೆಂಬಲಿತ ಸೇರಿ 2 ಬಣಗಳಾಗಿದ್ದವು. ಐವರು ಸದಸ್ಯರು ಗ್ರಾಮಸ್ಥರ ಪರವಿದ್ದರೆ, ನಾಲ್ವರು ಶಿಕ್ಷಕರ ಹಿಡಿತದಲ್ಲಿದ್ದರು. ಇವರೆಲ್ಲರೂ ಭರ್ಜರಿ ಟೂರ್ ಹೋಗಿದ್ದರು. ಇದನ್ನರಿತ ಗ್ರಾಮದ ಮುಖಂಡರು ವಿರೋಧಿ ಬಣದ ಸದಸ್ಯರೊಂದಿಗೆ ಮಾತನಾಡಿ, ಇಬ್ಬರ ಮನವೊಲಿಸಿ ಗ್ರಾಮಕ್ಕೆ ವಾಪಸ್ ಕರೆಸಿದ್ದರು.

    ಗುರುವಾರ ಬೆಳಗ್ಗೆ ಶಾಲೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಹಮ್ಮಿಕೊಂಡಿದ್ದು, ಶಿಕ್ಷಕರ ಬೆಂಬಲಿತ ಬಣದಲ್ಲಿದ್ದ ಸದಸ್ಯರು ಸಭೆಗೆ ಬಂದಿರಲಿಲ್ಲ. ಹೀಗಾಗಿ 7 ಸದಸ್ಯರ ಬೆಂಬಲ ಹೊಂದಿದ್ದ ಶರಣಪ್ಪ ಉಪ್ಪಾರ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಯಿತು.
    ಮುಖ್ಯಗುರು ರವಿ ಜೋರಾಪುರ, ಶಿP್ಷÀಕರಾದ ಅಶೋಕ ಬಡದಾಳ, ಚಿದಾನಂದ ಕಲ್ಲೂರ, ಮೇಘರಾಜ ವೈ., ದಾನಮ್ಮ ಮುದಬಸಪ್ಪಗೋಳ, ಸಿದ್ದಲಿಂಗಪ್ಪ ಬಿರಾದಾರ, ಜಾವೀದ್ ಖಾಜಿ, ಎಸ್‌ಡಿಎಂಸಿ ಸದಸ್ಯರಾದ ಪ್ರಕಾಶ ಮೆಲೇಕರ್, ಶರಣಪ್ಪ ಹರ್ನೂರ, ಸುವರ್ಣ ತಳವಾರ, ಕಸ್ತೂರಿಬಾಯಿ ಗುತ್ತರಗಿ, ಪರ್ವಿನಾ ಸೋಮಜಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts