More

    ಪಜಾತಿ ಮತ್ತು ಪಪಂಗಡದವರ ಮೇಲಿನ ದೌರ್ಜನ್ಯ, ಕೊಲೆ ಪ್ರಕರಣಗಳಿಗೆ ಖಂಡನೆ

    ಕುಷ್ಟಗಿ: ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರ ಮೇಲೆ ಕೊಲೆ ಹಾಗೂ ದೌರ್ಜನ್ಯ ಪ್ರಕರಣ ಹೆಚ್ಚಿತ್ತಿವೆ ಎಂದು ಆರೋಪಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಯಿಂದ ಎಸ್ಸಿ-ಎಸ್ಟಿ ಸಮುದಾಯದ ನೂರಾರು ಜನ ಶನಿವಾರ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ. ಸಿದ್ದೇಶ್‌ಗೆ ಮನವಿ ಸಲ್ಲಿಸಿದರು.

    ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ಟಿ.ರತ್ನಾಕರ ಮಾತನಾಡಿ, ಕನಕಗಿರಿ ತಾಲೂಕಿನ ವಡಕಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಯುವಕನ ಕೊಲೆಯಾಗಿದ್ದು, ಯುವಕನ ಕುಟುಂಬಕ್ಕೆ ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಬೇಕು. ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ವೈರಲ್ ಮಾಡಲಾಗಿದೆ. ತಾಲೂಕಿನ ತಳವಗೇರಾ ಗ್ರಾಮದ ಮೇಲ್ವರ್ಗದ ಜಾತಿಯ ಯುವಕನ ಕೊಲೆಯನ್ನು ಮೇಲ್ವರ್ಗದವರೇ ಮಾಡಿ ಅಪರಾಧವನ್ನು ವಾಲ್ಮೀಕಿ ಸಮುದಾಯದವರ ಮೇಲೆ ಹಾಕಿ 17 ಜನರನ್ನು ಜೈಲಿಗೆ ಕಳುಹಿಸಲಾಗಿದೆ. ಪುನಃ ಅದೇ ಗ್ರಾಮದಲ್ಲಿ ಉದ್ದೇಶಪೂರ್ವಕವಾಗಿ ಮೇಲ್ವರ್ಗದ ಜನರು ವಾಲ್ಮೀಕಿ ಸಮುದಾಯದ ಹನುಮೇಶ ಬಲುಕುಂದಿಯನ್ನು ಟ್ಯಾಕ್ಟರ್ ಹಾಯಿಸಿ ಕೊಲೆ ಮಾಡಿ ಕೊಲೆಯನ್ನು ಪ್ರಭಾವಿ ವ್ಯಕ್ತಿಗಳ ಕುಮ್ಮಕ್ಕಿನಿಂದ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ಅಪಘಾತವೆಂದು ದಾಖಲಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

    ಪುರಸಭೆ ಸದಸ್ಯ ವಸಂತಪ್ಪ ಮೇಲಿಮನಿ, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ಬಸವರಾಜ ನಾಯಕ್, ಸಮುದಾಯದ ಪ್ರಮುಖರಾದ ಚಂದಪ್ಪ ತಳವಾರ್, ಭಾರತೀ ನಿರಗೇರಿ, ನಾರಾಯಣಪ್ಪ, ಸುರೇಶ, ಶರಣಪ್ಪ ನಾಯಕ, ಚಂದ್ರಹಾಸ ಬಾವಿಕಟ್ಟಿ, ಯಮನಪ್ಪ ನಾಯಕ್, ಕೆ.ಎನ್.ಪಾಟೀಲ್, ಶಿವರಡ್ಡಿ, ರಾಜಾನವೀನಚಂದ್ರ ನಾಯಕ್, ನಾಗರಾಜ, ಶರಣಪ್ಪ, ಮಂಗಳೇಶ, ಪಂಪಣ್ಣ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts