More

    ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ  ಕಾರ್ಯಕ್ರಮ

    ಗದಗ: ಹುಬ್ಬಳ್ಳಿಯ  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಗುರುವಾರದಂದು ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

    ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ  ಪಿ ವೈ ನಾಯಕ  ಅವರು ಮಾತನಾಡಿ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜೀವನ ಮತ್ತು ಸಾಧನೆಗಳ ಕುರಿತು ತಿಳಿಸಿ ಸಂತ ಸೇವಾಲಾಲರು ಬಂಜಾರ ಸಮುದಾಯದ ಆರಾದ್ಯ ದೈವವಾಗಿದ್ದು, ಸಮುದಾಯದಲ್ಲಿನ ಮೂಡನಂಬಿಕೆಗಳನ್ನು ಹೊಡೆದೊಡಿಸಿದರು ಮತ್ತು ಹಲವಾರು ಪವಾಡಗಳನ್ನು ಮಾಡಿದರು. ಅವರು ಸದಾ ಎಲ್ಲರಿಗೂ ಒಳಿತನ್ನು ಮಾಡುವಂತೆ ಸಂದೇಶ ನೀಡುತ್ತಿದ್ದರು. ಇಂದು ನಾವೆಲ್ಲರು ಅವರ ಸಂದೇಶಗಳನ್ನು ಪಾಲಿಸುವುದು ಅವಶ್ಯವಿದೆ ಎಂದು ನುಡಿದರು ಮತ್ತು ಅವರ ಜನ್ಮಸ್ಥಳ ಕರ್ನಾಟಕವಾಗಿದ್ದು ನಮ್ಮೆಲ್ಲರ ಹೆಮ್ಮೆ ಎಂದರು.

    ಕಾರ್ಯಕ್ರಮದಲ್ಲಿ ಕೇಂದ್ರ ಕಛೇರಿಯ  ಇಲಾಖಾ ಮುಖ್ಯಸ್ಥರಾದ ರಾಜೇಶ ಹುದ್ದಾರ, ಮುಖ್ಯ ಭದ್ರತಾ ಮತ್ತು ಜಾಗ್ರತಾಧಿಕಾರಿ, ವಿವೇಕಾನಂದ ವಿಶ್ವಜ್ಞ ಮುಖ್ಯ ಸಂಚಾರ ವ್ಯವಸ್ಥಾಪಕರು, ವಿಜಯಶ್ರೀ ನರಗುಂದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ದಿವಾಕರ ಯರಗೊಪ್ಪ, ಮುಖ್ಯ ಕಾಮಗಾರಿ ಅಭಿಯಂತರರು, ಜಗದಂಬಾ ಕೋಪರ್ಡೆ,ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು, ದಶರಥ ಕೆಳಗೇರಿ, ಉಪಮುಖ್ಯ ಭದ್ರತಾ ಹಾಗೂ ಜಾಗೃತಾಧಿಕಾರಿ, ಎಂ ಬಿ ಕಪಲಿ, ಉಪ ಮುಖ್ಯ ಗಣಕ ವ್ಯವಸ್ಥಾಪಕರು ಹಾಗೂ ಕೇಂದ್ರ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

    ವಿರೂಪಾಕ್ಷ ಕಟ್ಟಿಮನಿರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts