More

    ವಿದ್ಯಾರ್ಥಿಗಳಲ್ಲಿ ಹೆಚ್ಚಲಿ ವೈಜ್ಞಾನಿಕ ಮನೋಭಾವ: ಫೀಯರ್ ನೆದರ್ಲ್ಯಾಂಡ್ ಸಲಹೆ

    ಯಲಬುರ್ಗಾ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ಗಮನ ಹರಿಸಬೇಕು ಎಂದು ನ್ಯೂನೇಮ್ಸ್ ಸಂಸ್ಥೆಯ ಮುಖ್ಯಸ್ಥ ಫೀಯರ್ ನೆದರ್ಲ್ಯಾಂಡ್ ಹೇಳಿದರು.

    ತಾಲೂಕಿನ ತರಲಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ ಹಾಗೂ ಬಿಎಸ್‌ಎಫ್, ಎಪಿವಿ ನೆದರ್ಲ್ಯಾಂಡ್, ಮೈತ್ರಿ ಸೇವಾ ಸಮಿತಿ, ಸ್ಟೀಮ್ ಲನಿರ್ಂಗ್ ಪ್ರೈವೆಟ್ ಲಿ. ಬುಧವಾರ ಹಮ್ಮಿಕೊಂಡಿದ್ದ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಬೇಕು. ಪ್ರಯೋಗಾಲಯದ ಮೂಲಕ ವಿಜ್ಞಾನದ ಮಾಹಿತಿ ಪಡೆಯಬೇಕು ಎಂದರು.
    ಗ್ರಾಮೀಣ ರೈತರು ಹನಿ ನೀರಾವರಿ ಅಳವಡಿಸಿಕೊಂಡು ಬೀಜೋತ್ಪಾದನೆಯಲ್ಲಿ ತೊಡಗುವ ಮೂಲಕ ಆರ್ಥಿಕವಾಗಿ ಸಬಲರಾಗಿದ್ದಾರೆ. ಜತೆಗೆ ಕಂಪನಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

    ನ್ಯೂನೇಮ್ಸ್ ಸಂಸ್ಥೆ ಮುಖ್ಯಸ್ಥ ಗಂಗಾಧರಸ್ವಾಮಿ ಮಾತನಾಡಿ, ಕಂಪನಿಯು 300ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಬಾಲಕಾರ್ಮಿಕ ಪದ್ಧತಿಯಿಂದ ದೂರ ಮಾಡಿದೆ. ಶಾಲೆ ಬಿಟ್ಟ ವಯಸ್ಕರನ್ನು ಗುರುತಿಸಿ ಹೊಲಿಗೆಯಂತ್ರ, ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ವಿಜ್ಞಾನ ಕಲಿಕೆಗೆ ಪೂರಕವಾಗುವ ಶಾಲೆಗಳನ್ನು ಗುರುತಿಸಿ ಪ್ರಯೋಗಾಲಯ ಸ್ಥಾಪಿಸಲಾಗುತ್ತದೆ ಎಂದರು.

    ಸಂಸ್ಥೆಯ ಮಹಿಳಾ ಮುಖ್ಯಸ್ಥೆ ಬೀರ್ಗೆಟ್ ಮಾತನಾಡಿದರು. ಸ್ಟೀಮ್ ಕಂಪನಿ ವ್ಯವಸ್ಥಾಪಕ ಮಹೇಶ, ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ ದೊಡ್ಮನಿ, ಪ್ರಮುಖರಾದ ವೆಂಕಟರಮಣ ಹೆಗಡೆ, ಗೋಪಿನಾಥ, ಟಿ.ಬಿ.ಮೂರ್ತಿ, ನಿರಂಜನ, ಎನ್.ಎಸ್.ಸುನೀಲ್‌ಕುಮಾರ, ಹರೀಶಬಾಬು, ತೇಜನಗೌಡ ಪಾಟೀಲ್, ಮಲ್ಲನಗೌಡ ಪಾಟೀಲ್, ಮಂಜುಳಾ ಮಾಲಿಪಾಟೀಲ್, ಬಸವರಾಜ, ಲಾಲ್‌ಸಾಬ್, ಪ್ರಭುಗೌಡ ಪಾಟೀಲ್, ತೋಟಪ್ಪ ಬೇವೂರು, ಮುಖ್ಯಶಿಕ್ಷಕರಾದ ಸರಸ್ವತಿ ಅಬ್ಬಿಗೇರಿ, ದೇವಪ್ಪ ವಾಲ್ಮೀಕಿ, ಗ್ರಾಪಂ ಸದಸ್ಯರಾದ ಹನುಮೇಶ ವಡ್ಡರ, ಬಸಪ್ಪ ಕೋಳೂರು, ಪ್ರಕಾಶ ಮಾಲಿಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts