More

    ಹಸಿದ ನಾಯಿಗಳ ಸಹಾಯಕ್ಕೆ ನಿಂತ ಸಂಯುಕ್ತಾ

    ಕರೊನಾ ವೈರಸ್‌ನಿಂದ ಜನ ಪರದಾಡುತ್ತಿದ್ದಾರೆ. ಅಗತ್ಯ ವಸ್ತುಗಳು ಸಿಗದೇ ಕಷ್ಟಪಡುತ್ತಿದ್ದಾರೆ. ಜನರೇ ಇಂಥ ಸ್ಥಿತಿಯಲ್ಲಿರುವಾಗ ಪ್ರಾಣಿಗಳ ಪಾಡಂತೂ ಹೇಳತೀರದು. ಕಳೆದ ಹಲವು ದಿನಗಳಿಂದ ಹಸಿದಿರುವ ಬೀದಿ ನಾಯಿಗಳ ನೆರವಿಗೆ ಇದೀಗ ನಟಿ ಸಂಯುಕ್ತಾ ಹೊರನಾಡು ನಿಂತಿದ್ದಾರೆ.

    ದೇಶವ್ಯಾಪಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದ ಸಂಯುಕ್ತಾ, ಶುಕ್ರವಾರ ಮನೆಯಿಂದ ಹೊರಬಂದು ಹಸಿದಿರುವ ಬೀದಿ ನಾಯಿಗಳಿಗೆ ಆಹಾರ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಸಂಯುಕ್ತಾ, ‘ಕಳೆದ ಒಂದು ವಾರದಿಂದ ಬೀದಿ ನಾಯಿಗಳು ಹಸಿದಿರುವುದನ್ನು ನೋಡಿ ಮನಕಲಕುವಂತಿತ್ತು. ಈಗ ಅವುಗಳ ಹೊಟ್ಟೆ ತುಂಬಿಸಿದ ಖುಷಿಯಿದೆ’ ಎಂದು ಹೇಳಿಕೊಂಡಿದ್ದಾರೆ.

    ಇನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದ ಸಲ್ಲಿಸಿರುವ ಸಂಯುಕ್ತಾ, ‘ನನ್ನನ್ನು ಟಾಸ್ಕ್ ಫೋರ್ಸ್‌ಗೆ ಸೇರಿಸಿಕೊಂಡಿದ್ದಕ್ಕೆ ಧನ್ಯವಾದಗಳು. ನಮ್ಮ ತಂಡ ಆ್ಯಕ್ಷನ್ ಮೋಡ್‌ನಲ್ಲಿದೆ. ಹಸಿದಿರುವ ನೂರಾರು ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

    ಕನ್ನಡದ ಬಹಳಷ್ಟು ನಟಿಯರು ಹೌಸ್ ಅರೆಸ್ಟ್ ಆಗಿ, ಮನೆಯಲ್ಲಿ ಟೈಂಪಾಸ್ ಮಾಡುವುದಕ್ಕೆ ಒದ್ದಾಡುತ್ತಿರುವಾಗ ಸಂಯುಕ್ತಾ ಮಾತ್ರ ಇಂಥದ್ದೊಂದು ಕೆಲಸ ಮಾಡುತ್ತಿರುವುದು ಶ್ಲಾಘನೀಯ.

    ಲಾಕ್​​ಡೌನ್​ ಸಂದರ್ಭದಲ್ಲಿ ನೀವೇನು ಮಾಡಬಹುದು? ಡಿಬಾಸ್​ ನೀಡಿದ್ದಾರೆ ಸಣ್ಣ ಟಿಪ್ಸ್​!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts