ನಗದುರಹಿತ ಸೇವೆ ಜಾರಿಯಾಗಲಿ

blank
blank

ಸಂಡೂರು: ಸ್ಲಂ ಬೋರ್ಡ್ ಸೇರಿ ಸರ್ಕಾರ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವುದನ್ನು ತಡೆಯಬೇಕು. ನಿರಂತರವಾಗಿ ನಡೆಯುತ್ತಿರುವ ವಿವಿದ ಖರೀದಿಗಳನ್ನು ನಿಲ್ಲಿಸಲು ಒತ್ತಾಯಿಸಿ ಪಟ್ಟಣದ ಕಾರ್ಮಿಕ ನಿರೀಕ್ಷಕರ ಕಚೇರಿಯ ಡಿಇಒ ಪರಶುರಾಮ್‌ಗೆ ಕಾರ್ಮಿಕರು ಮನವಿ ಸಲ್ಲಿಸಿದರು.

ಕೊಳಚೆ ನಿರ್ಮೂಲನೆ ಮಂಡಳಿಗೆ ಪಾವತಿಸಲಾದ 76 ಕೋಟಿ ರೂ.ವನ್ನು ಕೂಡಲೇ ಕಾರ್ಮಿಕ ಮಂಡಳಿ ಖಾತೆಗೆ ವಾಪಸ್ ಪಡೆಯಲು ಅಗತ್ಯ ಕ್ರಮವಹಿಸಬೇಕು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಸದಸ್ಯರಾಗಿ 5 ವರ್ಷ ಪೂರೈಸಿದವರಿಗೆ ಮಾತ್ರವೇ ಮನೆ ನಿರ್ಮಾಣಕ್ಕೆ ಸಾಲ/ಸಹಾಯಧನ/ ಮುಂಗಡ ಹಣ ಪಾವತಿ ಮಾಡಲು ಕ್ರಮವಹಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬ ವರ್ಗದವರಿಗೆ ಸರ್ಕಾರದ ಆರೋಗ್ಯ ಸಂಜೀವಿನಿ 2021 ನಗದು ರಹಿತ ಸೇವೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದರು.

Share This Article

ನೀವು ಸಕ್ಕರೆ ಸೇವನೆಯನ್ನು ಕಡಿಮೆ ಮಾಡದಿದ್ದರೆ ಆರೋಗ್ಯಕ್ಕೆ ಏನಾಗುತ್ತದೆ? ಪ್ರತಿದಿನ ಸಕ್ಕರೆ ತಿನ್ನುವ ಸರಿಯಾದ ಪ್ರಮಾಣ ಇಲ್ಲಿದೆ. | Sugar

Sugar: ಬೆಳಿಗ್ಗೆ ಚಹಾದಲ್ಲಿ ಒಂದು ಚಮಚ ಸಕ್ಕರೆ , ಮಧ್ಯಾಹ್ನ ಸಿಹಿತಿಂಡಿಗಳು , ಕಚೇರಿಯಲ್ಲಿ ಬಿಸ್ಕತ್ತುಗಳು…

ಮೀನಿನ ಕಣ್ಣು ಆರೋಗ್ಯಕ್ಕೆ ಉತ್ತಮ! ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Fish Eye

Fish Eye: ಮೀನಿನ ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಅದಕ್ಕಿಂತ ಹೆಚ್ಚಿನ ಆರೋಗ್ಯಕಾರಿ ಅಂಶಗಳು ಮೀನಿನ…