More

    ಶಾಲಾ ಶಿಕ್ಷಕರ ರಜೆ ಏಪ್ರಿಲ್​ 11ಕ್ಕೆ ವಿಸ್ತರಿಸಿದ ರಾಜ್ಯ ಸರ್ಕಾರ: ವಿದ್ಯಾರ್ಥಿ ದಾಖಲಾತಿ ಆರಂಭಿಸಿದರೆ ಮಾನ್ಯತೆ ರದ್ದು ಅಥವಾ ಇತರೆ ಕಠಿಣ ಕ್ರಮದ ಎಚ್ಚರಿಕೆ

    ಬೆಂಗಳೂರು: ಕರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಏಪ್ರಿಲ್ 14ರ ತನಕ ಲಾಕ್​ಡೌನ್ ಘೋಷಿಸಲಾಗಿದೆ. ಇದಕ್ಕೂ ಮೊದಲೇ ರಾಜ್ಯದ ಶಿಕ್ಷಕರಿಗೆ ಮಾರ್ಚ್​ 31ರ ತನಕ ವರ್ಕ್​ ಫ್ರಂ ಹೋಮ್​ ಘೋಷಿಸಿ ರಜೆಯನ್ನು ಒದಗಿಸಲಾಗಿತ್ತು. ಈಗ ಇದನ್ನು ಏಪ್ರಿಲ್​ 11 ರ ತನಕ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಈ ಕುರಿತಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್​ ಅವರು ಫೇಸ್​ಬುಕ್​ನಲ್ಲಿ ಪ್ರಕಟಿಸಿರುವ 13 ನಿಮಿಷಗಳ ವಿಡಿಯೋ ಸಂದೇಶದ ಮೂಲಕ ಸ್ಪಷ್ಟಪಡಿಸಿದ್ದಾರೆ. ಶಾಲಾ ಶಿಕ್ಷಕರಿಗೆ ವರ್ಕ್​ ಫ್ರಂ ಹೋಂ ಗಾಗಿ ಕೆಲವು ಕೆಲಸಗಳನ್ನು ನಿಗದಿಪಡಿಸಿ ಶಿಕ್ಷಕರಿಗೆ ಮಾಡುವಂತೆ ಸೂಚಿಸಲಾಗಿತ್ತು. ಅದನ್ನು ಪೂರೈಸಬೇಕು. ಈಗ ರಜೆ ವಿಸ್ತರಣೆ ಆಗಿರವ ಕಾರಣ ಅದನ್ನು ಸರಿಯಾಗಿ ಮಾಡಬೇಕು. ಅಲ್ಲದೆ, ಕೇಂದ್ರ ಸ್ಥಾನದಲ್ಲೇ ಇರಬೇಕು. ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು ಎಂದು ಅವರು ಹೇಳಿದ್ದಾರೆ.

    ಅಲ್ಲದೆ, ದೇಶ ಈಗ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಶಾಲಾ ಶಿಕ್ಷಕರು ಮಾಡಬಹುದಾದ ಕೆಲಸಗಳು ಏನಾದರೂ ಬಂದಲ್ಲಿ ಅವರಿಗೆ ಅದನ್ನು ಇಲಾಖೆ ಮುಖೇನ ಸೂಚಿಸಲಾಗುವುದು. ಹೀಗಾಗಿ ಕೇಂದ್ರ ಸ್ಥಾನ ಬಿಡಬಾರದು ಎಂಬ ಸಂದೇಶವನ್ನು ರವಾನಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಅವಕಾಶ ನಮಗೆ ಸಿಕ್ಕಿಲ್ಲ. ಆದರೆ, ದೇಶದ ಅಗತ್ಯ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದಕ್ಕೆ ನಾವು ಸಜ್ಜಾಗಬೇಕು ಎಂದು ಸಚಿವರು ತಿಳಿಸಿದ್ದಾರೆ.

    ದೇಶ ಮತ್ತು ದೇಶದ ಜನತೆ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಶಾಲಾ ದಾಖಲಾತಿ ಆರಂಭಿಸಿದರೆ ಅಂಥ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.

    ಕೆಲವು ಖಾಸಗಿ ಶಾಲೆಗಳಲ್ಲಿ ಶುಲ್ಕ ಪಾವತಿಸಬೇಕು. ತಪ್ಪಿದರೆ ದಿನಕ್ಕೆ 50 ರೂ. 100 ರೂ. ದಂಡ ಪಾವತಿಸಬೇಕು ಎಂಬ ಸಂದೇಶವನ್ನು ಪಾಲಕರಿಗೆ ಆಡಳಿತ ಮಂಡಳಿ ಕಳುಹಿಸಿರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ಸ್ಥಿತಿಗತಿಯಲ್ಲಿ ಇಂತಹ ಕ್ರಮ ಒಳ್ಳೆಯದಲ್ಲ. ಸರ್ಕಾರದ ಆದೇಶ ಧಿಕ್ಕರಿಸಿ ಯಾವುದಾದರೂ ಶಾಲೆಯ ಆಡಳಿತ ಮಂಡಳಿ ಶಾಲೆಯ ಮಕ್ಕಳ ದಾಖಲಾತಿ ಮತ್ತು ಶುಲ್ಕ ವಸೂಲಿಗೆ ಮುಂದಾದರೆ ಅಂತಹ ಶಾಲೆಗಳ ಮಾನ್ಯತೆಯನ್ನು ಸರ್ಕಾರ ರದ್ದುಗೊಳಿಸಲಿದೆ. ಅಲ್ಲದೇ ಅತಿ ಹೆಚ್ಚು ದಂಡವನ್ನೂ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶಗಳಿವೆ ಎಂದು ಸಚಿವರು ಎಚ್ಚರಿಸಿದ್ದಾರೆ.

    VIDEO| ರಜೆ ಅಂತ ರಿಲ್ಯಾಕ್ಸ್ ಮಾಡ್ಬೇಡಿ ಪರೀಕ್ಷೆಗೆ ಸಜ್ಜಾಗಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರ ಸಲಹೆ

    Suresh Kumar S ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮಾರ್ಚ್ 30, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts