More

    ಮೇ16ರಿಂದ 18ರ ವರೆಗೆ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿಯ ಸನದುದಾನ

    ಮೇ16ರಿಂದ 18ರ ವರೆಗೆ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿಯ ಸನದುದಾನ

    ಮಂಗಳೂರು: ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮ ನಚ್ಚಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆಯ 8ನೆ ವಾರ್ಷಿಕ ಹಾಗೂ 3ನೆ ಸನದುದಾನ ಸಮ್ಮೇಳನ ಮೇ 16ರಿಂದ 18ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ಮಅ್ರೂಫ್ ಸುಲ್ತಾನಿ ಆತೂರು ಹೇಳಿದರು.

    ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮೇ 16ರಂದು ಬೆಳಗ್ಗೆ ಮರ್ಹೂಂ ಅಸ್ಸಯ್ಯಿದ್ ಸಾದಾತ್ ತಂಙಳ್ ಕರುವೇಲು ಹಾಗೂ ನಚ್ಚಬೆಟ್ಟು ದರ್ಗಾ ಝಿಯಾರತ್‌ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಸಂಜೆ 7 ಗಂಟೆಗೆ ಅಸ್ಸಯ್ಯದ್ ಶಿಹಾಬುದ್ದೀನ್ ಅಹ್ದಲ್ ಅಲ್ ಹಾಶಿಮಿ ಮುತ್ತನ್ನೂರು ತಂಙಳ್‌ರ ನೇತೃತ್ವದಲ್ಲಿ ದಿಕ್ಸ್ ಹಲ್ಕಾ ನಡೆಯಲಿದ್ದು, ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಉದ್ಭೋದನೆ ಮಾಡಲಿದ್ದಾರೆ. 17ರಂದು ರಾತ್ರಿ ಅಸ್ಸಯ್ಯದ್ ತ್ವಾಹ ತಂಙಳ್ ಹಾಗೂ ಸಂಗಡಿಗರಿಂದ ಬುರ್ದಾ ಮಜ್ಲಿಸ್ ನಡೆಯಲಿದೆ. ಅಸ್ಸಯ್ಯಿದ್ ಮುಡೀಸ್ ತಂಙಳ್ ಚೇಲಕ್ಕರ ತೃಶೂರ ದುವಾಶೀರ್ವಚನ ನೀಡಲಿದ್ದಾರೆ ಎಂದರು.

    18ರಂದು ಬೆಳಗ್ಗೆ 10 ಗಂಟೆಗೆ ಫುರ್ಖಾನಿ ಸಂಗಮ ಹಾಗೂ ಪದವಿ ವಸ್ರ ವಿತರಣೆ ನಡೆಯಲಿದ. ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ಪೊಸೋಟ ವಿಷಯ ಮಂಡನೆ ಮಾಡಲಿದ್ದಾರೆ. 144 ಮಂದಿಗೆ ಪದವಿ ಪ್ರಧಾನ ನಡೆಯಲಿದೆ. ಸಂಜೆ 4 ಗಂಟೆಗೆ ಗಲ್ಫ್ ಮೀಟ್ ನಡೆಯಲಿದೆ. ಅಥಾವುಲ್ಲಾ ಹಿಮಮಿ ಕುಪ್ಪೆಟ್ಟಿ, ಅಬೂಬಕರ್ ಮದನಿ ಹೊಸಗಂಡಿ ಜುಬೇಲ್ ಮಾತನಾಡಲಿದ್ದಾರೆ. ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ರಾಜ್ಯ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಗಮವನ್ನು ಕೆ.ಆಸ್. ಆಟ್ಟಕ್ಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು. ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಬದ್ರುಸ್ಸಾದಾತ್ ಇಬ್ರಾಹೀಂ ಖಲೀಲುಲ್‌ಬುಖಾರಿ ತಂಙಳ್ ಕಡಲುಂಡಿ ಸನದುದಾನ ಮಾಡಲಿದ್ದು, ಅಸ್ಸಯ್ಯಿದ್ ನೂರುಸ್ಸಾದಾತ್ ಬಾಯಾರ್ ತಂಙಳ್ ಸನದುದಾನ ಭಾಷಣ ಮಾಡಲಿದ್ದಾರೆ. ಕೆ.ಪಿ. ಹುಸೇನ್ ಸಅದಿ ಕೆಸಿರೋಡ್, ಟಿ.ಎಂ. ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಅಸ್ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ, ಅಸ್ಸಯ್ಯಿದ್ ಕೂರಿಕ್ಕುಝಿ ತಂಙಳ್ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಮುಖ ಉಲಮಾ, ಉಮಾರಗಳು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

    ಎಸ್‌ವೈಎಸ್ ಜಿಲ್ಲಾ ಉಪಾಧ್ಯಕ, ಬಶೀರ್ ಮದನಿ ಕೂಳೂರು, ಸಂಸ್ಥೆಯ ಕಾರ್ಯದರ್ಶಿ ಹಸನ್ ಝುಹ್ರಿ ಮಂಗಳಪೇಟೆ, ಸ್ವಾಗತ ಸಮಿತಿಯ ಸಂಚಾಲಕ ಸಲೀಂ ಕನ್ಯಾಡಿ, ಸುನ್ನಿ ಯುವಜನ ಸಂಘದ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts