More

    ಮೂರು ನೆಲೆಗಳಲ್ಲಿ ಕಾಣುವ ಜ್ಞಾನ ಭಂಡಾರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ವರ್ಣನೆ

    ಸಂಡೂರು: ಮೀಸಲು ಹೆಚ್ಚಳಕ್ಕಾಗಿ ವಾಲ್ಮೀಕಿ ಶ್ರೀಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 250 ದಿನ ಧರಣಿ ನಡೆಸಬೇಕಾಯಿತು ಎಂದು ಖ್ಯಾತ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿ ಕುರುಬ ಸಮಾಜ, ಒನಕೆ ಓಬವ್ವ ಸಂಘ ಹಾಗೂ ತಾಲೂಕು ಆಡಳಿತದಿಂದ ಭಕ್ತ ಕನಕದಾಸ, ಒನಕೆ ಓಬವ್ವ ಜಯಂತಿಯಲ್ಲಿ ಶುಕ್ರವಾರ ಮಾತನಾಡಿದರು.

    ಯಾವುದೇ ಪ್ರತಿಭಟನೆ ಇಲ್ಲದೆ ಯಾರ ಮನವಿಯೂ ಇಲ್ಲದೆ ಸದ್ದು-ಗದ್ದವಿಲ್ಲದೆ ಕೇಂದ್ರ ಸರ್ಕಾರ ಕೆಲವರಿಗೆ ಶೇ.10 ಮೀಸಲಾತಿಯನ್ನು ನೀಡಿತು. ಅಂಬೇಡ್ಕರ್ ಶಿಕ್ಷಣ ಸಂಘಟನೆ ಹೋರಾಟದ ಮೂಲಕವೇ ನಮ್ಮ ಹಕ್ಕುಗಳನ್ನು ಪಡೆಯಬೇಕೆಂದರು. ಮೇಲ್ಜಾತಿಯಲ್ಲಿ ಹುಟ್ಟಿದ ಬಸವಣ್ಣನವರು ಅದನ್ನು ತೊರೆದು ದಲಿತ, ಹಿಂದುಳಿದವರೊಡನೆ ಸೇರಿ ಕಾಯಕ, ದಾಸೋಹದ ಮಹತ್ವವನ್ನು ಸಾರಿದರು. ಮೂರು ವರ್ಷಗಳಲ್ಲಿ 12.6ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾಗಿ ಶಿಕ್ಷಣ ಇಲಾಖೆ ಅಂಕಿಅಂಶ ನೀಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

    ಕನಕದಾಸರು ಮೂರು ನೆಲೆಗಳಲ್ಲಿ ಗುರುತಿಸಿಕೊಂಡಿದ್ದಾರೆ ಭಕ್ತ, ದಾಸ, ಕವಿ ಆದರೆ, ನಾವು ಭಕ್ತ ಮತ್ತು ದಾಸರನ್ನಷ್ಟೆ ನೋಡಿದ್ದೇವೆ ಆದರೆ, ಅವರ ಕವಿ ಮನಸ್ಸನ್ನು ನೋಡಿಲ್ಲ. ಉಡುಪಿಯ ಶ್ರೀಕೃಷ್ಣ ಮಂದಿರದಲ್ಲಿ ಕನಕದಾಸರ ಭಕ್ತಿಗೆ ಕಲ್ಲು ತಿರುಗಿದ್ದಲ್ಲ ವ್ಯವಸ್ಥೆ ತಿರುಗಿದ್ದು. ಇದರ ಹಿಂದೆ ಕನಕದಾಸರು ವೈದಿಕಶಾಹಿ ವಿರುದ್ಧ ಹೋರಾಟ ನಡೆಸಿದ್ದರ ತೀವ್ರತೆ ನಮಗೆ ಅರ್ಥವಾಗುವುದಿಲ್ಲ. ಬುದ್ಧ, ಬಸವ ಅಂಬೇಡ್ಕರ್ ಅವರ ಕ್ರಾಂತಿಗಳನ್ನೂ ವಿಮುಖಗೊಳಿಸಬಲ್ಲ ಶಕ್ತಿ ಪುರೋಹಿತಶಾಹಿಗೆ ಇದೆ ಎಂದರು. ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್, ಬಿಇಒ ಮೈಲೇಶ್ ಬೇವೂರು, ಪುರಸಭೆ ಅಧ್ಯಕ್ಷೆ ಅನಿತಾ ವಸಂತ್‌ಕುಮಾರ್, ವಿಜಯ್‌ಕುಮಾರ್ ಮಾತನಾಡಿದರು.

    ಕೆಎಎಸ್ ಉತ್ತೀರ್ಣಗೊಂಡ ನೂತನ ಅಧಿಕಾರಿಗಳು, ಹೆಚ್ಚು ಅಂಕ ಪಡೆದ ತಾಲೂಕಿನ ಹಾಲುಮತ ವಿದ್ಯಾರ್ಥಿಗಳು ಹಾಗೂ ಕುರುಬ ಸಮಾಜದ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಸತ್ಯಪ್ಪ, ತಾಪಂ ಇಒ ಎಚ್.ಷಡಕ್ಷರಯ್ಯ, ಒನಕೆ ಓಬವ್ವ ಸಂಘದ ಅಧ್ಯಕ್ಷ ಸಿ.ಅಶೋಕ್, ವಾಡಾ ಅಧ್ಯಕ್ಷ ಕರಡಿ ಯರ‌್ರಿಸ್ವಾಮಿ, ಸರ್ಕಾರಿ ನೌಕರರ ಸಂಘದ ತಾ.ಅಧ್ಯಕ್ಷ ಸಿ.ಪರಶುರಾಮ, ವಾಲ್ಮೀಕಿ ಸಮಾಜದ ಮುಖಂಡ ನವಲೂಟಿ ಜಯಣ್ಣ, ಕುರುಬ ಸಮಾಜದ ಮುಖಂಡರಾದ ವಣಿಕೇರಿ ಸುರೇಶ್, ಜಿಪಂ ಮಾಜಿ ಸದಸ್ಯೆ ಸೌಭಾಗ್ಯ ತಿರುಮಲ, ಕೆ.ವಿ.ಈರಣ್ಣ, ಸುಮಂಗಳಮ್ಮ ಸದಾಶಿವ, ನೀಲಕಂಠ, ವಣಿಕೇರಿ ರವಿ, ಗುರುಪಾದಪ್ಪ, ಆರ್‌ಎಸ್‌ಎಸ್‌ಎನ್‌ನ ಶಿವಲಿಂಗಪ್ಪ, ಕೆ.ಬಿ.ವಸಿಗೇರಪ್ಪ, ದುರುಗಮ್ಮ ರಮೇಶ್, ಈರಮ್ಮ, ಶಂಕರಪ್ಪ ಇತರರಿದ್ದರು.

    ಮೆರವಣಿಗೆ: ಇದಕ್ಕೂ ಮುನ್ನ ಪಟ್ಟಣದ ಕನಕ ಭವನದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಈ.ತುಕಾರಾಮ್ ಮಾತನಾಡಿ, ಕನಕ ಭವನ ನಿರ್ಮಾಣಕ್ಕೆ ಎರಡು ಕೋಟಿ ರೂ.ಕಾಯ್ದಿರಿಸಲಾಗಿದೆ ಎಂದರು. ಬಿಜೆಪಿ ಮುಖಂಡ ಕೆ.ಎಸ್.ದಿವಾಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts