More

    ಸಾಷ್ಟಾಂಗ ನಮಸ್ಕಾರದಿಂದ ಭಾವಶುದ್ಧಿ

    ಸಾಷ್ಟಾಂಗ ನಮಸ್ಕಾರದಿಂದ ಭಾವಶುದ್ಧಿ

    ‘ನಾವು ಪರಸ್ಪರ ಮಾಡುವ ನಮಸ್ಕಾರ – ಪ್ರತಿನಮಸ್ಕಾರಗಳು ನಮ್ಮೊಳಗಿನ ಭಗವಚ್ಛಕ್ತಿಗೆ ಮಾಡುವ ಗೌರವವಾಗಿದೆ’ ಎಂದು ಶಾಸ್ತ್ರವು ಹೇಳುತ್ತದೆ. ಅಭಿವಾದನ, ಅಭಿವಂದನದಲ್ಲಿ ನಮಿಸುವುದು ಎಂದರೆ ಎದುರಿನ ದೇಹಧಾರಿಗಲ್ಲ, ಅವನ ಹೃದಯಾಂತರಂಗದೊಳಗಿರುವ ಪರಮಪುರುಷನಿಗೆ ಎಂದು ಭಾಗವತ ತಿಳಿಸುತ್ತದೆ. ಶ್ರೀಕೃಷ್ಣನು, ‘ಸರ್ವಶಕ್ತನಾದ ಭಗವಂತನು ಎಲ್ಲ ಜೀವರ ಹೃತ್ಕಮಲದ ಮಧ್ಯದಲ್ಲಿ ನೆಲೆಸಿದ್ದಾನೆ’ (ಈಶ್ವರಃ ಸರ್ವಭೂತಾನಾಂ ಹೃದ್ದೇಶೇರ್ಜುನ ತಿಷ್ಠತಿ |’ ಭ.ಗೀ.: 18.61) ಎಂಬ ತತ್ತ್ವವನ್ನು ತಿಳಿಸಿದ್ದಾನೆ. ದೇವಾಲಯವನ್ನು ಕಂಡಾಗ ತಲೆಯು ಹೇಗೆ ತಾನೇ ತಾನಾಗಿ ಬಾಗುತ್ತದೆಯೋ ಹಾಗೆಯೇ ದೇಹವೆಂಬ ದೇವಾಲಯವನ್ನು ಕಂಡಾಗಲೂ ಶಿರಸ್ಸು ಬಾಗತೊಡಗುತ್ತದೆ.

    ನಮಸ್ಕಾರದಲ್ಲಿ ಮೂರು ವಿಧಗಳು – ಕಾಯಿಕ, ವಾಚಿಕ ಮತ್ತು ಮಾನಸಿಕ. ಈ ಮೂರರ ಸಮಷ್ಟಿಯೇ ನಮಸ್ಕಾರಪುಷ್ಟಿ. ಕಾಯಿಕದಲ್ಲೂ ಮತ್ತೆ ಅನೇಕ ವಿಧ. ಪ್ರದಕ್ಷಿಣೆ ನಮಸ್ಕಾರ, ಕೈಜೋಡಿಸಿ ನಮಸ್ಕಾರ, ಅರ್ಧಚಂದ್ರ ನಮಸ್ಕಾರ, ದುರ್ಗಾ ನಮಸ್ಕಾರ, ಶಿವ ನಮಸ್ಕಾರ, ಗುರು ನಮಸ್ಕಾರ, ಭೂನಮಸ್ಕಾರ ಮುಂತಾದವು. ವಾಚಿಕ ನಮಸ್ಕಾರದಲ್ಲಿ ಸಾಮಾನ್ಯ ಶಬ್ದ ವ್ಯತ್ಯಾಸ ಮಾತ್ರ. ಮಾನಸಿಕ ನಮಸ್ಕಾರ ಮುಖ್ಯವಾದದ್ದು. ಇಲ್ಲಿ ಶ್ರದ್ಧೆ-ಭಕ್ತಿಯನ್ನು ಒಳಗೊಂಡ ದಂಡವತ್ ಪ್ರಣಾಮ, ದೀಕ್ಷಾದಂಡಪ್ರಣಾಮ, ಮಾತೃಪ್ರಣಾಮ ಅನಂತ ಪ್ರಣಾಮಗಳಾಗಿವೆ. ದಂಡಪ್ರಣಾಮವೆಂದರೆ ಸಾಷ್ಟಾಂಗ ಪ್ರಣಾಮ ಎಂದರ್ಥ. ಸಾಷ್ಟಾಂಗ ನಮಸ್ಕರಿಸುವಾಗ ದೇಹವು ಮಲಗಿಸಿಟ್ಟ ದಂಡದಂತೆ ಕಾಣುತ್ತದೆ. ಅದಕ್ಕೇ ಸಾಷ್ಟಾಂಗ ಪ್ರಣಾಮಕ್ಕೆ ದಂಡಪ್ರಣಾಮ ಎನ್ನುವುದು.

    ಸಾಷ್ಟಾಂಗ ಅಂದರೆ ಏನು?: ಅಷ್ಟ ಅಥವಾ 8 ಅಂಗಗಳಿಂದ ಸಹಿತವಾದ ನಮಸ್ಕಾರ ಎಂದರ್ಥ.

    ಉರಸಾ ಶಿರಸಾ ದೃಷ್ಟಾ್ಯ ಮನಸಾ ವಚಸಾ ತಥಾ |

    ಪದ್ಭ್ಯಾಂ ಕರಾಭ್ಯಾಂ ಕರ್ಣಾಭ್ಯಾಂ ಪ್ರಣಾಮೊà—ಷ್ಟಾಂಗ ಉಚ್ಯತೇ ||

    ಪಾದಗಳೆರಡು, ಮೊಣಕಾಲುಗಳೆರಡು, ಕೈಗಳೆರಡು, ಎದೆ, ಶಿರಸ್ಸು – ಇವು ಐದು ಅಂಗಗಳು ಭೂಸ್ಪರ್ಶವಾಗಬೇಕು. ದೃಷ್ಟಿಯು ದೇವರ ಚರಣದಲ್ಲೂ, ಮನಸ್ಸು ನಮನಕಾರ್ಯದಲ್ಲೂ ತನ್ಮಯವಾಗಿರಬೇಕು. ಮಾತು ಇಷ್ಟದೇವರನ್ನು ಸ್ತುತಿಸುತ್ತಿರಬೇಕು. ಹೀಗೆ ಇಲ್ಲಿ ಎಂಟು ಅಂಗಗಳು ಭಾಗವಹಿಸಬೇಕು. ಆಗ ಇದು ಪೂರ್ಣ ನಮಸ್ಕಾರವಾಗುತ್ತದೆ.

    ಇದನ್ನೂ ಓದಿ: ಪರಿಣಾಮಕಾರಿ ಫಲಿತಾಂಶದ ಶುಂಠಿ ಚಹಾ

    ಈ ಸಾಷ್ಟಾಂಗ ನಮಸ್ಕಾರಕ್ಕೆ ಬಹಳಷ್ಟು ಅರ್ಥವಿದೆ. ಈ ನಮಸ್ಕಾರದಲ್ಲಿ ಮಾತ್ರ ಪೂರ್ಣ ಸಮರ್ಪಣಾಭಾವ ವ್ಯಕ್ತವಾಗುತ್ತದೆ. ಸರ್ವ ಭಾರವನ್ನೂ ಭೂಮಿಯ ಮೇಲೆ ಹಾಕಿ ದೇಹಾಭಿಮಾನವನ್ನು ಬಿಟ್ಟು ಏಕಾಗ್ರ ಮನಸ್ಸಿನಿಂದ ದೇವರನ್ನು ಧ್ಯಾನಿಸುವಾಗ, ‘ಯಾವುದೂ ನನ್ನದಲ್ಲ, ಎಲ್ಲವೂ ನಿನ್ನದೇ. ಸರ್ವ ಭಾರವನ್ನೂ ನಿನ್ನ ಮೇಲೆಯೇ ಒಪ್ಪಿಸಿದ್ದೇನೆ’ ಎಂಬ ನಿರಹಂಕಾರಪೂರ್ವಕವಾದ ಪೂರ್ಣ ಸಮರ್ಪಣಾಭಾವನೆಗೆ, ನವವಿಧ ಭಕ್ತಿಯ ಪೂರ್ಣ ಶರಣಾಗತಿಯ ಭಾವನೆಗೆ ಈ ನಮಸ್ಕಾರದಲ್ಲಿ ಅವಕಾಶವಿದೆ. ಈ ಸಮಯದಲ್ಲಿ ವಿನಯವಂತಿಕೆ, ಭಾವಶುದ್ಧಿ ಮೂಡಿಬರಲು ಅನುವಾಗುತ್ತದೆ. ಸೂರ್ಯನಮಸ್ಕಾರ ಸ್ತವ ಸ್ಥಿತಿ: ಸ್ತವ ಎಂದರೆ ಪ್ರಾರ್ಥನೆ. ಸೂರ್ಯಮಂತ್ರದೊಂದಿಗೆ ನಮಸ್ಕರಿಸುವ ಸಿದ್ಧತೆ. ನೇರವಾಗಿ ಸ್ಥಿರವಾಗಿ ನಿಲ್ಲಿ. ಅಂಗುಷ್ಠದಿಂದ ಹಿಡಿದು ಶಿರಸ್ಸಿನವರೆಗೆ ದೇಹವು ಒಂದೇ ಸಮರೇಖೆಯಲ್ಲಿರಲಿ. ಎದೆಯ ಭಾಗ ಎತ್ತಿರಲಿ. ಭುಜ ಅಗಲಿಸಿ. ಹೊಟ್ಟೆಯನ್ನು ಒಳಗೆ ಎಳೆದುಕೊಳ್ಳಬೇಕು. ಶರೀರದ ಯಾವುದೇ ಭಾಗಗಳು ಬಿಗಿತವಿಲ್ಲದ ಸ್ಥಿತಿಯಲ್ಲಿರಲಿ. ಮುಖದಲ್ಲಿ ಪ್ರಸನ್ನತೆ ಇರಲಿ. ನಿರಾಳ ದೀರ್ಘ ಶ್ವಾಸೋಚ್ಛಾ ್ವ ನಡೆಸುತ್ತಿರಿ. ಈಗ ಶ್ವಾಸವನ್ನು ಮೂಗಿನ ಎರಡೂ ಹೊಳ್ಳೆಗಳಿಂದ ಒಳಗೆ ಎಳೆದುಕೊಳ್ಳುತ್ತ ಎರಡೂ ಕೈಗಳನ್ನು ಎತ್ತಿ ಎದೆಯ ಮುಂದೆ ಅಂಗೈಗಳನ್ನು ಪರಸ್ಪರ ಒಂದಕ್ಕೊಂದು ಒತ್ತುತ್ತ ಹನುಮನ ನಮನಸ್ಥಿತಿಯಂತೆ ನಮಸ್ಕರಿಸಬೇಕು. ದೃಷ್ಟಿಯು ಮುಂದೆ ಉದಯಿಸುತ್ತಿರುವ ಸೂರ್ಯನಲ್ಲಿ ನೆಟ್ಟಿರಬೇಕು. ಮನಸ್ಸಿನಲ್ಲೂ ಸೂರ್ಯಬಿಂಬದ ಮನನ ನಡೆಯುತ್ತಿರಬೇಕು.

    ಲಾಭಗಳು: ಎರಡೂ ಕೈಗಳ ಒತ್ತುವಿಕೆಯಿಂದ ಹಸ್ತ-ಕೈಗಳಲ್ಲಿರುವ ಪ್ರತಿಕ್ರಿಯಾತ್ಮಕ ಬಿಂದುಗಳ ಒತ್ತಡದಿಂದ ಇಡೀ ಶರೀರ ಸಚೇತನಗೊಳ್ಳುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts