More

    ಸವನಿಧೀ ಆತಲೇ ಪರಾಕ್

    ಗುತ್ತಲ: ‘ಸವನಿಧೀ ಆತಲೇ ಪರಾಕ್…’ ಇದು ಹಾವನೂರ ಸಮೀಪದ (ಚಿಕ್ಕ ಮೈಲಾರ) ಜೋಗ ಮರಡಿಯಲ್ಲಿ ಭಾನುವಾರ ಸಂಜೆ ಗೊರವಪ್ಪ ಹೊನ್ನಪ್ಪ ಬಿಲ್ಲರ ಹೇಳಿದ ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿ.

    ಸಾಂಪ್ರದಾಯಿಕ ಪೂಜೆಗಳ ನಂತರ ಮೈಲಾರಲಿಂಗೇಶ್ವರನನ್ನು ಮೆರವಣಿಗೆಯಲ್ಲಿ ತರಲಾಯಿತು. ನಂತರ ಚಿಕ್ಕ ಮೈಲಾರದಿಂದ ಗಂಗಮಾಳವ್ವ ಮೂರ್ತಿಗಳ ಆಗಮನದ ನಂತರ ಗೊರವಪ್ಪ 15-20 ಅಡಿ ಎತ್ತರದ ಬಿಲ್ಲನ್ನೇರಿ ವರ್ಷ ಭವಿಷ್ಯ ಎಂದೇ ಅರ್ಥೈಸಲಾಗುವ ಕಾರ್ಣಿಕವನ್ನು ನುಡಿದರು. ಒಂದೇ ವಾಕ್ಯದ ವರ್ಷ ಭವಿಷ್ಯ ‘ಸವನಿಧೀ ಆತಲೇ ಪರಾಕ್…’ ಹೇಳಿ ಮೇಲಿಂದ ಗೊರವಪ್ಪ ಉತ್ತರ ದಿಕ್ಕಿನ ಕಡೆ ತಲೆ ಮಾಡಿ ಬಿದ್ದಿದ್ದರಿಂದ ಆ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗಲಿದೆ ಎಂದು ನಂಬಲಾಯಿತು.

    ಈ ಬಾರಿಯ ಕಾರ್ಣಿಕವನ್ನು ಅನೇಕ ರೀತಿಯಲ್ಲಿ ಅರ್ಥೈಸಲಾಗಿದೆ. ಈ ವರ್ಷದ ಮುಂಗಾರು ಹಾಗೂ ಹಿಂಗಾರು ಮಳೆಗಳಲ್ಲಿ ಸಮತೋಲನವಾಗಿದ್ದು, ಯಾವುದೇ ಸಮಸ್ಯೆ ಎದುರಾಗದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ರೈತರಿಗೆ ಉತ್ತಮ ಫಸಲು ಬರುವುದಲ್ಲದೆ, ಬೆಂಬಲ ಬೆಲೆ ಸಿಕ್ಕಿ ಸಂತೋಷವಾಗಿರುತ್ತಾನೆ ಎಂದು ಕೆಲವರು ಅರ್ಥೈಸಿದರೆ, ಇನ್ನು ಕೆಲವರು, ರೈತರಿಗೆ ಕಷ್ಟ ಹಾಗೂ ಸುಖ ಸಮನಾಗುವುದು ಎಂಬರ್ಥದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ರಾಜಕೀಯ ವಲಯಕ್ಕೆ ಅರ್ಥೈಸಿ ಮಾತನಾಡಿದ ಅನೇಕರು, ಯಾವುದೇ ಏರುಪೇರಾಗದೇ ಸಮಾನ ಸ್ಥಿತಿಯಲ್ಲಿರುವುದು ಎಂದು ತಿಳಿಸಿದರು.

    ಕಾರ್ಣಿಕವನ್ನು ವೀಕ್ಷಿಸಲು ಹಾವನೂರ ಸೇರಿದಂತೆ ಗುತ್ತಲ, ಹರಳಹಳ್ಳಿ, ಹುರುಳಿಹಾಳ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರು.

    ಮೇಲಕ್ಕೆ ಹೋಗಿ ಜಾರಿದ ಗೊರವಪ್ಪ: ಮೊದಲು ಬಿನ್ನಲ್ಲನ್ನೇರಿದ ಗೊರವಪ್ಪ ಮೇಲಕ್ಕೆ ಹೋಗಿ ಜಾರಿದರು. ನಂತರ ಪುನಃ ಹತ್ತಿ ಅವಸರವಾಗಿ ಕಾರ್ಣಿಕದ ನುಡಿಯನ್ನು ಹೇಳಿದರು. ಈ ಬಗ್ಗೆ ಏನಾದರೂ ಅಪಶಕುನವೇ ಎಂದು ಹಲವರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts