More

    ಜನರಲ್ಲಿ ಅಜ್ಞಾನ ದೂರ ಮಾಡಿದ ಸಂತ ಸೇವಾಲಾಲ್

    ಆಲೂರು: ಸಮಾಜದಲ್ಲಿನ ಕಂದಾಚಾರಗಳನ್ನು ಹೋಗಲಾಡಿಸಲು ತಮ್ಮದೇ ಆದ ಚಿಂತನೆಗಳನ್ನು ನೀಡಿದ ಸಂತ ಸೇವಾಲಾಲ್ ಅವರು ವಾಸ್ತವಿಕ ಜಗತ್ತಿನಲ್ಲಿ ಬದುಕಿದ ದಾರ್ಶನಿಕ ಎಂದು ತಹಸೀಲ್ದಾರ್ ಸಿ.ಪಿ.ನಂದಕುಮಾರ್ ಹೇಳಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 18ನೇ ಶತಮಾನದಲ್ಲಿ ಲಂಬಾಣಿ ಜನಾಂಗದ ಹಕ್ಕಿಗಾಗಿ ಆಗಿನ ನಿಜಾಮರು ಹಾಗೂ ಮೈಸೂರು ಅರಸರೊಂದಿಗೆ ಹೋರಾಟ ಮಾಡಿದ ಸಂತ ಸೇವಾಲಾಲ್ ಅವರು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನ ದೂರ ಮಾಡಿದ್ದರು ಎಂದು ತಿಳಿಸಿದರು.

    ಬಂಜಾರ ಸಂಘದ ಅಧ್ಯಕ್ಷ ಸೋಮನಾಯಕ ಮಾತನಾಡಿ, ಸತ್ಯ, ಅಹಿಂಸೆ, ದಯೆ, ಕರುಣೆ ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಂತ ಸೇವಾಲಾಲ್ ಸಾರಿದ್ದರು. ಮಾನವ ಜನ್ಮ ಪವಿತ್ರವಾದದ್ದು. ಇದನ್ನು ಹಾಳು ಮಾಡಿಕೊಳ್ಳಬೇಡಿ. ವ್ಯಸನಗಳಿಂದ ದೂರವಿದ್ದು, ಅರಿಷಡ್ವರ್ಗಗಳನ್ನು ಸುಟ್ಟು, ಪ್ರಾಮಾಣಿಕರಾಗಿ ಜೀವಿಸಿ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ ಎಂದು ತಿಳಿಸಿದ್ದ ಸೇವಾಲಾಲರು, ತಮ್ಮ ತತ್ವಗಳ ಮೂಲಕ ಲೋಕಕ್ಕೆ ಮುಕ್ತಿ ಮಾರ್ಗ ತೋರಿಸಿದ್ದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆ ಮೂಡಲು ಪ್ರೇರೇಪಿಸಿದ್ದರು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲೇಶ್, ಶಿರಸ್ತೇದಾರ ಅಶೋಕ್, ಬಂಜಾರ ಸಂಘದ ಕುಮಾರ್ ನಾಯಕ್, ರವಿ ನಾಯಕ್, ಸಂದೇಶ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts