More

    ದೇಹದ ಭಾಗಗಳ ದಾನ ಮಹತ್ಕಾರ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮೆಚ್ಚುಗೆ

    ಸಂಡೂರು: ಎಷ್ಟೋ ಜನ ತಮ್ಮ ಜೀವನದ ಅಂತ್ಯದಲ್ಲೂ ಅಂಗಾಂಗಗಳನ್ನು ದಾನ ಮಾಡಿ ಮತ್ತೊಬ್ಬರ ಬಾಳಿಗೆ ನೆರವಾಗುತ್ತಿದ್ದು, ಇವರ ಈ ಮಹತ್ಕಾರ್ಯ ನಿಜಕ್ಕೂ ಮಾದರಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿದರು.

    ತಾಲೂಕಿನ ತೋರಣಗಲ್ ರೈಲ್ವೆ ನಿಲ್ದಾಣ ಪ್ರದೇಶದ ಎಚ್‌ಎಲ್‌ಸಿ ಗಾರ್ಡನ್‌ನಲ್ಲಿ ರಾಷ್ಟ್ರೀಯ ಅಂಗಾಂಗ ದಾನಿಗಳ ದಿನಾಚರಣೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮರಣಾನಂತರವೂ ಸಾರ್ಥಕತೆಗೆ ಸಹಕಾರ ನೀಡಿದ ಕುಟುಂಬ ಸದಸ್ಯರ ಕಾರ್ಯವೂ ಶ್ಲಾಘನೀಯ ಎಂದರು.

    ಅಪಘಾತ ಸಂಭವಿಸಿ ವ್ಯಕ್ತಿಗೆ ಮಿದುಳು ನಿಷ್ಕ್ರಿಯಗೊಂಡಾಗ ಆ ವ್ಯಕ್ತಿ ಮರಣದ ನಂತರ ಅವರ ಕುಟುಂಬದವರು ಅಂಗಾಂಗ ದಾನ ಮಾಡುವ ಮಹತ್ಕಾರ್ಯಕ್ಕೆ ಮುಂದಾಗುತ್ತಿರುವುದು ಸ್ವಾಗತಾರ್ಹ. ಕಿಡ್ನಿ ವೈಫಲ್ಯ ಹೊಂದಿರುವವರಿಗೆ ಕುಟುಂಬದವರೇ ಒಂದು ಕಿಡ್ನಿ ದಾನ ಮಾಡಿ ಬದುಕಿಸಿಕೊಂಡ ಹಲವು ಉದಾಹರಣೆಗಳಿವೆ. ಈ ಮಹತ್ಕಾರ್ಯಕ್ಕೆ ಅಭಿನಂದಿಸುವುದು ಎಲ್ಲರ ಕರ್ತವ್ಯ ಎಂದರು.

    ನಟ ಡಾ.ಪುನೀತ್ ರಾಜಕುಮಾರ್ ಅಕಾಲಿಕ ಮರಣದ ನಂತರ ನೇತ್ರ ಮತ್ತು ಇತರ ಅಂಗಾಂಗ ದಾನ ಮಾಡಲು ಬಹಳಷ್ಟು ಜನ ಸ್ವಯಂ ಪ್ರೇರಿತರಾಗಿ ಬರುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಅಂಗಾಂಗ ದಾನಿಗಳಿಗೆ ಕೊರತೆಯಿಲ್ಲ ಎನ್ನುವ ಹಂತಕ್ಕೆ ತಲುಪಬಹುದು. ಅಷ್ಟು ಜನರು ನೋಂದಣಿ ಮಾಡಲು ಬಯಸಿದ್ದಾರೆಂಬುದೇ ಹೆಮ್ಮೆಯ ವಿಚಾರ ಎಂದರು.

    ಯುವಕರಾದ ಲಕ್ಷ್ಮಣ್ ಕುಮಾರ್, ಸಿ.ಎಸ್.ಮಲ್ಲಿಕಾರ್ಜುನ್, ಆಲಂ ಬಾಷಾ, ಅಶೋಕ್ ಕುಮಾರ್, ಜಾಫರ್, ರಫಿಕ್, ಆಶಾ ಕಾರ್ಯಕರ್ತೆಯರಾದ ವಿಜಯಶಾಂತಿ, ಆಶಾ, ಹುಲಿಗೆಮ್ಮ, ರೇಖಾ, ಅಂಬಿಕಾ, ಮಹಾದೇವಿ, ಸೋನಿ, ಪ್ರಿಯಾಂಕಾ, ಉರ್ಮಿಳಾ ದೇವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts