More

    ಡಿಸೆಂಬರ್‌ವರೆಗೆ ಅರ್ಜಿ ಸಲ್ಲಿಕೆಗೆ ಕಾಲಾವಕಾಶ, ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಮಾಹಿತಿ

    ಸಂಡೂರು: ಬಗರ್‌ಹುಕುಂ ಸಮಿತಿಗೆ ಈವರೆಗೆ 10,580 ಅರ್ಜಿ ಬಂದಿದ್ದು ಅದರಲ್ಲಿ 593ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಎಂದು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಹೇಳಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ 2ನೇ ಬಗರ್ ಹುಕುಂ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಅರಣ್ಯ, ಹಳ್ಳಿ, ಗೋಮಾಳ, ರಾಳ್ಳಗುಡ್ಡ, ವಂಕ ಪರಂಪೋಕು ಜಾಗದಲ್ಲಿ ಹಾಕಿದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಮತ್ತೊಂದೆಡೆ ಸರ್ಕಾರ ಡಿಸೆಂಬರ್‌ವರೆಗೆ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ನೀಡಿದೆ ಎಂದರು.

    ಬಗರ್‌ಹುಕುಂ ಸಮಿತಿ ಅಧ್ಯಕ್ಷ, ಶಾಸಕ ಈ.ತುಕಾರಾಮ್ ಮಾತನಾಡಿ, ಶಾಲೆ, ಆರೋಗ್ಯಕೇಂದ್ರ, ಅಂಗನವಾಡಿ, ನಿವೇಶನ, ಸೃಜನೆ ಸೇರಿ ಸಾರ್ವಜನಿಕರ ಉಪಯೋಗಕ್ಕೆ ಬೇಕಾದ ಜಾಗಗಳನ್ನು ಹದ್ದುಬಸ್ತು ಮಾಡಿಕೊಂಡು ಮುಂದಿನ 30ವರ್ಷಗಳ ಅವಧಿಗೆ ಜಾಗ ಉಳಿಸಿಕೊಂಡು ಬಗರ್‌ಹುಕುಂ ಅರ್ಜಿಗಳನ್ನು ಪರಿಗಣಿಸಬೇಕು. ಸಲ್ಲಿಕೆಯಾದ ಅರ್ಜಿಗಳ ಪೈಕಿ ನಿಯಮ ಮೀರಿದ ಅರ್ಜಿಗಳನ್ನು ತಿರಸ್ಕೃತ ಮಾಡಿ ಮುಂದಿನ ಸಭೆಯನ್ನು ಅ.10ಕ್ಕೆ ನಡೆಸೋಣ ಎಂದರು.

    ಸಮಿತಿ ಸದಸ್ಯರಾದ ಅಂತಾಪುರದ ಎಸ್.ಶಂಕರ್, ಎನ್.ಎಂ.ವಿಜಯಲಕ್ಷ್ಮೀ, ಸಿದ್ದನಗೌಡ, ಎಸ್ಟಿ ಅಧಿಕಾರಿ ರವಿಕುಮಾರ್, ಗ್ರೇಡ್-2 ತಹಸೀಲ್ದಾರ್ ಕೆ.ಎಂ.ಶಿವಕುಮಾರ್, ಕಂದಾಯ ನಿರೀಕ್ಷಕ ಯರ‌್ರಿಸ್ವಾಮಿ, ಪ್ರಭಾರ ನಿರೀಕ್ಷಕ ಕೆ.ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts