More

    22 ತಿಂಗಳ ಬಳಿಕ ಮರಳು ಗಣಿಗಾರಿಕೆಗೆ ಅನುಮತಿ

    ಕಾರವಾರ: 22 ತಿಂಗಳ ಬಳಿಕ ಜಿಲ್ಲೆಯಲ್ಲಿ ಅಧಿಕೃತವಾಗಿ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ಕಾಳಿ, ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿ ನದಿಗಳ ಒಟ್ಟು 19 ಮರಳು ದಿಬ್ಬಗಳಲ್ಲಿ ಒಟ್ಟು 12.44 ಲಕ್ಷ ಮೆಟ್ರಿಕ್ ಟನ್ ಮರಳು ತೆಗೆಯಲು 137 ಸಾಂಪ್ರದಾಯಿಕ ಮರಳು ಗುತ್ತಿಗೆದಾರರಿಗೆ ಅವಕಾಶ ನೀಡಲಾಗಿದೆ.


    ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ )ಆದೇಶವೊಂದನ್ನು ಆಧರಿಸಿ 2022 ರ ಮೇ ತಿಂಗಳಿAದ ಉತ್ತರ ಕನ್ನಡದಲ್ಲಿ ಮರಳು ಗಣಿಗಾರಿಕೆಯನ್ನು ಸ್ಥಗಿತ ಮಾಡಲಾಗಿತ್ತು. ರಾಜ್ಯ ಸಿಆರ್‌ಜಡ್ ಪ್ರಾಧಿಕಾರವು ಉತ್ತರ ಕನ್ನಡದ ನದಿಗಳಲ್ಲಿ ಮರಳು ತೆಗೆಯಲು 2023 ರ ಅಂತ್ಯದಲ್ಲಿ ಅನುಮತಿ ನೀಡಿದರೂ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅನುಮತಿಸಿರಲಿಲ್ಲ. ಇದರಿಂದ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಅಽಕೃತ ಅನುಮತಿಯೇ ಇರಲಿಲ್ಲ. ಇದರಿಂದ ಅಕ್ರಮ ಮರಳು ಗಣಿಗಾರಿಕೆ ವಿಪರೀತ ಹೆಚ್ಚಿತ್ತು. ಪ್ರತಿ ಲೋಡ್ ಮರಳಿನ ಬೆಲೆ 30 ಸಾವಿರ ರೂ.ಗೆ ಏರಿಕೆಯಾಗಿದ್ದು, ನಿರ್ಮಾಣ ಕಾರ್ಯಗಳಿಗೆ ಸಮಸ್ಯೆಯಾಗಿತ್ತು.
    ಮರಳು ಗಣಿಗಾರಿಕೆ ಅಽಕೃತಗೊಳಿಸಲು ಫೆಬ್ರವರಿಯಲ್ಲಿ ನಡೆದ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ನಿರ್ಧರಿಸಿತ್ತು. ಅದನ್ನಾಧರಿಸಿ ಕಳೆದ ವಾರದಿಂದ ಮರಳು ತೆಗೆಯಲು ಪರವಾನಗಿ ನೀಡಲಾಗುತ್ತಿದೆ. ಪ್ರತಿ ಟನ್ ಮರಳಿಗೆ ಈ ಹಿಂದೆ 60 ರೂ. ರಾಜಧನ ಇರುವುದನ್ನು 80 ರೂ.ಗೆ ಹೆಚ್ಚಿಸಲಾಗಿದೆ. ಪ್ರತಿ ಪಾಸ್‌ಗೆ ಇರುವ ರಾಜಧನವನ್ನು 1200 ರಿಂದ 1300 ರೂ.ಗೆ ಹೆಚ್ಚಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆ ತಡೆಯಲು ಕ್ರಮ ವಹಿಸಲಾಗಿದೆ. ಹೊನ್ನಾವರದಲ್ಲಿ ಕೆಲವೆಡೆ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದ ಮಾರ್ಗಗಳಲ್ಲಿ ಜೆಸಿಬಿಯಿಂದ ಅಗಳ ಹೊಡೆಸಿ ರಸ್ತೆಯನ್ನೇ ಬಂದ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
    ಯಂತ್ರ ಬಳಕೆಗೆ ಅವಕಾಶವಿಲ್ಲ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶವಿದೆ. ಆದರೆ, ಕಾರವಾರದಲ್ಲಿ ಯಂತ್ರವನ್ನು ಬಳಸಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಅದನ್ನು ಬಂದ್ ಮಾಡಬೇಕು ಎಂದು ಕೆಲವು ಕಾರ್ಮಿಕರು ಜಿಲ್ಲಾಽಕಾರಿಗೆ ದೂರು ನೀಡಿದ್ದಾರೆ.



    ಹಿಂದೆ ಎನ್‌ಜಿಟಿ ನೀಡಿದ ಕರಡು ಆದೇಶವನ್ನಾಧರಿಸಿ ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ಸ್ಥಗಿತ ಮಾಡಲಾಗಿತ್ತು. ಅದರ ಮೇಲೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹಾಗಾಗಿ ಮರಳು ಗಣಿಗಾರಿಕೆಯನ್ನು ಮರು ಪ್ರಾರಂಭಿಸಲು ಯಾವುದೇ ತೊಂದರೆ ಇಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ರಾಜ್ಯ ಸಿಆರ್‌ಜಡ್ ಸಮಿತಿ ನೀಡಿದ ಅನುಮತಿಯನ್ನೂ ಪಾಲಿಸಿ, ಸರ್ಕಾರಕ್ಕೆ ರಾಜಧನ ಬರಲಿದೆ ಹಾಗೂ ಜಿಲ್ಲೆಯ ಮರಳು ಸಮಸ್ಯೆ ಪರಿಹಾರವಾಗಲಿದೆ ಎಂಬ ನಿಟ್ಟಿನಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಈ ನಿರ್ಣಯ ಕೈಗೊಂಡಿದೆ.
    ಆಶಾ ಎಸ್.ಜಿ.
    ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts