More

    ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಿಲ್ಲ

    ಸಿರಗುಪ್ಪ: ಅನೇಕ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಿಲ್ಲ. ಬಿಜೆಪಿ ಸರ್ಕಾರ ಶೇ.3 ಮತ್ತು 4 ಮೀಸಲು ಹೆಚ್ಚಳ ಮಾಡಿದೆ ರಾಜ್ಯಸಭಾ ಸದಸ್ಯ ಕೆ.ಲಕ್ಷ್ಮಣ ಜೀ ಹೇಳಿದರು.

    ಇದನ್ನೂ ಓದಿ:ಎಸ್ಸಿ-ಎಸ್ಟಿ ಮೀಸಲಾತಿಯಲ್ಲಿ ಗೊಂದಲ ಸೃಷ್ಟಿ

    ತಾಲೂಕು ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಶ್ರೀಬಸವೇಶ್ವರರ ಅನುಭವ ಮಂಟಪದಂತೆ ಎಲ್ಲ ವರ್ಗದ ಜನಾಂಗದವರಿಗೆ ಸಚಿವ ಸ್ಥಾನ ನೀಡಿ ಸಾಮಾಜಿಕ ನ್ಯಾಯವನ್ನು ಕೇಂದ್ರ ಸರ್ಕಾರ ಎತ್ತಿ ಹಿಡಿದಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕೇಂದ್ರದಿಂದ ಗ್ರಾಮೀಣ ಭಾಗದ ಫಲಾನುಭವಿಗೆ ಅನುದಾನ ನೀಡಿದರೆ ಶೇ.100ರಲ್ಲಿ 15 ಮಾತ್ರ ಮುಟ್ಟುತ್ತದೆ ಎಂದು ಅಂದಿನ ಪ್ರಧಾನಿ ರಾಜೀವಗಾಂಧಿ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಕೋಟಿ ಕೋಟಿ ರೂ. ಅನುದಾನವು ಒಂದು ರೂಪಾಯಿ ಭ್ರಷ್ಟಾಚಾರ ನಡೆಯದೆ ನೆರವಾಗಿ ಫಲನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಇದು ಅವರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕಾರ್ನಾಟಕ ರಾಜ್ಯವನ್ನು ಎಟಿಎಂನಂತೆ ಬಳಸಿಕೊಂಡಿದೆ ಎಂದು ಆರೋಪಿಸಿದರು.

    ರಾಜ್ಯಸಭಾ ಸದಸ್ಯ ಕೆ.ಲಕ್ಷ್ಮಣ ಜೀ ಆರೋಪ

    ಬಿಜೆಪಿ ಅಭ್ಯರ್ಥಿ ಎಂ.ಎಸ್.ಸೋಮಲಿಂಗಪ್ಪ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಡಬಲ್ ಇಂಜನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದರು. ನಂತರ 9ನೇ ವಾರ್ಡ್‌ನ ನಗರ ಸಭೆ ಸದಸ್ಯ ಕಮಲ್‌ಬಾಷಾ. ಮುಖಂಡರಾದ ಖಾಸೀಂ, ಅಮಜಾನ್, ಆದಾಂ ಬಾಷಾ, ಆಲಂಬಾಷಾ ಇತರರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು.


    ಮುಖಂಡರಾದ ದೇವರಾಜ, ಗುರುಸಿದ್ದಯ್ಯಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ದಮ್ಮೂರು ಸೋಮಪ್ಪ, ಕಮಲ್ ಸಾಬ್, ಚಾಗಿಸುಬ್ಬಯ್ಯ, ಮಧುಸೂದನ ಶೆಟ್ಟಿ, ಮಾರುತಿ, ಮೆಕಲಿ ವೀರೇಶ, ಕೆ.ಕೃಷ್ಣ್ಣ, ಡಿ.ವೆಂಕಟೇಶ, ಎಚ್.ವಿಜಯಕುಮಾರ್, ಎಸ್.ಲಕ್ಷ್ಮಣ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts