More

    ಮೋಕಲಿಯಲ್ಲಿ ವಿಜ್ಞಾನ, ಆಹಾರ ಮೇಳ

    ಅರಕಲಗೂಡು: ಪಟ್ಟಣ ಹೊರವಲಯದ ಮೋಕಲಿ ಬಳಿಯ ವಿಸ್ಡಮ್ ವ್ಯಾಲಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಶನಿವಾರ ವಿಜ್ಞಾನ ಮತ್ತು ಆಹಾರ ಮೇಳ ಆಯೋಜಿಸಲಾಗಿತ್ತು.


    ವಿವಿಧ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ರೂಪಿಸಿ ವಿಜ್ಞಾನ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಿದ್ದರು. ಹಲವು ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಮಾರಾಟಕ್ಕಿಟ್ಟಿದ್ದರು. ಸಮೋಸಾ, ಬಜ್ಜಿ, ಬಿರಿಯಾನಿ, ಮಸಾಲಾ ರೈಸ್, ಮಜ್ಜಿಗೆ, ಚುರುಮುರಿ, ಅವಲಕ್ಕಿ ಒಗ್ಗರಣೆ, ಕ್ಯಾರೆಟ್ ಹಲ್ವಾ ಹೀಗೆ ಹತ್ತಾರು ಬಗೆಯ ತಿಂಡಿ, ತಿನಿಸುಗಳು ಬಾಯಿ ಚಪ್ಪರಿಸುವಂತೆ ಮಾಡಿತು.


    ಮಕ್ಕಳಲ್ಲಿ ವ್ಯಾಪಾರ-ವಹಿವಾಟು, ಲಾಭ ಕುರಿತು ಅರಿವು ಮೂಡಿಸಲು ಶಾಲಾ ಆಡಳಿತ ಮಂಡಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳು ಪಾಲಕರ ನೆರವಿನಿಂದ ಬಗೆ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಶಾಲಾ ಆವರಣದಲ್ಲಿಯೇ ಮಳಿಗೆ ತೆರೆದು ಮಾರಾಟ ಮಾಡಿದರು. ಪಾಲಕರು, ಅವರ ಸಂಬಂಧಿಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಧಾವಿಸಿ ತಿನಿಸುಗಳನ್ನು ಖರೀದಿಸಿ ಸವಿದರು.


    ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜು ಮೇಳಕ್ಕೆ ಚಾಲನೆ ನೀಡಿ, ಆಧುನಿಕ ಜಗತ್ತಿನಲ್ಲಿ ವಿಜ್ಞಾನದ ಮಹತ್ವ ಹಿರಿದಾಗುತ್ತಿದ್ದು, ಮಕ್ಕಳಲ್ಲಿ ಹೆಚ್ಚಿನ ಜ್ಞಾನ ಬಿತ್ತಬೇಕಿದೆ. ವಿಜ್ಞಾನ ಮತ್ತು ಆಹಾರ ಮೇಳದಂಥ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ಸಂಸ್ಥೆಯ ಸಾಕಿಬ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts