More

    ‘ಕಾಳಿ’ಗೆ ಬಂದರು ಸಪ್ತಮಿ ಗೌಡು; ಜನವರಿಯಿಂದ ಚಿತ್ರೀಕರಣ ಪ್ರಾರಂಭ

    ಬೆಂಗಳೂರು: ‘ಕಾಂತಾರ’ ಚಿತ್ರದ ಯಶಸ್ಸಿನ ನಂತರ ಆ ಚಿತ್ರದ ನಾಯಕಿ ಸಪ್ತಮಿ ಗೌಡ, ಅಭಿಷೇಕ್​ ಅಂಬರೀಷ್​ ಅಭಿನಯದ ‘ಕಾಳಿ’ ಚಿತ್ರಕ್ಕೆ ನಾಯಕಿಯಾಗುವ ಸಾಧ್ಯತೆ ಇದೆ ಎಂದು ‘ವಿಜಯವಾಣಿ’ ಕೆಲವು ದಿನಗಳ ಹಿಂದೆಯೇ ಹೇಳಿತ್ತು. ಅದೀಗ ನಿಜವಾಗಿದ್ದು, ಇಂದು ಶ್ರೀ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದೆ. ಈ ಮುಹೂರ್ತದಲ್ಲಿ ಸಪ್ತಮಿ ಭಾಗವಹಿಸಿದ್ದಾರೆ.

    ಇದನ್ನೂ ಓದಿ: ರಾಣ ಅಬ್ಬರಿಸಲಿಲ್ಲ; ದಿಲ್​ ಪಸಂದ್​ ರುಚಿಸಲಿಲ್ಲ … ನವೆಂಬರ್​ ಚಿತ್ರಗಳ ಹಣೆಬರಹ ಇದು

    ‘ಕಾಳಿ’ ಚಿತ್ರದಲ್ಲಿ 90ರ ದಶಕದ ಕಥೆ ಇದ್ದು, ಕಾವೇರಿ ನದಿ ಹೋರಾಟದ ಹಿನ್ನೆಲೆಯಲ್ಲಿ ಕಥೆ ನಡೆಯಲಿದೆಯಂತೆ. ಚಿತ್ರವನ್ನು ಸ್ವಪ್ನ ಕೃಷ್ಣ ನಿರ್ಮಿಸುತ್ತಿದ್ದು, ‘ಗಜಕೇಸರಿ’, ‘ಪೈಲ್ವಾನ್​’, ‘ಹೆಬ್ಬುಲಿ’ ಚಿತ್ರಗಳನ್ನು ನಿರ್ದೇಶಿಸಿರುವ ಎಸ್​. ಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೃಷ್ಣ ಅವರ ಪತ್ನಿ ಸ್ವಪ್ನಾ ಕೃಷ್ಣ ತಮ್ಮ RRR ಮೋಷನ್ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಾಣ ಮಾಡುತ್ತಿದ್ದಾರೆ. ಇದು ಈ ಸಂಸ್ಥೆಯ ಮೂರನೆಯ ಚಿತ್ರವಾಗಿದೆ.

    ಈ ಹಿಂದೆ ಕೃಷ್ಣ ನಿರ್ದೇಶನದ ‘ಹೆಬ್ಬುಲಿ’ ಮತ್ತು ‘ಪೈಲ್ವಾನ್’ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಕರುಣಾಕರ್​, ಇಲ್ಲೂ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಟಗರು’ ‘ಸಲಗ’ ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಚರಣ್ ರಾಜ್ ಈ ಚಿತ್ರದ ಸಂಗೀತ ನಿರ್ದೇಶಕರು. ದೀಪು ಎಸ್ ಕುಮಾರ್ ಸಂಕಲನ ಮತ್ತು ‘ಕೆಜಿಎಫ್’ ಖ್ಯಾತಿಯ ಚಂದ್ರಮೌಳಿ ಈ ಚಿತ್ರಕ್ಕೆ ಸಂಭಾಷಣೆ ‘ಕಾಳಿ’ ಕಾಲಿಗೆ ಸಂಭಾಷಣೆ ಬರೆಯಲಿದ್ದಾರೆ. ಚಿತ್ರಕ್ಕೆ ಇರಲಿದೆ.

    ಇದನ್ನೂ ಓದಿ: ಯುವ ರೈತನ ಜತೆ ಸಪ್ತಪದಿ ತುಳಿದ ಅದಿತಿ ಪ್ರಭುದೇವ: ನವಜೋಡಿಗೆ ಶುಭಕೋರಿದ ಗಣ್ಯರು

    ‘ಕಾಳಿ’ ಚಿತ್ರದಲ್ಲಿ ಅಭಿನಯಿಸುವ ಕಲಾವಿದರಿಗಾಗಿ ಡಿಸೆಂಬರ್​ನಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, 2023ರ ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

    ‘ಟಗರು ಪಲ್ಯ’ ಚಿತ್ರಕ್ಕೆ ‘ನೆನಪಿರಲಿ’ ಪ್ರೇಮ್​ ಮಗಳು ಅಮೃತಾ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts