More

    ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಮೊತ್ತ ನಿಗದಿಪಡಿಸಿ: ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಆದೇಶ

    ನವದೆಹಲಿ : ಕರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ಕಡ್ಡಾಯವಾಗಿ ನೀಡಲೇಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. ಆದರೆ, ಹೀಗೆ ಸಹಾಯಾರ್ಥವಾಗಿ ನೀಡುವ ಮೊತ್ತದ ಪ್ರಮಾಣವನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಸರ್ಕಾರಕ್ಕೆ ನೀಡಿದೆ.

    ಜೊತೆಗೆ, ಕರೊನಾ ಸಾವಿನ ಪ್ರಕರಣಗಳಲ್ಲಿ ಸಾವಿನ ಕಾರಣವನ್ನು ಕರೊನಾ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ ಮರಣ ಪ್ರಮಾಣಪತ್ರಗಳನ್ನು ನೀಡಬೇಕು ಎಂದಿರುವ ಕೋರ್ಟ್​, ಕರೊನಾ ಚಿಕಿತ್ಸೆಗಾಗಿ ಸೂಕ್ತ ವಿಮಾ ಯೋಜನೆಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

    ಕರೊನಾ ಸಂತ್ರಸ್ತರಿಗೆ ಕನಿಷ್ಠ 4 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ನಿಗದಿ ಮಾಡಬೇಕೆಂದು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್​ ಇಂದು ಈ ಆದೇಶ ಹೊರಡಿಸಿದೆ. ಕರೊನಾ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸದೆ ನಾಷನಲ್ ಡಿಸಾಸ್ಟರ್​ ಮ್ಯಾನೇಜ್​ಮೆಂಟ್​ ಅಥಾರಿಟಿ(ಎನ್​ಡಿಎಂಎ) ತನ್ನ ಕಾನೂನುಬದ್ಧ ಕರ್ತವ್ಯದಲ್ಲಿ ಲೋಪ ತೋರಿದೆ. ಹೀಗಾಗಿ ಕೂಡಲೇ ಎನ್​ಡಿಎಂಎ ಪರಿಹಾರದ ಕನಿಷ್ಠ ಮಟ್ಟವನ್ನು ರೂಪಿಸಬೇಕೆಂದು ಕೋರ್ಟ್​ ನಿರ್ದೇಶನ ನೀಡಿದೆ.

    ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ್ ರೆಡ್ಡಿ ಆತ್ಮಹತ್ಯೆಗೆ ಯತ್ನ

    ಕೆಲವು ದಿನಗಳ ಮುನ್ನ, ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಕರೊನಾದಿಂದ ಮೃತಪಟ್ಟ ಪ್ರತಿಯೊಬ್ಬರಿಗೂ 4 ಲಕ್ಷ ರೂಪಾಯಿಗಳನ್ನು ಕೊಡುವುದು ಸಾಧ್ಯವಿಲ್ಲ. ರಾಜ್ಯ ಸರ್ಕಾರಗಳು ನಿಯಮಿತ ಸಂಪನ್ಮೂಲಗಳನ್ನು ಹೊಂದಿದ್ದು, ಭೂಕಂಪ ಮತ್ತು ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳಿಗೆ ಒಳಗಾದವರಿಗೆ ನೀಡಲು ಹಣದ ಅವಶ್ಯಕತೆ ಹೆಚ್ಚಿದೆ. ವೈದ್ಯಕೀಯ ಮತ್ತಿತರ ಅತ್ಯಾವಶ್ಯಕ ಸೌಲಭ್ಯಗಳನ್ನು ಒದಗಿಸಲು ಹಣದ ಅವಶ್ಯಕತೆಯಿದೆ ಎಂದು ಹೇಳಿತ್ತು.

    ಸರ್ಕಾರದ ವಾದವನ್ನು ಅಂಗೀಕರಿಸಿರುವ ಕೋರ್ಟ್​, ಎನ್​ಡಿಎಂಎಗೆ ಪರಿಹಾರ ಮೊತ್ತವನ್ನು ನಿರ್ಧರಿಸುವ ಜವಾಬ್ದಾರಿ ನೀಡಿದೆ. ಜೊತೆಗೆ ಕರೊನಾಕ್ಕೆ ಬಲಿಯಾದವರ ಮರಣ ಪ್ರಮಾಣ ಪತ್ರಗಳಲ್ಲಿ ಸಾವಿನ ಕಾರಣ ಕರೊನಾ ಎಂಬುದನ್ನು ನಿರ್ದಿಷ್ಟವಾಗಿ ಉಲ್ಲೇಖಿಸುವುದಕ್ಕೆ ಕ್ರಮ ತೆಗೆದುಕೊಳ್ಳಲೂ ಸೂಚಿಸಿದೆ. (ಏಜೆನ್ಸೀಸ್)

    ಹೂಡಿಕೆ ಹಣ ಹಿಂತಿರುಗಿಸುವಂತೆ ಕೋ-ಆಪರೇಟಿವ್ ಬ್ಯಾಂಕ್ ಠೇವಣಿದಾರ‌ರ ಪ್ರತಿಭಟನೆ

    ಹಣಕ್ಕಾಗಿ ಅಪಹರಿಸಿ ಕೊಲೆಗೈದರು, ಕರೊನಾ ರೋಗಿ ಎಂಬಂತೆ ಹೂತುಹಾಕಿದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts