More

    ರೈತಸಂಘದಿಂದ ಸಂಕ್ರಾಂತಿ ಆಚರಣೆ

    ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದ ರೈತರು ಸೋಮವಾರ ಸಂಜೆ ರಂಗೋಲಿ ಬಿಡಿಸಿ, ಕೊಳಗ, ಕಬ್ಬು, ನೊಗ, ನೇಗಿಲುಗಳ ಇಟ್ಟು, ದೇಸಿ ತಳಿಯ ದನಕರುಗಳನ್ನು ಪೂಜಿಸಿ, ಕಿಚ್ಚು ಹಾಯಿಸುವ ಮೂಲಕ ವಿಶಿಷ್ಟವಾಗಿ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಆಚರಿಸಿದರು.
    ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮನೆಯ ಆವರಣದಲ್ಲಿ ರೈತಸಂಘ, ಹಸಿರುಸೇನೆ, ನೈಸರ್ಗಿಕ ಸಾವಯವ ರೈತ ಸಂಘದಿಂದ ಸಂಕ್ರಾಂತಿ ಉತ್ಸವ ನಡೆಯಿತು.
    ಸಾಮೆ, ನವಣೆ, ಹಾರಕ, ಊದಲು, ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ರಾಗಿ, ಭತ್ತ, ಸೂರ್ಯಕಾಂತಿ ಹಾಗೂ ನೇಗಿಲು, ನೊಗಗಳಳಿಗೆ ಪೂಜೆ ಸಲ್ಲಿಸಲಾಯಿತು. ಗಿರ್ ಹಾಗೂ ದೇಸಿ ತಳಿಯ ದನಕರುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸಲಾಯಿತು.
    ಹೊನ್ನೂರು ಪ್ರಕಾಶ್ ಮಾತನಾಡಿ, ಸಂಕ್ರಾಂತಿ ಹಬ್ಬವನ್ನು ದಕ್ಷಿಣ ಭಾರತದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಸುಗ್ಗಿಯ ಕಾಲದಲ್ಲಿ ಬರುವ ಈ ಹಬ್ಬ ರೈತರ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಇತ್ತೀಚೆಗ ದೇಸಿ ತಳಿ ಹಾಗೂ ಸಾವಯವ ಕೃಷಿಯನ್ನು ಬಿಟ್ಟಿದ್ದೇವೆ. ಸಿರಿಧಾನ್ಯಗಳ ಬಳಕೆ ಕಡಿಮೆಯಾಗಿದೆ. ಇದು ಅನಾರೋಗ್ಯದ ಸಂಕೇತವಾಗಿದೆ. ದುಡಿಯುವ ರೈತ ಆರೋಗ್ಯವಂತನಾಗಿದ್ದರೆ, ದೇಶವೇ ಆರೋಗ್ಯವಾಗಿದ್ದಂತೆ. ಪ್ರತಿ ರೈತರು ತಮ್ಮ ಜಮೀನಿನಲ್ಲಿ ತಮಗೋಸ್ಕರ ಸಾವಯವ ಕೃಷಿ ಪದ್ಧತಿಯಲ್ಲಿ ಆಹಾರಧಾನ್ಯಗಳನ್ನು ಬೆಳೆದು ಬಳಸಬೇಕು. ಹಿಂದಿನ ಸಂಪ್ರದಾಯವನ್ನು ಮರುಕಳಿಸುವಲ್ಲಿ ಪ್ರಯತ್ನಮಾಡಬೇಕು ಎಂದರು. ಸೋಮಣ್ಣ, ಸಿದ್ದಲಿಂಗಸ್ವಾಮಿ, ಕುಮಾರಸ್ವಾಮಿ, ಅಂಬಳೆ ಶಿವಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts