More

    80 ವರ್ಷ ಮೀರಿದವರು ಪೋಸ್ಟಲ್ ಬ್ಯಾಲೆಟ್ ಮೂಲಕ ವೋಟ್ ಮಾಡಲಿ

    ಸಂಡೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗುತ್ತಿದ್ದು, ಆಸಕ್ತರು ಪೋಸ್ಟಲ್ ಬ್ಯಾಲೆಟ್ ಮೂಲಕ ವೋಟ್ ಮಾಡಬಹುದು ಎಂದು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ತಿಳಿಸಿದರು.

    ತಾಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಧ ಪಕ್ಷದ ಮುಖಂಡರೊಂದಿಗಿನ ಸಭೆಯಲ್ಲಿ ಮಾತನಾಡಿದರು. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,21,183 ಮತದಾರರಿದ್ದು 1,10,859 ಪುರಷರು, 1,10,298 ಮಹಿಳಾ ಮತದಾರರು, 26 ತೃತೀಯ ಲಿಂಗಿಗಳು, ಮಿಲಿಟರಿ ಮತ್ತಿತರ ಸೇವೆಗಳಲ್ಲಿನ 55ಜನ ಇದ್ದು, ಆನ್‌ಲೈನ್ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

    100 ವರ್ಷ ದಾಟಿದ 42, 90 ರಿಂದ 99 ವಷರ್ದ 531, 80 ವರ್ಷ ದಾಟಿದ 2507, 2645 ಅಂಗವಿಕಲ ಮತದಾರರು ಇಲ್ಲಿದ್ದಾರೆ. ಅಂಗವಿಕಲರಿಗೆ ರ‌್ಯಾಂಪ್ ಇತರೆ ಸೌಲಭ್ಯ ಒದಗಿಸಲಾಗುವುದು. 6300 ಜನ ನೂತನವಾಗಿ ಸೇರ್ಪಡೆಗೊಂಡಿದ್ದಾರೆ. ಹೊಸ ಸೇರ್ಪಡೆಗೆ ಏ.1ರ ತನಕ ಅವಕಾಶವಿದ್ದು ಪಕ್ಷಗಳ ಮುಖಂಡರು ಈ ಬಗ್ಗೆ ಜಾಗೃತಿ ಮೂಡಿಸಲು ಸಹಕರಿಸಲಿ ಎಂದರು.

    ಕ್ಷೇತ್ರದಲ್ಲಿ ಒಟ್ಟು 250 ಬೂತ್‌ಗಳ ನಿರ್ಮಾಣ ಮಾಡಲಾಗುವುದು. ಒಟ್ಟು 59 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಶ್ರೀರಾಮಶೆಟ್ಟಿಹಳ್ಳಿ, ವೆಂಕಟಗಿರಿ, ಗಂಗಲಾಪುರ, ದಿಕ್ಕಲದಿನ್ನಿ(ಮೋತಲಕುಂಟ)ಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಚುನಾವಣೆ ಕಾರ್ಯಗಳಲ್ಲಿ ನಿರತರಾದ ಬಿಎಲ್‌ಒಗಳಿಗೆ ಕಿಟ್‌ಗಳನ್ನು ವಿತರಿಸಲಾಯಿತು.

    ಉಪತಹಸೀಲ್ದಾರ್ ಕೆ.ಎಂ.ಶಿವಕುಮಾರ್, ಸಿದ್ದಯ್ಯ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್, ಕಾಂಗ್ರೆಸ್‌ನ ಸತ್ಯಪ್ಪ, ಜಿಲಾನ್, ಜೆಡಿಎಸ್ ಮುಖಂಡರಾದ ಹೊನ್ನೂರಸಾಬ್, ಬಿಜೆಪಿ ತಾರಾನಗರ ಮಂಜುನಾಥ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷನಾಗಿ ಕಿರಣ್ ಕುಮಾರ್, ಪ್ರತಿನಿಧಿಗಳಾಗಿ ಬಾಲಸುಬ್ರಮಣ್ಯ, ಖಲಂದರ್ ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts