More

    ಸ್ವಾತಂತ್ರ‍್ಯ ಚಳವಳಿಗೆ ಬಂಜಾರ ಸಮುದಾಯದ ಕೊಡುಗೆ ವಿಶೇಷ

    ಧಾರವಾಡ: ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಸಂದರ್ಭದಲ್ಲಿ ಆಂಗ್ಲರ ದಾಳಿ ವೇಳೆ ಬಂಜಾರ ಸಮುದಾಯದವರು ಪ್ರಾಣ ಲೆಕ್ಕಿಸದೆ ಚಳವಳಿ ಪ್ರಾರಂಭಿಸಿದರು. ಬ್ರಿಟೀಷರನ್ನು ದೇಶದಿಂದ ಓಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವಾತಂತ್ರ‍್ಯ ಚಳವಳಿಗೆ ಬಂಜಾರ ಸಮುದಾಯದ ಕೊಡುಗೆ ವಿಶೇಷವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
    ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಅನೇಕ ರಾಜ್ಯ ಮನೆತನಗಳ ಸಮುದಾಯಗಳ ಕೊಡುಗೆ ಇದೆ. ಆ ಸಂದರ್ಭದಲ್ಲಿ ಬುಡಕಟ್ಟು ಜನಾಂಗವಾಗಿದ್ದ ಲಂಬಾಣಿ ಸಮುದಾಯ ವಿಶೇಷವಾಗಿ ಪ್ರತಿಭಟಿಸಿ, ಆಂಗ್ಲರನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದು ಬಂಜಾರ ಸಮುದಾಯದ ಅನೇಕರು ಉನ್ನತ ಶಿಕ್ಷಣದೊಂದಿಗೆ ಉನ್ನತ ಹುದ್ದೆ ಹೊಂದಿದ್ದಾರೆ. ಈ ಸಮುದಾಯ ರಾಷ್ಟçದ ಪ್ರಗತಿಯಲ್ಲಿ ಕೊಡುಗೆ ನೀಡುತ್ತಿದೆ ಎಂದರು.
    ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಡಿ .ಬಿ. ನಾಯಕ ಮಾತನಾಡಿ, ಭಾರತದಲ್ಲಿ ಸುಮಾರು ೭೪೭ ಬುಡಕಟ್ಟು ಸಮುದಾಯಗಳಿವೆ. ರಾಜ್ಯದಲ್ಲಿ ೫೬ ಬುಡಕಟ್ಟು ಸಮುದಾಯಗಳಲ್ಲಿ ಬಂಜಾರ ಸಮುದಾಯವೂ ಇದೆ. ತಮ್ಮ ಆಚಾರ, ವಿಚಾರ, ವೇಷಭೂಷಣ ಪದ್ಧತಿಗಳ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಸಂತ ಸೇವಾಲಾಲ ಅವರು ಪ್ರಾಣಿ ಹಿಂಸೆ, ಮದ್ಯಪಾನ ಮಾಡಬಾರದು ಎಂದು ಸಮಾಜಕ್ಕೆ ಕರೆ ನೀಡಿದ್ದಾರೆ ಎಂದರು.
    ನವನಗರದ ಶ್ರೀÃ ಸೇವಾಲಾಲ ಬಂಜಾರ ಗುರುಪೀಠದ ಮನ್ನಿರಂಜನ ತಿಪ್ಪೇಶ್ವರ ಮಾಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts