More

    ಆರೋಗ್ಯವಂತ ಗ್ರಾಮ ರೂಪಿಸಲು ಕೈಜೋಡಿಸಿ

    ಸಂಡೂರು: ಮನೆಯ ಸುತ್ತಲಿನ ಸ್ವಚ್ಛತೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕಿದ್ದು, ಆರೋಗ್ಯವಂತ ಗ್ರಾಮ ರೂಪಿಸಲು ಸರ್ವರೂ ಕೈ ಜೋಡಿಸೋಣ ಎಂದು ಗ್ರಾಪಂ ಅಧ್ಯಕ್ಷೆ ಎನ್.ರತ್ನಮ್ಮ ಹೇಳಿದರು.

    ತಾಲೂಕಿನ ಯು.ರಾಜಾಪುರ ಗ್ರಾಪಂ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಹಳ್ಳಿಯ ಜನರ ಆರೋಗ್ಯಮಟ್ಟ ಹೆಚ್ಚಿಸಲು ಆಸ್ಪತ್ರೆಗಳು ಉತ್ತಮ ಸೇವೆಗಳನ್ನು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಪಂಚಾಯತ್ ರಾಜ್ ಇಲಾಖೆಯೂ ಕೈ ಜೋಡಿಸುತ್ತದೆ. ಜನರಿಗೆ ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ಚಿಕಿತ್ಸಾ ವಿಧಾನಗಳು, ದುಶ್ಚಟಗಳಿಗೆ ಕಾರಣಗಳು ಮತ್ತು ಉತ್ತಮ ಜೀವನ ಶೈಲಿ ಅಳವಡಿಕೆ ಕುರಿತು ಮಾಹಿತಿ ನೀಡಿದರು. ಅಂಗನವಾಡಿ ಮೇಲ್ವಿಚಾರಕಿ ಚೇತನಾ, ಆಪ್ತ ಸಮಾಲೋಚಕ ಪ್ರಶಾಂತ್ ಮಾತನಾಡಿದರು.

    ಪಿಡಿಒ ದುರುಗಪ್ಪ, ಕಾರ್ಯದರ್ಶಿ ಮಹಾದೇವ, ಗ್ರಾಪಂ ಸದಸ್ಯ ರಮೇಶ್, ವೈಜಕುಮಾರ್, ಸಿದ್ದಯ್ಯ, ತಿಪ್ಪೇಸ್ವಾಮಿ, ಸ್ವ ಸಹಾಯ ಗುಂಪಿನ ಪ್ರತಿನಿಧಿಗಳಾದ ಕವಿತಾ, ಸರಸ್ವತಿ, ಗೌಸಿಯಾ, ಕೃಷ್ಣವೇಣಿ, ಶಿವಮ್ಮ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ, ಸರಿತಾ, ಬಸಮ್ಮ, ಪದ್ಮಾವತಿ, ಆರೋಗ್ಯ ಸುರಕ್ಷತಾಧಿಕಾರಿ ರತ್ಮಮ್ಮ, ಸಿಎಚ್‌ಒ ಮೇಘನಾ, ಆಶಾ ರತ್ನಮ್ಮ, ಪುಷ್ಪವತಿ, ಹೊನ್ನೂರಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts