More

  ‘ಹಿಂದೂ’ ವಿರುದ್ಧ ವಿವಾದಾತ್ಮಕ ಹೇಳಿಕೆ ವಾಪಸ್ ಪಡೆದ ಜಾರಕಿಹೊಳಿ: ನೋವಾಗಿದ್ದಲ್ಲಿ ವಿಷಾದಿಸುವೆ ಎಂದ ಸತೀಶ್

  ಬೆಂಗಳೂರು: ಹಿಂದೂ ಪದದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿ ವ್ಯಾಪಕ ಟೀಕೆ ಹಾಗೂ ತೀವ್ರ ಅಸಮಾಧಾನಕ್ಕೆ ಗುರಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಆ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಅಲ್ಲದೆ ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ.

  ನಿಪ್ಪಾಣಿಯಲ್ಲಿ ನ. 6ರಂದು ಜರುಗಿದ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಹಿಂದೂ ಎಂಬ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಹಿಂದೂ ಎಂಬ ಪದ ಪರ್ಷಿಯನ್ ಪದವಾಗಿದ್ದು, ಭಾರತೀಯ ಪದವೇ ಅಲ್ಲ ಎಂಬಿತ್ಯಾದಿಯಾಗಿ ಹೇಳಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಹಿಂದೂಪರ ಸಂಘಟನೆಗಳವರು, ಬಿಜೆಪಿಯ ನಾಯಕರು ಸೇರಿದಂತೆ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಆ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಅದಾಗ್ಯೂ ಅವರು ತಮ್ಮ ಹೇಳಿಕೆಯನ್ನು ಬಹುತೇಕ ಸಮರ್ಥಿಸಿಕೊಂಡೇ ಸ್ಪಷ್ಟನೆಯನ್ನು ನೀಡಿದ್ದಾರೆ.

  ಅವರು ವಿವಾದಾತ್ಮಕ ಹೇಳಿಕೆ ಹಿಂಪಡೆದುಕೊಂಡು ಬರೆದ ಪತ್ರ ಹೀಗಿದೆ..

  'ಹಿಂದೂ' ವಿರುದ್ಧ ವಿವಾದಾತ್ಮಕ ಹೇಳಿಕೆ ವಾಪಸ್ ಪಡೆದ ಜಾರಕಿಹೊಳಿ: ನೋವಾಗಿದ್ದಲ್ಲಿ ವಿಷಾದಿಸುವೆ ಎಂದ ಸತೀಶ್

  ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ ಹೃದಯಾಘಾತಕ್ಕೀಡಾಗಿ ಸಾವು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts