More

    ಧರ್ಮಾಪುರ ಬಳಿ ಪೈಲಟ್ ಪ್ಲಾಂಟ್ ನಿರ್ಮಾಣಕ್ಕೆ ವಿರೋಧ: ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಾರ್ವಜನಿಕ ಸಭೆಯಲ್ಲಿ ಆಕ್ರೋಶ

    ಸಂಡೂರು: ಸಮೀಪದ ಧರ್ಮಾಪುರ ಬೈಪಾಸ್ ಬಳಿ ಮೆ.ಚನ್ನಕೇಶವ ಇಂಡಸ್ಟ್ರೀಸ್ (ಎಚ್‌ಆರ್‌ಜಿ) 5 ಲಕ್ಷ ಟಿಪಿಎ ಕಬ್ಬಿಣದ ಅದಿರು, 15 ಟಿಪಿಎ ಮ್ಯಾಂಗನೀಸ್ ಅದಿರು ಪೋಷಕ ಉತ್ಪಾದಕ ಘಟಕ (ಪೈಲಟ್ ಪ್ಲಾಂಟ್)ಸ್ಥಾಪನೆಗೆ ಬುಧವಾರ ಮಾಲಿನ್ಯ ನಿಯಂತ್ರಣ ಮಂಡಳಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.

    ಜಲ ಮಾಲಿನ್ಯದಿಂದ ವಾತಾವರಣ ಕಲುಷಿತಗೊಳ್ಳುವ ಕಾರಣ ಧರ್ಮಾಪುರ ಬಳಿ ಘಟಕ ನಿರ್ಮಾಣಕ್ಕೆ ಅವಕಾಶ ನೀಡದಂತೆ ಸಿಐಟಿಯು ಸಂಚಾಲಕ ಜೆ.ಎಂ.ಚನ್ನಬಸಯ್ಯ, ಸಿಪಿಐ ಕಾರ್ಯದರ್ಶಿ ಎ.ಸ್ವಾಮಿ ಒತ್ತಾಯಿಸಿದರು.

    ಈಗಾಗಲೇ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಗಣಿಗಾರಿಕೆ ನಡೆಸುತ್ತಿದ್ದು ಸಾಕಷ್ಟು ಪರಿಸರ ಹಾನಿಯಾಗಿದೆ. ಇಲ್ಲಿನ ಅರಣ್ಯ ಪ್ರದೇಶ ಅವಸಾನದ ಅಂಚಿನಲ್ಲಿದ್ದು ಸಂರಕ್ಷಿಸಿ ಪುನರುಜ್ಜೀವನಗೊಳಿಸುವಂತೆ ರಾಷ್ಟ್ರೀಯ ಪರಿಸರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ 2002ರಲ್ಲೇ ವರದಿ ನೀಡಿದೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸದ ಪರಿಸರ ಹಾಗೂ ಕಂದಾಯ ಇಲಾಖೆ 2020ರ ಏಪ್ರಿಲ್‌ನಿಂದ ಈವರೆಗೆ ತಾಲೂಕಿನಲ್ಲಿ 11 ಮತ್ತು ರಾಜ್ಯಾದ್ಯಂತ 62 ಸಾರ್ವಜನಿಕ ಸಭೆಗಳನ್ನು ನಡೆಸಿವೆ ಎಂದು ದೂರಿದರು.

    ಹಲವರು ಧರ್ಮಾಪುರವನ್ನು ದತ್ತು ಪಡೆದು ಶಾಶ್ವತ ಕುಡಿವ ನೀರು, ಮಹಿಳಾ ಶೌಚಗೃಹ, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದು, ರಸ್ತೆಗಳ ಅಭಿವೃದ್ಧಿ, ಆರೋಗ್ಯ ವ್ಯವಸ್ಥೆ ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.

    ಎಡಿಸಿ ಬಿ.ಎಸ್.ಮಂಜುನಾಥ್‌ಗೆ, ಮಾಲಿನ್ಯ ನಿಯಂತ್ರಣಾಧಿಕಾರಿ ಉಮಾಶಂಕರ್, ಕಂದಾಯ ನಿರೀಕ್ಷಕ ಈಶ್ವರ್, ಸ್ಥಳೀಯರಾದ ಲಕ್ಷ್ಮೀಪುರದ ಮೂಲೆಮನೆ ಈರಣ್ಣ, ಜಿ.ಎಸ್.ಸಿದ್ದಪ್ಪ, ಆಶಾಲತಾ ಸೋಮಪ್ಪ, ಶಿವಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts