More

    ಸಿಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ದೆಹಲಿಯಲ್ಲಿ ಡ್ರಗ್ಸ್​ ಪ್ರಕರಣದ ಪ್ರಮುಖ ಆರೋಪಿ ಬಂಧನ!

    ಬೆಂಗಳೂರು: ಮಾದಕ ಜಾಲಕ್ಕೆ ಸ್ಯಾಂಡಲ್​ವುಡ್​ ನಂಟಿದೆ ಎಂಬ ಆರೋಪ ಕೇಳಿಬಂದ ಕೂಡಲೇ ನಶೆ ಲೋಕದ ಬೆನ್ನು ಬಿದ್ದಿರುವ ಸಿಸಿಬಿ ಪೊಲೀಸರು ಮಾಫಿಯಾದಲ್ಲಿ ಭಾಗಿಯಾಗಿರುವವರನ್ನು ಒಬ್ಬೊಬ್ಬರಾಗಿಯೇ ತಮ್ಮ ಕಸ್ಟಡಿಗೆ ತೆಗೆದುಕೊಳ್ಳುತ್ತಿದ್ದಾರೆ.

    ಈಗಾಗಲೇ ನಟಿ ರಾಗಿಣಿ ಹಾಗೂ ಆಪ್ತ ರವಿಶಂಕರ್​ ಮತ್ತು ನಟಿ ಸಂಜನಾ ಆಪ್ತ ರಾಹುಲ್​ನನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಇದೀಗ ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿದ್ದಾರೆ.

    ವೀರೇನ್ ಖನ್ನಾ ಬಂಧಿತ ಆರೋಪಿ. ಈತ ಬೆಂಗಳೂರಿನ ಬಹುತೇಕ ಪೇಜ್-3 ಪಾರ್ಟಿಗಳ ಆಯೋಜಕ ಎನ್ನಲಾಗಿದೆ. ದೆಹಲಿ ಮೂಲದ ವೀರೇನ್ ವ್ಯಾಸಂಗಕ್ಕೆಂದು ಬೆಂಗಳೂರಿಗೆ ಬಂದು ಪ್ರತಿಷ್ಠಿತ ಆರ್‌ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ. ವಿದ್ಯಾಭ್ಯಾಸ ಮುಗಿದ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ.

    ಇದನ್ನೂ ಓದಿ: ಓರ್ವ ಯುವತಿಗಾಗಿ 535 ಕಿ.ಮೀ. ಚಲಿಸಿತು ರೈಲು- ಅಧಿಕಾರಿಗಳು, ಸಿಬ್ಬಂದಿ ಸುಸ್ತೋ ಸುಸ್ತು!

    ಇದರ ನಡುವೆ ಇವೆಂಟ್ ಮ್ಯಾನೇಜ್‌ಮೆಂಟ್‌ ಶುರು ಮಾಡಿದ್ದ ವೀರೇನ್, ಬಹುತೇಕ ಸ್ಟಾರ್ ಹೋಟೆಲ್‌ಗಳಲ್ಲಿ ಪಾರ್ಟಿ ಆಯೋಜಿಸುತ್ತಿದ್ದ. ಈ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡ್ತಿದ್ದ ಎಂದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ದೆಹಲಿಯಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.

    ಇಂದು ಬೆಂಗಳೂರಿಗೆ ಕರೆತಂದ ಸಿಸಿಬಿ ಅಧಿಕಾರಿಗಳು ವೀರೇನ್​ನನ್ನು ಕೋರ್ಟ್‌ಗೆ ಹಾಜರು ಪಡೆಸಿದ್ದಾರೆ. ಈತನೂ ಸಹ ಡ್ರಗ್ಸ್​ ಪ್ರಕರಣದಲ್ಲಿನ ಓರ್ವ ಪ್ರಮುಖ ಆರೋಪಿಯಾಗಿದ್ದಾನೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಮತ್ತೆ ಸಿಸಿಬಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈತ ದೆಹಲಿಯ ಪ್ರತಿಷ್ಠಿತ ವಿವಿಐಪಿಗಳು ವಾಸವಿರುವ ಏರಿಯಾದಲ್ಲಿ ಮನೆ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

    ‘ಮಾದಕ’ ನಟಿ ರಾಗಿಣಿ ಬಂಧನ: ಮನೆಯಲ್ಲಿ ಡ್ರಗ್ಸ್ ಪತ್ತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts